22
April, 2026

A News 365Times Venture

22
Wednesday
April, 2026

A News 365Times Venture

ಕೆನಡಾದಲ್ಲಿ ಕನ್ನಡಿಗ ಚಂದನ್ ಕುಮಾರ್ ಸಾವು: ಮೂರ್ನಾಲ್ಕು ದಿನಗಳಲ್ಲಿ ಮೃತದೇಹ ತಾಯ್ನಾಡಿಗೆ-ಗೃಹ ಸಚಿವ ಪರಮೇಶ್ವರ್

Date:

ಬೆಂಗಳೂರು,ಫೆಬ್ರವರಿ,10,2026 (www.justkannada.in): ಕೆನಡಾದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾಗಿರುವ ಕನ್ನಡಿಗ ಚಂದನ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಮೂರ್ನಾಲ್ಕು ದಿನಗಳಲ್ಲಿ ಭಾರತಕ್ಕೆ ತರಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನೆಲಮಂಗದ ತ್ಯಾಮಗೊಂಡ್ಲುವಿನ ಚಂದನ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್ ಅವರು, ಪೋಷಕರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಚಂದನ್ ಕುಮಾರ್ ಪ್ರತಿಭಾನ್ವಿತ ವ್ಯಕ್ತಿ ವಿದೇಶಕ್ಕೆ ಹೋಗಿ ಕೆಲಸ ಮಾಡುತ್ತಿದ್ದಾಗ ಹತ್ಯೆಯಾಗಿರುವುದು ನೋವಿನ ವಿಚಾರ. ಚಂದನ್ ಕುಮಾರ್ ವಿದೇಶದಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇದು ಅತ್ಯಂತ ದುರ್ಘಟನೆ. ಆರೋಪಿಗಳ ವಿರುದ್ಧ ಕೆನಡಾ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಮೃತಪಟ್ಟಿರುವ ನೆಲಮಂಗಲ ಮೂಲದ ಚಂದನ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಆದಷ್ಟು ಶೀಘ್ರ ಭಾರತಕ್ಕೆ ತರಲು ವಿದೇಶಾಂಗ ಸಚಿವಾಲಯದ ಸಹಕಾರ ಕೋರಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಮೃತದೇಹ ಭಾರತಕ್ಕೆ ತರಲಾಗುತ್ತದೆ  ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

Key words: Chandan Kumar, dies, Canada, Home Minister, Parameshwar

The post ಕೆನಡಾದಲ್ಲಿ ಕನ್ನಡಿಗ ಚಂದನ್ ಕುಮಾರ್ ಸಾವು: ಮೂರ್ನಾಲ್ಕು ದಿನಗಳಲ್ಲಿ ಮೃತದೇಹ ತಾಯ್ನಾಡಿಗೆ-ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ತತ್ವ, ಸಿದ್ದಾಂತ ಬೆಳೆಯಲು ಸಾಧ್ಯ- ಮಲ್ಲಿಕಾರ್ಜುನ ಖರ್ಗೆ

ಬೀದರ್,ಏಪ್ರಿಲ್,22,2026 (www.justkannada.in): ಬಸವ ತತ್ವ, ಸಿದ್ಧಾಂತಗಳ ಬಗ್ಗೆ ಬಹಳಷ್ಟು ಜನರು ಮಾತನಾಡುತ್ತಾರೆ....

ಬೆಂಗಳೂರಿಗೆ ‘ಧಾರವಾಡ ಆಕಾಶವಾಣಿ ಕೇಂದ್ರ’ ಸ್ಥಳಾಂತರ ನಿರ್ಧಾರ ವಾಪಸ್

ಧಾರವಾಡ,ಏಪ್ರಿಲ್,22,2026 (www.justkannada.in):  ಬೆಂಗಳೂರಿಗೆ ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಸ್ಥಳಾಂತರ ನಿರ್ಧಾರವನ್ನು...

ಹೆಣ್ಣು ಮಕ್ಕಳು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ  ಪಡೆದುಕೊಳ್ಳಿ-ಸಚಿವ ಡಾ: ಹೆಚ್.ಸಿ ಮಹದೇವಪ್ಪ

ಮೈಸೂರು, ಏಪ್ರಿಲ್.22,2026 (www.justkannada.in): ಹೆಣ್ಣು ಮಕ್ಕಳು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣವನ್ನು...

ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕ ನೀಡಲು ಕೋರ್ಟ್ ಆದೇಶ ಹಿನ್ನೆಲೆ: ಸಿಎಂ ಜೊತೆ ಸಚಿವ ಮಧು ಬಂಗಾರಪ್ಪ ಚರ್ಚೆ

ಬೆಂಗಳೂರು,ಏಪ್ರಿಲ್,22,2026 (www.justkannada.in): ತೃತೀಯ ಭಾಷೆಗೆ ಗ್ರೇಡ್ ಬದಲಿಗೆ ಅಂಕ ನೀಡಲು ಹೈಕೋರ್ಟ್...