4
March, 2026

A News 365Times Venture

4
Wednesday
March, 2026

A News 365Times Venture

ಕೇಂದ್ರದಿಂದ ಬೆಲೆ ಏರಿಕೆ: ರಾಜ್ಯ, ಜಿಲ್ಲಾ ಮಟ್ಟದಲ್ಲಿ ಹೋರಾಟ- ಡಿಸಿಎಂ ಡಿಕೆ ಶಿವಕುಮಾರ್

Date:

ಬೆಂಗಳೂರು,ಏಪ್ರಿಲ್,12,2025 (www.justkannada.in):  ಬೆಲೆ ಏರಿಕೆ ಮಾಡಿರುವುದನ್ನ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಡಿಕೆ ಶಿವಕುಮಾರ್,  ಕೇಂದ್ರ ಸರ್ಕಾರ  ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ.  ಆದರೆ ರಾಜ್ಯ ಬಿಜೆಪಿಯವರು ನಮ್ಮ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ. ಮೊದಲು ಬಿಜೆಪಿ ಬೋರ್ಡ್ ಬದಲಿಸಲಿ. ಆರ್. ಅಶೋಕ್, ವಿಜಯೇಂದ್ರಗೆ ಮನವಿ ಮಾಡುತ್ತೇನೆ.  ಅಂದು ಬೆಲೆ ಏಷ್ಟು ಇತ್ತು.  ಮೋದಿ ಸರ್ಕಾರ  ಬಂದ ಮೇಲೆ ಎಷ್ಟು ಬೆಲೆ ಏರಿಕೆಯಾಗಿದೆ ಎಂದು ತಿಳಿದುಕೊಳ್ಳಲಿ . ಜನರಿಗೆ ಅನುಕೂಲ ಆಗಲಿ ಅಂತಾ ನಾವು 5 ಗ್ಯಾರಂಟಿ ತಂದಿದ್ದೇವೆ ಪ್ರತಿ ಜಿಲ್ಲೆಗಳಲ್ಲೂ ಕೇಂದ್ರದ ವಿರುದ್ದ ಹೋರಾಟ ಮಾಡಲು ತೀರ್ಮಾನಿಸುತ್ತೇವೆ  ಮೊದಲು ರಾಜ್ಯಮಟ್ಟದಲ್ಲಿ ಕೇಂದ್ರದ ವಿರುದ್ದ ಹೋರಾಟ ನಂತರ ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತೇವೆ ಎಂದರು.

ಬೆಂಗಳೂರು ಕರಗ ಮಹೋತ್ಸವಕ್ಕೆ ಹಣ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರು ಕರಗ ಮಹೋತ್ಸವಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಬಜೆಟ್ ನಲ್ಲಿ ಕೂಡ ಅನುದಾನ ಮೀಸಲಿಟ್ಟಿದ್ದೇವೆ. ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅವರಲ್ಲಿಯೇ ಎರಡು, ಮೂರು ಗುಂಪುಗಳಿವೆ. ಎಲ್ಲರೂ ಒಗ್ಗಟ್ಟಿನಿಂದ ಬರಬಹುದಿತ್ತು. ಯಾರು ಅರ್ಜಿ ಕೊಟ್ಟಿದ್ದಾರೋ ಅವರಿಗೆ ಹಣ ಕೊಟ್ಟಿದ್ದೇವೆ. ಹಣ ಬಿಡುಗಡೆಯಾಗಿಲ್ಲ ಎಂಬುದು ಸುಳ್ಳು  ಎಂದರು.

Key words: Fight, against, center, state, district levels, DCM, DK Shivakumar

The post ಕೇಂದ್ರದಿಂದ ಬೆಲೆ ಏರಿಕೆ: ರಾಜ್ಯ, ಜಿಲ್ಲಾ ಮಟ್ಟದಲ್ಲಿ ಹೋರಾಟ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KPSC ಫಲಿತಾಂಶ ಅಕ್ರಮ ಆರೋಪ: ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ- ಬಿವೈ ವಿಜಯೇಂದ್ರ

ಬೆಂಗಳೂರು,ಮಾರ್ಚ್,4,2026 (www.justkannada.in): ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಮುಖ್ಯ ಪರೀಕ್ಷೆಯ...

ಭೀಕರ ಅಪಘಾತದಲ್ಲಿ ಐವರು ದುರ್ಮರಣ

ಚಿತ್ತೂರು,ಮಾರ್ಚ್,4,2026 (www.justkannada.in): ಹಿಂಬದಿಯಿಂದ ಲಾರಿಗೆ ಕಾರು ಡಿಕ್ಕಿಯಾಗಿ ಬೆಂಗಳೂರು ಮೂಲದ ಐವರು...

ಕೊಡಗು ಜಿಲ್ಲೆಯಲ್ಲಿ ಏ.8 ರಿಂದ 3 ದಿನಗಳ ಕಾಲ ಪಾಸ್‌ ಪೋರ್ಟ್‌ ಮೇಳ

ಮೈಸೂರು, ಫೆಬ್ರವರಿ,4,2026 (www.justkannada.in): ಕಿತ್ತಳೆ ನಾಡು ಕೊಡಗು ಜಿಲ್ಲೆಯ ನಾಗರಿಕರಿಗೆ ಸಂತಸದ...

2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ

ಬೆಂಗಳೂರು, ಮಾರ್ಚ್, 3,2026 (www.justkannada.in): 2022ನೇ ವರ್ಷದಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯ...