13
February, 2026

A News 365Times Venture

13
Friday
February, 2026

A News 365Times Venture

ಕಚ್ಚಾ ತಂಬಾಕು ಮೇಲಿನ ಸುಂಕ ರದ್ದು, ಫೆ. 5ರಿಂದ ಹರಾಜು ಪುನರಾರಂಭ : ಸಂಸದ ಯದುವೀರ್.

Date:

 

ಮೈಸೂರು, ಫೆ. 3: ತಂಬಾಕು ಬೆಳೆಗಾರರಿಗೆ ಪೂರಕವಾಗುವ ರೀತಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಚ್ಚಾ ತಂಬಾಕು ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದರು, ಈಗಾಗಲೇ ಸಲ್ಲಿಸಿದ್ದ ಮನವಿಗೆ ಹಣಕಾಸು ಸಚಿವರು ಪುರಸ್ಕರಿಸಿ, ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದರು.

ಫೆಬ್ರವರಿ 5ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನರಾರಂಭ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಉತ್ಪಾದಿತವಲ್ಲದ ತಂಬಾಕಿನ (ಕಚ್ಚಾ) ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿ ಹಣಕಾಸು ಸಚಿವರು ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದಾರೆ ಎಂದರು.

ಫೆಬ್ರವರಿ 5ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನರಾರಂಭಗೊಳ್ಳಲಿದೆ. ಇದರಿಂದ ತಂಬಾಕು ಬೆಳೆಗಾರರು ಮತ್ತು ಈ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ನೆರವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

ಕಚ್ಚಾ ತಂಬಾಕಿನ ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸುವ ಗೆಜೆಟ್ ಅಧಿಸೂಚನೆ ಹೊರಡಿಸಿರುವುದರಿಂದ ರೈತರು ಮತ್ತು ವ್ಯಾಪಾರಿಗಳ ದೀರ್ಘಕಾಲೀನ ಬೇಡಿಕೆ ಈಡೇರಿದಂತಾಗಿದೆ. ತಂಬಾಕು ಮಾರುಕಟ್ಟೆಗೆ ಸ್ಥಿರತೆಯನ್ನು ತರುವ ನಿರೀಕ್ಷೆಯಿದೆ ಎಂದು ಯದುವೀರ್‌ ಒಡೆಯರ್‌ ವಿವರಿಸಿದರು.

ಈ ಸಕಾಲಿಕ ಕ್ರಮಗಳು ವ್ಯಾಪಾರದಲ್ಲಿ ನಿರಂತರತೆ ಒದಗಿಸುತ್ತದೆ. ರೈತರ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಸಾವಿರಾರು ತಂಬಾಕು ಬೆಳೆಯುವ ಕುಟುಂಬಗಳ ಜೀವನೋಪಾಯಕ್ಕೆ ಆದ್ಯತೆ ನೀಡಲಿದೆ ಎಂದರು.

ರೈತರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಕೃಷಿ ಸಮುದಾಯದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಸದಾ ಬದ್ಧನಾಗಿದ್ದೇನೆ ಎಂದು ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದರು.

key words: Duty on raw tobacco, abolished, auction, to resume, from Feb. 5, MP Yaduveer.

SUMMARY:

Duty on raw tobacco abolished, auction to resume from Feb. 5: MP Yaduveer.

The central BJP government is taking steps to support tobacco growers. In this regard, the duty on raw tobacco has been abolished, said Yaduveer Krishnadatta Chamaraja Wodeyar, MP from Mysore-Kodagu Lok Sabha constituency.

The MP, who issued a press statement in this regard, said that the Finance Minister has accepted the request already submitted and taken important decisions.

Steps have been taken to resume the tobacco market auction from February 5. He also said that the finance minister has issued a gazette notification abolishing the excise duty on unmanufactured tobacco (raw).

The post ಕಚ್ಚಾ ತಂಬಾಕು ಮೇಲಿನ ಸುಂಕ ರದ್ದು, ಫೆ. 5ರಿಂದ ಹರಾಜು ಪುನರಾರಂಭ : ಸಂಸದ ಯದುವೀರ್. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸರ್ಕಾರಕ್ಕೆ 1 ಸಾವಿರ ದಿನ: ನಾಳೆ ಸಾರ್ಥಕ ಕೆಲಸದ ಸಮರ್ಪಣಾ ಕಾರ್ಯಕ್ರಮ- ಸಚಿವ ಕೃಷ್ಣಭೈರೇಗೌಡ

ಗದಗ,ಫೆಬ್ರವರಿ,13,2026 (www.justkannada.in):  ‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 1 ಸಾವಿರ...

ಕುವೆಂಪು‌ ಜ್ಞಾನ ತಾಣ, ಶಿವಕುಮಾರ ಸ್ವಾಮೀಜಿ ವೃತ್ತ ಸಮನ್ವಯ ಅಭಿವೃದ್ಧಿಗೆ ಕೆ.ವಿ ಮಲ್ಲೇಶ್ ಒತ್ತಾಯ

ಮೈಸೂರು,ಫೆಬ್ರವರಿ,13,2026 (www.justkannada.in): ಮೈಸೂರಿನ‌ ಕುವೆಂಪು ನಗರದ ಹೃದಯಭಾಗದಲ್ಲಿ ಹದಿಮೂರು‌ ವರ್ಷಗಳ‌ ಹಿಂದೆ...

ವಿಜ್ಞಾನ, ಕಲಾವಿಭಾಗಗಳ ವಿದ್ಯಾರ್ಥಿಗಳಿಗೂ ಎಇಡಿಪಿ ಪದವಿ ಶಿಕ್ಷಣ- ಸಚಿವ ಎಂ.ಸಿ ಸುಧಾಕರ್

ಬೆಂಗಳೂರು,ಫೆಬ್ರವರಿ,13,2026 (www.justkannada.in): ಉದ್ಯೋಗ ಆಧಾರಿತ ಎಇಡಿಪಿ( ಅಪ್ರೆಂಟಿಸ್ ಶಿಪ್ ಎಂಬೆಡೆಡ್ ಡಿಗ್ರಿ...

ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ವರ್ಗಾವಣೆಗೆ ಸಿಎಂ ಪತ್ರ: ಶಾಸಕ ಸುನೀಲ್ ಕುಮಾರ್ ಹೊಸ ಬಾಂಬ್

ಬೆಂಗಳೂರು,ಫೆಬ್ರವರಿ,13,2026 (www.justkannada.in):  ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ  ಅಧಿಕಾರಿಯೊಬ್ಬರನ್ನು ವರ್ಗಾಯಿಸುವಂತೆ ಸಿಎಂ...