2
July, 2026

A News 365Times Venture

2
Thursday
July, 2026

A News 365Times Venture

ಕಲ್ಲುಕ್ವಾರಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ: ವರದಿ ಪಡೆದು ಸೂಕ್ತ ಕ್ರಮ – ಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು,ಜುಲೈ,2,2026 (www.justkannada.in):  ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದಪಟ್ಟಣದಲ್ಲಿ ಕಲ್ಲುಕ್ವಾರಿಯಲ್ಲಿ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಿಎಂ ಡಿಕೆ ಶಿವಕುಮಾರ್, ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕ್ರಷರ್ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟಿರುವುದು ತೀವ್ರ ದುಃಖವನ್ನುಂಟು ಮಾಡಿದೆ.

ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ, ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.

ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವ ರಕ್ಷಣೆ ಹಾಗೂ ಭದ್ರತೆ ಒದಗಿಸುವುದು ಕ್ವಾರಿ ಮಾಲೀಕರ ಕರ್ತವ್ಯವಾಗಿದೆ. ನಿಯಮ ಉಲ್ಲಂಘಿಸುವ ಕ್ವಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು  ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

 ವರದಿ ತರಿಸಿಕೊಂಡು ಕ್ರಮ

ಘಟನೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಮಾಗಡಿ ರಸ್ತೆಯಲ್ಲಿ 2 ಕ್ವಾರಿಯಲ್ಲಿ ದುರಂತ ಸಂಭವಿಸಿದೆ. ಬಂಡೆ ಕುಸಿತವಾಗಿ 7 ಕಾರ್ಮಿಕರು ಮೃತಪಟ್ಟಿದ್ದಾರೆಂದು ಮಾಹಿತಿ ಬಂದಿದೆ.  ಮೃತದೇಹಗಳು ಸಿಕ್ಕಿವೆ.   ಸ್ಥಳಕ್ಕೆ ಅಧಿಕಾರಿಗಳೂ ಭೇಟಿ  ನೀಡಿದ್ದಾರೆ. ಅಲ್ಲಿ ಸ್ಪೋಟ ಆಗಿಲ್ಲ ಎಂದು ಗೊತ್ತಾಗಿದೆ ಮಧ್ಯಾಹ್ನ  ವರದಿ ತರಿಸಿಕೊಳ್ಳುವೆ. ಕ್ವಾರಿ ಲೀಗಲ್ ಅಥವಾ ಅಕ್ರಮವಾಗಿ ನಡೆಸುತ್ತಿದ್ದಾರಾ ಅಂತಾ ಗೊತ್ತಾಗಬೇಕು. ನಿಯಮ ಪಾಲಿಸಬೇಕಾಗಿದೆ ಯಶವಂತಪುರ ಶಾಸಕರು ಮಾಹಿತಿ ನೀಡಿದ್ದಾರೆ.  ರಿಪೋರ್ಟ್ ತರಿಸಿಕೊಂಡು ನಾನು ಕ್ರಮ ತೆಗದುಕೊಳ್ಳುತ್ತೇನೆ  ಎಂದು ಹೇಳಿದರು.

Key words: Condolences, Workers, died, quarry, action, CM, DK Shivakumar

The post ಕಲ್ಲುಕ್ವಾರಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ: ವರದಿ ಪಡೆದು ಸೂಕ್ತ ಕ್ರಮ – ಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ಸಚಿವಾಲಯದ ಕಚೇರಿ ಉದ್ಘಾಟನೆ

ಬೆಂಗಳೂರು, ಜುಲೈ,2,2026 (www.justkannada.in):  ನಗರಾಭಿವೃದ್ಧಿ ಸಚಿವ  ಡಾ. ಯತೀಂದ್ರ ಸಿದ್ದರಾಮಯ್ಯ ಅವರು...

52 ಕ್ರಿಮಿನಲ್ ಕೇಸ್ ಗಳನ್ನ ಹಿಂಪಡೆಯುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ

ಬೆಂಗಳೂರು,ಜುಲೈ,2,2026 (www.justkannada.in): 52 ಕ್ರಿಮಿನಲ್ ಪ್ರಕರಣಗಳನ್ನ ಹಿಂಪಡೆಯುವ  ರಾಜ್ಯ ಸರ್ಕಾರದ ಕ್ರಮಕ್ಕೆ...

ಕಲ್ಲುಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಸ್ಥಳದಲ್ಲೇ ದುರ್ಮರಣ

ಬೆಂಗಳೂರು ದಕ್ಷಿಣ, ಜುಲೈ, 2, 2026 (www.justkannada.in):  ಕಲ್ಲುಕ್ವಾರಿಯಲ್ಲಿ ಬಂಡೆ ಕುಸಿದು...

ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಜುಲೈ,1,2026 (www.justkannada.in): ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ...