ಮೈಸೂರು,ಜುಲೈ,30,2025 (www.justkannada.in): ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ದ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು ಬೆಳ್ಳಂಬೆಳಗ್ಗೆ ಮಹಾರಾಷ್ಟ್ರ ಪೊಲೀಸರ ದಾಳಿ ನಡೆಸಿದ ಸ್ಥಳಕ್ಕೆ ಮೈಸೂರು ಪೊಲೀಸರ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ತಡರಾತ್ರಿ ಫೀಲ್ಡಿಗಿಳಿದ ಕಮಿಷನರ್, ಡಿಸಿಪಿ, ಎಸಿಪಿ ಅಧಿಕಾರಿಗಳು ರಿಂಗ್ ರಸ್ತೆ ಸೇರಿ ಅಕ್ರಮ ಡ್ರಗ್ಸ್ ಗೋಡೋನ್ ಸುತ್ತಾ- ಮುತ್ತ ತಪಾಸಣೆ ನಡೆಸಿದ್ದಾರೆ. ನಾಕಾಬಂದಿ ಹಾಕಿ ನಗರದ ನಾಲ್ಕು ಕಡೆ, ರಿಂಗ್ ರಸ್ತೆ, ಪ್ರಮುಖ ವೃತ್ತ, ರಸ್ತೆಗಳಲ್ಲಿ ಡ್ರಗ್ಸ್ ಪತ್ತೆಯಾದ ಸಮೀಪದಲ್ಲಿರುವ ಬಡಾವಣೆಗಳಲ್ಲಿ ಪೊಲೀಸರು ತಲಾಶ್ ನಡೆಸಿದ್ದಾರೆ.
ಮೈಸೂರು ನಗರದಲ್ಲಿ ಬಾರಿ ಪ್ರಮಾಣದ ಡ್ರಗ್ಸ್ ಪತ್ತೆಯಾಗಿತ್ತು. ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ಬೆನ್ನಲ್ಲೆ ಮೈಸೂರು ಪೊಲೀಸರು ಅಲರ್ಟ್ ಆಗಿದ್ದು ಮೈಸೂರು ವಲಯ ನಂ. 1 ರ ವ್ಯಾಪ್ತಿಯ ಉನ್ನತಿನಗರ, ಬೆಲವತ್ತ ಗ್ರಾಮ, ಒಂದೇ ಮಾತರಂ ಕಾಲೋನಿ, ಸಾಯಿ ಬಾಬಾ ಕಾಲೋನಿ ಮತ್ತು ಯಲ್ಲಮ್ಮ ಕಾಲೋನಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಅಬಕಾರಿ ಇಲಾಖೆ ಅಧಿಕಾರಿಗಳ ಜೊತೆ ಸೇರಿ ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅನುಮಾನಸ್ಪದವಾಗಿ ಕಂಡು ಬರುವ ಬೈಕ್, ಕಾರುಗಳನ್ನ ತಪಾಸಣೆ ನಡೆಸುತ್ತಿದ್ದು, ಪ್ರಮುಖ ಬಡಾವಣೆಗಳ ಅಜ್ಞಾತ ಸ್ಥಳಗಳಿಗೆ ಭೇಟಿ ನೀಡಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
Key words: Operations, against, Drugs Mafia, Mysore, Police
The post ಡ್ರಗ್ಸ್ ಮಾಫಿಯಾ ವಿರುದ್ದ ಕಾರ್ಯಾಚರಣೆ: ಖುದ್ದು ಫೀಲ್ಡ್ ಗಿಳಿದು ತಪಾಸಣೆ ನಡೆಸಿದ ಪೊಲೀಸ್ ಕಮಿಷನರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.