ಬೆಂಗಳೂರು,ಜುಲೈ,22,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ವಿಚಾರ ಕುರಿತು ಮಾಜಿ ಸಂಸದ, ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಡಿ.ಕೆ ಸುರೇಶ್, ಕಳೆದ ಎರಡು ವರ್ಷಗಳಿಂದ ಇಡಿ ಏನು ಕೇಸ್ ದಾಖಲಿಸುತ್ತಿದೆ. ಇಡಿ ರಾಜಕೀಯ ಕೈಗೊಂಬೆಯಾದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದೆ. ಇಡಿಯನ್ನ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಕೋರ್ಟ್ ಗೆ ಮಾತ್ರವಲ್ಲ ದೇಶಕ್ಕೆ ಗೊತ್ತಾಗಿದೆ ಎಂದರು.
ಯಾವುದೋ ಒಂದು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಮೇಲೆ ಇದ್ದ ಪ್ರಕರಣ ವಜಾ ಆಗಿವೆ. ಯಾವುದೋ ಒಂದು ಪ್ರಕರಣದಲ್ಲಿ ಸಿಲುಗಿಸಿ ಸದೆಬಡಿಯಲು ಕೇಂದ್ರ ಯತ್ನಿಸುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಬಗ್ಗು ಬಡಿಯಲು ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ದ್ವೇಷ ರಾಜಕೀಯ ಬಿಟ್ಟು ಅಭಿವೃದ್ದಿ ರಾಜಕೀಯ ಮಾಡಲಿ ಎಂದು ಡಿಕೆ ಸುರೇಶ್ ಕಿಡಿಕಾರಿದರು.
Key words: Central Government, politics, ED, D.K. Suresh
The post ಕೇಂದ್ರ ದ್ವೇಷ ರಾಜಕೀಯ ಬಿಟ್ಟು ಅಭಿವೃದ್ಧಿ ರಾಜಕೀಯ ಮಾಡಲಿ-ಡಿ.ಕೆ ಸುರೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.