29
September, 2026

A News 365Times Venture

29
Tuesday
September, 2026

A News 365Times Venture

ಖಾಸಗಿ ಬಸ್ ಹರಿದು ಒಂದುವರೆ ವರ್ಷದ ಮಗು ಸಾವು

Date:

ಮೈಸೂರು,ಸೆಪ್ಟಂಬರ್,29,2026 (www.justkannada.in): ರಸ್ತೆ ಬದಿ ನಿಂತಿದ್ದ ಒಂದುವರೆ ವರ್ಷದ ಮಗುವಿನ ಮೇಲೆ ಖಾಸಗಿ ಬಸ್ ಹರಿದು ಪುಟ್ಟಕಂದಮ್ಮ ಪ್ರಾಣಬಿಟ್ಟಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.

ಬಸವರಾಜು ಮತ್ತು ಕಾಂಚನ ದಂಪತಿಯ ಒಂದೂವರೆ ವರ್ಷದ ಪುತ್ರಿ ಲತೀಕ್ಷಾ ಮೃತಪಟ್ಟ ಬಾಲಕಿ. ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಸ್ಕೂಲ್ ಬಸ್ ಹರಿದು ಈ ಘಟನೆ ಸಂಭವಿಸಿದೆ.

ಬಸವರಾಜು ಮೊದಲ ಪುತ್ರ ತಿಲಕ್ ಶಾಲೆಯಿಂದ ಬಂದಿದ್ದ.  ತಿಲಕ್ ನನ್ನು ಬಸ್ಸಿನಿಂದ ಇಳಿಸಿಕೊಂಡು ಮನೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಬಸ್ ರಿವರ್ಸ್ ತೆಗೆಯುವಾಗ ಚಾಲಕನ ನಿರ್ಲಕ್ಷ್ಯದಿಂದ ಮಗುವಿನ ತಲೆ ಮೇಲೆ  ಬಸ್ ಹರಿದಿದೆ.

ಇನ್ನು ಘಟನೆಗೆ ಕಾರಣನಾದ ಚಾಲಕ ಸಿದ್ದರಾಜುವನ್ನು  ಬಿಳಿಕೆರೆ ಠಾಣಾ ಪೊಲೀಸರು ಬಂಧಿಸಿದ್ದು, ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಯ ಪೋಸ್ಟ್ ಮಾರ್ಟಂ ಮಾಡಲಾಗಿದ್ದು ಆಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನೈಸ್ ಯೋಜನೆ:  AK-DK ಭಾಂದವ್ಯದಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ- ಚರ್ಚೆಗೆ ಸಿಎಂಗೆ  ಹೆಚ್ ಡಿಕೆ ಪಂಥಾಹ್ವಾನ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ...

ಮೂಲಸ್ಥಳದಲ್ಲೇ ಡಾ.ರಾಜ್ ಪುತ್ಥಳಿ ಪುನರ್ ಸ್ಥಾಪನೆ; ಸಚಿವ ಡಾ.ಯತೀಂದ್ರ ನೇತೃತ್ವದ ಸಭೆ ನಿರ್ಧಾರ

ಮೈಸೂರು, ಸೆಪ್ಟಂಬರ್,29, 2026 (www.justkannada.in): ದಸರಾ ವಸ್ತುಪ್ರದರ್ಶನದ ಆವರಣದಲ್ಲಿದ್ದ ವರನಟ ಡಾ.ರಾಜ್‌...

ವಿಶ್ವ ಪ್ರವಾಸೋದ್ಯಮ ದಿನ: ಅವತಿ ಬೆಟ್ಟಕ್ಕೆ ಚಾರಣ, ಸ್ವಚ್ಚತಾ ಕಾರ್ಯ ಅಭಿಯಾನ

ಬೆಂಗಳೂರು ಗ್ರಾಮಾಂತರ, ಸೆಪ್ಟಂಬರ್,28,2026 (www.justkannada.in): ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ...

ದಸರಾ ಕಂಬಳ ಕ್ರೀಡಾಕೂಟದ ಆನ್ಲೈನ್ ನೋಂದಣಿ ಆರಂಭ

ಮೈಸೂರು, ಸೆಪ್ಟಂಬರ್,28,2026 (www.justkannada.in): ಮೈಸೂರು ದಸರಾ 2026ರ ಸಾಂಸ್ಕೃತಿಕ ಹಾಗೂ ಕ್ರೀಡಾ...