ಬೆಂಗಳೂರು,ಆಗಸ್ಟ್,14,2025 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ಜಾಮೀನು ರದ್ದುಗೊಳಿಸಿದ ಹಿನ್ನಲೆಯಲ್ಲಿ ಮೊದಲ ಆರೋಪಿ ಪವಿತ್ರಾಗೌಡರನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಿಂದರಾಜನಗರ ಪಿಐ ಸುಬ್ರಹ್ಮಣ್ಯ ನೇತೃತ್ವದಲ್ಲಿ ರಾಜರಾಜೇಶ್ವರಿ ನಗರದ ಮನೆಯಲ್ಲೇ ಪವಿತ್ರಾಗೌಡರನ್ನ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಾಮೀನು ರದ್ದುಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೆ ಪವಿತ್ರಾಗೌಡ ನಿವಾಸಕ್ಕೆ ಪೊಲೀಸರು ಆಗಮಿಸಿದ್ದರು. ಇದೀಗ ಪವಿತ್ರಗೌಡ ಬಂಧನವಾಗಿದ್ದು ಮತ್ತೆ ಜೈಲು ಸೇರಲಿದ್ದಾರೆ.
ಇನ್ನು ನಟ ದರ್ಶನ್ ಸಂಜೆ ವೇಳೆಗೆ ಶರಣಾಗುವ ಸಾಧ್ಯತೆ ಇದೆ.
Key words: Renukaswamy, murder case, Pavithra Gowda, arrest
The post ಜಾಮೀನು ರದ್ದು ಹಿನ್ನೆಲೆ: ಎ1 ಪವಿತ್ರಾ ಗೌಡ ಅರೆಸ್ಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




