27
August, 2026

A News 365Times Venture

27
Thursday
August, 2026

A News 365Times Venture

ಕೆಂಪೇಗೌಡ ಏರ್​​​ಪೋರ್ಟ್​ಗೆ ಹುಸಿ ಬಾಂಬ್​ ಮೇಲ್ ಬೆದರಿಕೆ

Date:

ಬೆಂಗಳೂರು, ಜೂನ್,​ 19,2025 (www.justkannada.in):  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.

ಒಂದೇ ವಾರದಲ್ಲಿ ಇದು ಎರಡನೇ ಹುಸಿ ಬಾಂಬ್​ ಮೇಲ್ ಆಗಿದೆ. ಜೂ.13, 16ರಂದು ಎರಡು ಬಾಂಬ್​ ಬೆದರಿಕೆ ಇ-ಮೇಲ್ ಬಂದಿತ್ತು. ಏರ್​​ಪೋರ್ಟ್​ ಭದ್ರತಾ ಪಡೆಗೆ ಮೇಲ್​ ಬಂದಿದ್ದು, ‘ಉಗ್ರ ಅಜ್ಮಲ್ ಕಸಬ್​ ಗಲ್ಲಿಗೆ ಹಾಕಿದ್ದು ಸರಿಯಿಲ್ಲ. ಶೌಚಾಲಯದ ಪೈಪ್​ಲೈನ್​ನಲ್ಲಿ ಬಾಂಬ್ ಇಟ್ಟಿದ್ದು, ಪಝಲ್ ಗೇಮ್ ರೀತಿ ಎರಡು ಕಡೆ ಬಾಂಬ್ ಇಟ್ಟಿದ್ದು ಪ್ಲ್ಯಾನ್​ ಎ ಫೇಲ್​​ ಆದರೆ ಪ್ಲ್ಯಾನ್ ಬಿ’ ಎಂದು ಬೆದರಿಕೆ ಸಂದೇಶ ರವಾನಿಸಲಾಗಿದೆ.

ಬೆದರಿಕೆ ಮೇಲ್ ಹಿನ್ನೆಲೆ‌ ಎಲ್ಲೆಡೆ ಪರಿಶೀಲನೆ ಮಾಡಿದ ಅಧಿಕಾರಿಗಳು ಬಳಿಕ ಇದೊಂದು ಹುಸಿ ಬಾಂಬ್ ಮೇಲ್ ಎಂದು ತಿಳಿಸಿದ್ದಾರೆ. ಸದ್ಯ ಕೆಂಪೇಗೌಡ ಏರ್​​​ಪೋರ್ಟ್ ಪೊಲೀಸರು ಮತ್ತು ಅಧಿಕಾರಿಗಳಿಗೆ ಈ ಹುಸಿ‌ ಬಾಂಬ್ ಮೇಲ್ ಮತ್ತು ಕರೆಗಳು ತಲೆ ನೋವಾಗಿದ್ದು, ಹುಸಿ‌ ಬಾಂಬ್ ಬೆದರಿಕೆ ಬಂದ ಮೇಲ್ ಐಡಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಾಗೆಯೇ ಬೆಂಗಳೂರಿನ ಪುಲಕೇಶಿ ನಗರ ಠಾಣಾ ವ್ಯಾಪ್ತಿಯ  ಪಾಟರಿ ರಸ್ತೆಯಲ್ಲಿರುವ ಕ್ಲಾರೆನ್ಸ್ ಖಾಸಗಿ ಶಾಲೆಗೂ ಬೆದರಿಕೆ ಇ-ಮೇಲ್ ಬಂದಿದೆ ಎನ್ನಲಾಗಿದೆ.  ನಿಮ್ಮ ಸ್ಕೂಲ್ ನಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಬೆದರಿಕೆ ಇಮೇಲ್ ಬಂದಿದ.

ಇತ್ತೀಚೆಗೆ ಹಾಸನದ ಮೂರು ಖಾಸಗಿ ಶಾಲೆಗೆ, ಮೈಸೂರಿನ ಖಾಸಗಿ ಶಾಲೆಗೆ, ಬೆಂಗಳೂರಿನ ಹಲವು ಶಾಲೆಗಳು ಮತ್ತು ಪ್ರತಿಷ್ಠಿತ ಹೋಟೆಲ್​​ ಗಳಿಗೂ ಬಾಂಬ್​​ ಬೆದರಿಕೆ ಬಂದಿತ್ತು.vtu

Key words: Fake bomb, threat mail, Kempegowda Airport

The post ಕೆಂಪೇಗೌಡ ಏರ್​​​ಪೋರ್ಟ್​ಗೆ ಹುಸಿ ಬಾಂಬ್​ ಮೇಲ್ ಬೆದರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಅರಿತುಕೊಂಡಿಲ್ಲ-BJP ವಿರುದ್ದ ಸಚಿವ ಲಕ್ಷ್ಮಣ್ ಸವದಿ ಕಿಡಿ

ಬೆಂಗಳೂರು,ಆಗಸ್ಟ್,25,2026 (www.justkannada.in): ಈ ಬಾರಿ ಅಧಿವೇಶನದಿಂದ ಯಾವ ಅನುಕೂಲ ಆಗಿಲ್ಲ ಎಂಬ...

ಅನಧಿಕೃತ ನಿಲುಗಡೆ: 382 ವಾಹನಗಳಿಗೆ ನೋಟಿಸ್ ಜಾರಿ

ಮೈಸೂರು,ಆಗಸ್ಟ್,25,2026 (www.justkannada.in): ಮೈಸೂರು ನಗರದ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ...

ನಾನೀಗ ಸರ್ಕಾರದ ಮುಖ್ಯಸ್ಥನಲ್ಲ: ಆದರೂ ನಾನು ಒಳ ಮೀಸಲಾತಿ, ಸಾಮಾಜಿಕ ನ್ಯಾಯದ ಪರ- ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್‌, 25,2026 (www.justkannada.in): ನಾನೀಗ ಸರ್ಕಾರದ ಮುಖ್ಯಸ್ಥನಲ್ಲ. ಅಧಿಕಾರ ಇರಲಿ, ಇಲ್ಲದಿರಲಿ...

ಸದನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಂಗ್ರೆಸ್ ಪಲಾಯಾನ-ಆರ್.ಅಶೋಕ್

ಬೆಂಗಳೂರು,ಆಗಸ್ಟ್,25,2026 (www.justkannada.in):  ಅಧಿವೇಶನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸದನವನ್ನ ಬಂದ್ ಮಾಡಿ...