9
September, 2026

A News 365Times Venture

9
Wednesday
September, 2026

A News 365Times Venture

ಕೇಂದ್ರದ ನಿಯಮ ಹೊರತುಪಡಿಸಿ ಬರ ಘೋಷಣೆ ಮಾಡಲು ಆಗಲ್ಲ- ಡಿಸಿಎಂ ಪರಮೇಶ್ವರ್

Date:

ಬೆಂಗಳೂರು,ಸೆಪ್ಟಂಬರ್,8,2026 (www.justkannada.in):  ಕೇಂದ್ರ ಸರ್ಕಾರದ ನಿಯಮಗಳನ್ನ ಹೊರತುಪಡಿಸಿ ಬರ ಘೋಷಣೆ ಮಾಡಲು ಆಗಲ್ಲ ಎಂದು  ಡಿಸಿಎಂ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಬರ ಘೋಷಣೆ ವಿಚಾರಕ್ಕೆ ಶಾಸಕರ ಪತ್ರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಅಧಿವೇಶನದಲ್ಲಿ ನಾನು  ಸ್ಪಷ್ಟವಾಗಿ ಹೇಳಿದ್ದೇನೆ  ಕೇಂದ್ರದ ನಿಯಮ ಹೊರತುಪಡಿಸಿ ಘೋಷಣೆ  ಮಾಡಲು ಆಗಲ್ಲ.  ಕೇಂದ್ರ ಸರ್ಕಾರದ ನಿಯಮದನ್ವಯ ಬರ ಘೋಷಣೆ ಮಾಡುತ್ತೇವೆ.  ಮೊದಲು 101 ತಾಲ್ಲೂಕುಗಳನ್ನ ಬರ ಎಂದು ಘೋಷಣೆ ಮಾಡಿದ್ದೇವೆ.  ಈಗ ಎರಡನೇ ಹಂತದಲ್ಲಿ 25 ತಾಲ್ಲೂಕು ಬರ ಎಂದು ಬಂದಿದೆ. ಆ ತಾಲ್ಲೂಕುಗಳನ್ನು ನಾಳೆ  ಅಥವಾ ನಾಡಿದ್ದು ಘೋಷಣೆ ಮಾಡುತ್ತಾರೆ.   200ಕ್ಕೂ ಹೆಚ್ಚು ತಾಲ್ಲೂಕು ಬರಪೀಡಿತ ಆಗುವಂತಹ ಪರಿಸ್ಥಿತಿ ಇದೆ ಎಂದರು.

ಕರಾವಳಿ ಬಿಟ್ಟು ಉಳಿದ ಕಡೆ ಬರ ಪೀಡಿತ ಪ್ರದೇಶ ಆಗಿದೆ. ಆತಂಕ ಪಡುವಂತಹದ್ದು ಏನು ಇಲ್ಲ. ಇಡೀ ರಾಜ್ಯ ಬರಗಾಲದಲ್ಲಿದೆ.  ಕರಾವಳಿ ಬಿಟ್ಟು ಎಲ್ಲಾ ತಾಲ್ಲೂಕುಗಳು ಬರಪೀಡಿತ.  ನಾವೇ ಡಿಕ್ಲೇರ್ ಮಾಡಿಬಿಟ್ಟರೇ ಸಹಾಯ ಕೇಳೋಕೆ ಆಗಲ್ಲ. ಅದಕ್ಕೆ ಸ್ವಲ್ಪ ಸಹನೆ ಇದ್ದರೆ ಬಹಳ ಒಳ್ಳೆಯದು ಎಂದು  ಡಿಸಿಎಂ ಪರಮೇಶ್ವರ್ ತಿಳಿಸಿದರು.

Key words: Drought, declaration, DCM, Parameshwara

The post ಕೇಂದ್ರದ ನಿಯಮ ಹೊರತುಪಡಿಸಿ ಬರ ಘೋಷಣೆ ಮಾಡಲು ಆಗಲ್ಲ- ಡಿಸಿಎಂ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KPSC ಹಗರಣ: ಜ್ಞಾನೇಂದ್ರ ಮತ್ತು ಕನ್ನಾಳೆಗೆ ನ್ಯಾಯಾಂಗ ಬಂಧನ

ಬೆಂಗಳೂರು,ಸೆಪ್ಟಂಬರ್,9,2026 (www.justkannada.in): ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ...

ಯಶವಂತಪುರ ಎಪಿಎಂಸಿ ಮಾರ್ಕೆಟ್ ಗೆ  ಭೇಟಿ, ಸಮಸ್ಯೆಗಳನ್ನ ಆಲಿಸಿದ ಸಿಎಂ ಡಿಕೆಶಿ

ಬೆಂಗಳೂರು,ಸೆಪ್ಟಂಬರ್,8,2026 (www.justkannada.in): ಇಂದು ಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಯಶವಂತಪುರ...

ಬಳ್ಳಾರಿ ಚಲೋ  ಬಿಜೆಪಿ ಸಮಾವೇಶಕ್ಕೆ ಅನುಮತಿ ನಿರಾಕರಣೆ

ಬಳ್ಳಾರಿ,ಸೆಪ್ಟಂಬರ್,8,2026 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿರುವ...

ರೈತರ ವಿಮೆ ಹಣ ಕಟ್ಟದ, ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸೂಚನೆ

ಬೆಂಗಳೂರು, ಸೆಪ್ಟಂಬರ್, 08,2026 (www.justkannada.in): ಬೆಳಗಾವಿಯ ಜೇವರ್ಗಿ ತಾಲ್ಲೂಕಿನ ಇಟ್ಟನಹಳ್ಳಿ ಗ್ರಾಮದ...