ಬೆಂಗಳೂರು,ಮಾರ್ಚ್,18,2026 (www.justkannada.in): ರಾಜ್ಯದಲ್ಲಿ ಕಮರ್ಷಿಯಲ್ ಸಿಲಿಂಡರ್ ಅಭಾವವಿದೆ. ಹೋಟೆಲ್ ನವರು ಒಂದು ವಾರ ಸಹಿಸಿಕೊಳ್ಳಬೇಕು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಮನವಿ ಮಾಡಿದರು.
ಸಿಲಿಂಡರ್ ಅಭಾವ ಕುರಿತು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಪ್ರಸ್ತಾಪಿಸಿದರು. ಈ ಬಗ್ಗೆ ಉತ್ತರಿಸಿದ ಸಚಿವ ಕೆ.ಎಚ್ ಮುನಿಯಪ್ಪ, ಹೋಟೆಲ್ ಗಳಿಗೆ 1 ಸಾವಿರ ಗ್ಯಾಸ್ ಗಳನ್ನ ಮಾತ್ರ ಕೊಡಲು ಅವಕಾಶವಿದೆ. ಹೀಗಾಗಿ ಹೋಟೆಲ್ ಮಾಲೀಕರು 1 ವಾರ ಸಹಿಸಿಕೊಳ್ಳವೇಕು . ಯಾರಿಗೆ ಕೊಡಬೇಕು ಅಂತಾನೆ ನಮಗೆ ಗೊತ್ತಾಗುತ್ತಿಲ್ಲ ಎಂದರು.
ಇರಾನ್ ಜೊತೆ ಕೇಂದ್ರ ಸರ್ಕಾರ ಚರ್ಚಿಸಿ ಪ್ರಯತ್ನಿಸುತ್ತಿದೆ. 16 ಶಿಪ್ ಗಳು ಕ್ಯೂನಲ್ಲಿ ಇದೆ. ಅದು ಬಂದರೆ ಸಮಸ್ಯೆ ಬಗೆಹರಿಯುತ್ತದೆ. ನಾವು ಹೋಟೆಲ್ ಅಸೊಸಿಯೇಷನ್ ಜೊತೆ ಮಾತನಾಡಿದ್ದೇವೆ ಒಂದು ವಾರ ಸಹಿಸಿಕೊಂಡರೆ 15 ಸಾವಿರ ಸಿಲಿಂಡರ್ ಸಂಗ್ರಹಿಸಿ ಹಂಚಿಕೆ ಮಾಡುತ್ತೇವೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
Key words: Commercial cylinder, shortage, Minister, K.H. Muniyappa
The post ಕಮರ್ಷಿಯಲ್ ಸಿಲಿಂಡರ್ ಅಭಾವ: ಒಂದು ವಾರ ಸಹಿಸಿಕೊಳ್ಳಿ – ಸಚಿವ ಕೆ.ಎಚ್ ಮುನಿಯಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




