26
August, 2026

A News 365Times Venture

26
Wednesday
August, 2026

A News 365Times Venture

ಕಬಿನಿ ಜಲಾಶಯ ಭೂಮಿ ಅಡವಿಟ್ಟು ಸಾಲ ಪ್ರಕರಣ: ಸಮನ್ಸ್ ಜಾರಿ ಮಾಡಿದ ಕೋರ್ಟ್

Date:

ಮೈಸೂರು,ಜೂನ್,21,2025 (www.justkannada.in): ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕು ಬಿದರಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಭೂಮಿ ಅಡವಿಟ್ಟು ನೂರಾರು‌ ಕೋಟಿ ಸಾಲ ಪಡೆದಿದ್ದ ಪ್ರಕರಣ, ಕಬಿನಿ ಜಲಾಶಯದ ಹೆಸರಿನ ಆರ್ ಟಿಸಿ ಬದಲಿಸಿದ್ದ ಕೇಸ್ ಗೆ ಸಂಬಂಧಿಸಿದಂತೆ ಸುಭಾಷ್ ಪವರ್ ಮ್ಯಾನೇಜ್‌ಮೆಂಟ್ ವಿರುದ್ಧ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಪ್ರಕರಣ ಸಂಬಂಧ ವಕೀಲ ಬಾಲಚಂದ್ರ ಎಂಬುವವರು ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದು ಸುಭಾಷ್ ಪವರ್ ಮ್ಯಾನೇಜ್‌ಮೆಂಟ್ ಗೆ ಜೂನ್ 28 ನೇ ತಾರೀಖು ಖುದ್ದು ಹಾಜರಿಗೆ  ಕೋರ್ಟ್ ಸಮನ್ಸ್ ಜಾರಿಮಾಡಿದೆ. ಪ್ರತಿನಿಧಿತ್ವ ರೆಪ್ರೆಸೆಂಟಿಟಿವ್ ಕ್ಯಾರೆಕ್ಟರ್ ಸೂಟ್ ಅಡಿ ಒಎಸ್ ದಾಖಲು ಮಾಡಲಾಗಿದ್ದು, 74/2025 ಕೇಸ್ ನಂ. ಬಾಲಚಂದ್ರ v/s ಚೀಫ್ ಸೆಕ್ರೆಟರಿ, ಕರ್ನಾಟಕ ಸ್ಟೇಟ್ ಚೀಫ್ ಸೆಕ್ರೆಟರಿ, ಕಾವೇರಿ ನೀರಾವರಿ ನಿಗಮದ ಸೂಪರಿಡೆಂಟ್ ಇಂಜಿನಿಯರ್, ಚೀಫ್‌ ಇಂಜಿನಿಯರ್, ಎಕ್ಸಿಕ್ಯುಟಿವ್ ಎಂಜಿನಿಯರ್, ಕಬಿನಿ ಎಇಇ ಚಂದ್ರಶೇಖರ್, ಸುಭಾಷ್ ಪವರ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್, ಸೆಂದಿಲ್, ಸೀನಿಯರ್ ಮ್ಯಾನೇಜರ್, ತಹಶಿಲ್ದಾರ್ ಮೋಹನಕುಮಾರಿ ಅವರಿಗೆ  ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಕಬಿನಿ ಜಲಾಶಯದ ಹೆಸರಿನ ಆರ್ ಟಿಸಿಯಲ್ಲಿ ಸುಭಾಷ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಎಂದು ದಾಖಲೆ ಪಡೆದು ಸಾಲ ಪಡೆಯಲಾಗಿತ್ತು. ಈ‌ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿ ಬಳಿಕ ಆರ್ ಟಿಸಿ ಮರುಬದಲು, ನೂರಾರು ಕೋಟಿ ಸಾಲ ಪಾವತಿ ಮಾಡಲಾಗಿತ್ತು. ಈ ನಡುವೆ ಇದೀಗ ಜೂನ್ 28 ರಂದು ಕೋರ್ಟ್‌ಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.vtu

Key words: Mysore, Kabini Reservoir,  Land case, court, summons

The post ಕಬಿನಿ ಜಲಾಶಯ ಭೂಮಿ ಅಡವಿಟ್ಟು ಸಾಲ ಪ್ರಕರಣ: ಸಮನ್ಸ್ ಜಾರಿ ಮಾಡಿದ ಕೋರ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅನಧಿಕೃತ ನಿಲುಗಡೆ: 382 ವಾಹನಗಳಿಗೆ ನೋಟಿಸ್ ಜಾರಿ

ಮೈಸೂರು,ಆಗಸ್ಟ್,25,2026 (www.justkannada.in): ಮೈಸೂರು ನಗರದ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ...

ನಾನೀಗ ಸರ್ಕಾರದ ಮುಖ್ಯಸ್ಥನಲ್ಲ: ಆದರೂ ನಾನು ಒಳ ಮೀಸಲಾತಿ, ಸಾಮಾಜಿಕ ನ್ಯಾಯದ ಪರ- ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್‌, 25,2026 (www.justkannada.in): ನಾನೀಗ ಸರ್ಕಾರದ ಮುಖ್ಯಸ್ಥನಲ್ಲ. ಅಧಿಕಾರ ಇರಲಿ, ಇಲ್ಲದಿರಲಿ...

ಸದನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಂಗ್ರೆಸ್ ಪಲಾಯಾನ-ಆರ್.ಅಶೋಕ್

ಬೆಂಗಳೂರು,ಆಗಸ್ಟ್,25,2026 (www.justkannada.in):  ಅಧಿವೇಶನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸದನವನ್ನ ಬಂದ್ ಮಾಡಿ...

ರಾಯಚೂರು ಐ.ಐ.ಐ.ಟಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ AI ಉತ್ಕೃಷ್ಟತಾ ಕೇಂದ್ರ ಸ್ಥಾಪನೆ-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಆಗಸ್ಟ್,26,2026 (www.justkannada.in):  ರಾಜ್ಯದಲ್ಲಿ ಪರಿಪೂರ್ಣ ಕೈಗಾರಿಕಾ ಬೆಳವಣಿಗೆ ಸಾಧಿಸಲು ಸರಕಾರ ತೀರ್ಮಾನಿಸಿದ್ದು,...