25
August, 2026

A News 365Times Venture

25
Tuesday
August, 2026

A News 365Times Venture

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆ: CWRC ಆದೇಶ ಎತ್ತಿಹಿಡಿದ CWMA

Date:

ನವದೆಹಲಿ, ಆಗಸ್ಟ್, 25,2026 (www.justkannada.in):  ಕಾವೇರಿ ನದಿ ನೀರು ವಿವಾದಕ್ಕೆ  ಸಂಬಂಧಿಸಿದಂತೆ  ಕರ್ನಾಟಕಕ್ಕೆ ಮತ್ತೆ ಭಾರಿ ಹಿನ್ನಡೆಯಾಗಿದ್ದು, ಪ್ರತಿ ದಿನ ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿದ್ದ ಶಿಫಾರಸ್ಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ.

ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 9 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಲಾಗಿದೆ.  ನಿನ್ನೆ ಸಿಡಬ್ಲ್ಯುಆರ್ ಸಿ  ತಮಿಳುನಾಡಿಗೆ 9 ಸಾವಿರ ಕ್ಯೂಸೆಕ್ ನೀರು ಹರಿಸಲು ಶಿಫಾರಸ್ಸು ಮಾಡಿತ್ತು. ಇದನ್ನ ಪ್ರಶ್ನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಪರಿಶೀಲಿಸುವಂತೆ ಕರ್ನಾಟಕ ಮನವಿ ಮಾಡಿತ್ತು. ಆದರೆ ಸಿಡಬ್ಲ್ಯುಎಂಎ ಸಹ ಶಾಕ್ ನೀಡಿದೆ.

ಸಭೆಯಲ್ಲಿ ರಾಜ್ಯದಿಂದ ಎಸಿಎಸ್ (ಮುಖ್ಯ ಕಾರ್ಯದರ್ಶಿ) ಗೌರವ್ ಗುಪ್ತಾ ಹಾಗೂ ಕಾವೇರಿ ನೀರಾವರಿ ನಿಗಮ ಎಂಡಿ ಮಹೇಶ್ ಭಾಗಿಯಾಗಿದ್ದರು. ತಮಿಳುನಾಡಿನಿಂದ ನೀರಾವರಿ ಕಾರ್ಯದರ್ಶಿ ಪ್ರಶಾಂತ್, ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಂ ಭಾಗಿಯಾಗಿದ್ದರು.

Key words: state, Cauvery issue, CWMA, upholds, CWRC, order

The post ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆ: CWRC ಆದೇಶ ಎತ್ತಿಹಿಡಿದ CWMA appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

JustKannada ವರದಿಗೆ ಪಾಲಿಕೆ ಆಯುಕ್ತೆಯ ತಕ್ಷಣದ ಸ್ಪಂದನೆ: 24 ಗಂಟೆಯೊಳಗೆ ಅಪಾಯಕಾರಿ ಕೊಂಬೆ ತೆರವು

ಮೈಸೂರು. ಆಗಸ್ಟ್,25,2026 (www.justkannada.in): ನಗರದ ಚಾಮರಾಜಪುರಂ ಬಜ್ಜಣ್ಣ ಲೇನ್‌ ನ ಕೊಪ್ಪಲು...

KPSC ಹಗರಣ ತನಿಖೆ ಸಿಬಿಐಗೆ ವಹಿಸುವಂತೆ ಆಗ್ರಹ: ಸಿಎಂ ಗೃಹ ಕಚೇರಿ ಮುಂದೆ ABVP ಪ್ರತಿಭಟನೆ..

ಬೆಂಗಳೂರು,ಆಗಸ್ಟ್,25,2026 (www.justkannada.in): ಕೆಪಿಎಸ್ ಸಿಯಲ್ಲಿ ನಡೆದಿದೆ ಎನ್ನಲಾದ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ...

ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಮುಖ್ಯ ಶಿಕ್ಷಕಿ ಆಯ್ಕೆ: ಸಚಿವರಿಂದ ಅಭಿನಂದನೆ

ಶಿವಮೊಗ್ಗ,ಆಗಸ್ಟ್,22,2026 (www.justkannada.in): ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ (National Teachers Award-2026) ಯನ್ನು...

ಶಿವಮೊಗ್ಗ: KPS ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ

ಶಿವಮೊಗ್ಗ, ಆಗಸ್ಟ್,22,2026 (www.justkannada.in):  ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ರಾಜ್ಯ...