ಉಡುಪಿ,ಫೆಬ್ರವರಿ,17,2025 (www.justkannada.in): ಗೃಹಲಕ್ಷ್ಮೀ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣ ಕಳೆದ ಎರಡ್ಮೂರು ತಿಂಗಳಿನಿಂದ ಜಮೆಯಾಗದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ಜನರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಗೃಹಲಕ್ಷ್ಮೀ ಯೋಜನೆ ಹಣ ಎರಡು ತಿಂಗಳದ್ದು ಒಟ್ಟಿಗೆ ಬರುತ್ತೆ. ಒಂದೆರಡು ತಿಂಗಳಲ್ಲಿ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಹಣ ಬಿಡುಗಡೆ ಹೆಚ್ಚು ಕಮ್ಮಿ ಆಗೋದು ಸಹಜ. ಯಾವುದೇ ಯೋಜನೆಗಳನ್ನ ನಿಲ್ಲಿಸಲ್ಲ. ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
Key words: Grihalakshmi Yojana, money, Minister, Satish Jarkiholi
The post ಗೃಹಲಕ್ಷ್ಮೀ ಯೋಜನೆ ಹಣ ಎರಡು ತಿಂಗಳದ್ದು ಒಟ್ಟಿಗೆ ಬರುತ್ತೆ- ಸಚಿವ ಸತೀಶ್ ಜಾರಕಿಹೊಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




