ಹಾಸನ, ಜುಲೈ 31,2026 (www.justkannada.in): ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿದ್ದ ಆದೇಶ ಎತ್ತಿಹಿಡಿದಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ದೆಹಲಿಯ ಎಸಿ ರೂಮ್ ಗಳಲ್ಲಿ ಕೂತು ಈ ನಿರ್ಧಾರವನ್ನ ತೆಗೆದುಕೊಳ್ಳುವ ಬದಲು, ಸಿಡಬ್ಲ್ಯುಎಂಎ ಸದಸ್ಯರು ಕರ್ನಾಟಕ ಮತ್ತು ತಮಿಳುನಾಡಿನ ಜಲಾಶಯಗಳಾದ ಕೆಆರ್ಎಸ್, ಹಾರಂಗಿ, ಕಬಿನಿ, ಹೇಮಾವತಿ ಮತ್ತು ಮೆಟ್ಟೂರು ಪ್ರದೇಶಗಳಿಗೆ ಭೇಟಿ ನೀಡಿ, ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ನಿರ್ಧರಿಸಿ ಎಂದು ಸಲಹೆ ನೀಡಿದರು.
ಕರ್ನಾಟಕದಲ್ಲಿ ಸದ್ಯ ಲಭ್ಯವಿರುವ 54ರಿಂದ 55 ಟಿಎಂಸಿ ನೀರಲ್ಲಿ, 10 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಉಳಿದ 44 ಟಿಎಂಸಿಯಲ್ಲಿ ಬೆಂಗಳೂರು ನಗರದ ಕುಡಿಯುವ ನೀರಿಗಾಗಿ 30 ಟಿಎಂಸಿ ಮತ್ತು ಪರಿಸರ ಸಂರಕ್ಷಣೆಗೆ 10 ಟಿಎಂಸಿ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ, ಮುಂದೆ ಹರಿಯುವ ನೀರನ್ನು ಆಧರಿಸಿ, ಅಂದಾಜು ಲೆಕ್ಕಾಚಾರದ ಮೇಲೆ ನೀರು ಬಿಡುಗಡೆ ಮಾಡಲು ಆದೇಶಿಸುವುದು ಸರಿಯಲ್ಲ ಎಂದು ಹೆಚ್ ಡಿಕೆ ಆಕ್ಷೇಪಿಸಿದ್ದಾರೆ.
Key words: Cauvery water, dispute, H.D. Kumaraswamy, CWMA
The post ಕಾವೇರಿ ನೀರು ಹಂಚಿಕೆ ವಿವಾದ: ಎಸಿ ರೂಮ್ ನಲ್ಲಿ ಕೂತು ತೀರ್ಮಾನ ಸರಿಯಲ್ಲ ಎಂದ ಹೆಚ್.ಡಿ. ಕುಮಾರಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




