30
July, 2026

A News 365Times Venture

30
Thursday
July, 2026

A News 365Times Venture

ತಮಿಳುನಾಡಿಗೆ ನೀರು ಬಿಟ್ಟರೇ ಬೀದಿಗಿಳಿದು ಹೋರಾಟ- ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ

Date:

ಮಂಡ್ಯ,ಜುಲೈ,29,2026 (www.justkannada.in):  ರಾಜ್ಯದಲ್ಲಿ ಕುಡಿಯುವ ನೀರಿಗೂ ಕೊರತೆ ಇದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ನೀಡಿರುವ ಆದೇಶ ಕುರಿತು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾತನಾಡಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ,  ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು. ನೀರು ಬಿಟ್ಟರೇ ಬೀದಿಗಿಳಿದು ಹೋರಾಟ ಮಾಡುತ್ತೇವೆ. ನಮಗೆ ನೀರು ಇಲ್ಲದಿರುವಾಗ ಹೇಗೆ ಬಿಡಲು ಸಾಧ್ಯ? ಹೀಗಾಗಿ ಯಾವುದೇ ಕಾರಣಕ್ಕೂ ನೀರು ಕೊಡೋಕೆ ಸಾಧ್ಯವಿಲ್ಲ ಎಂದು ತಿಳಿಸಿದರು.

ನಿನ್ನೆ ದೆಹಲಿಯಲ್ಲಿ ನಡೆದ ಸಿಡಬ್ಲ್ಯು ಆರ್ ಸಿ ಸಭೆಯಲ್ಲಿ ತಮಿಳುನಾಡಿಗೆ 15 ದಿನಗಳ ಕಾಲ 3500 ಕ್ಯುಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿದೆ. ಈ ಆದೇಶದ ವಿರುದ್ದ ಕರ್ನಾಟಕದಲ್ಲಿ ಪ್ರತಿಭಟನೆಗಳು ಶುರುವಾಗಿದೆ.

Key words:  water, released, Tamil Nadu, protest, MLA, Darshan Puttannaiah, warns

The post ತಮಿಳುನಾಡಿಗೆ ನೀರು ಬಿಟ್ಟರೇ ಬೀದಿಗಿಳಿದು ಹೋರಾಟ- ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚೆನ್ನಮ್ಮರ 11ನೇ ದಿನದ ಕಾರ್ಯ:  ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ಹೆಚ್ ಡಿಡಿ

ಹಾಸನ,ಜುಲೈ,30,2026 (www.justkannada.in):  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ...

ರಾಜ್ಯ ಗೃಹ ಇಲಾಖೆ ಕೇವಲ ಬಿಜೆಪಿಗರ ಭಾಷಣ ಹುಡುಕುವುದರಲ್ಲಿ ನಿರತ-ಶಾಸಕ ಸುನೀಲ್ ಕುಮಾರ್

ಶಿವಮೊಗ್ಗ,ಜುಲೈ,30,2026 (www.justkannada.in): ರಾಜ್ಯದ ಗೃಹ ಇಲಾಖೆ  ಡ್ರಗ್ಸ್ ದಂಧೆ ಕೊಲೆ ಸುಲಿಗೆ...

ಹೊಸ ವಿಧೇಯಕ ಕಣ್ಣೊರೆಸುವ ತಂತ್ರ: ಮೋದಿ, ಶಾ ಮೌನವೇಕೆ? ಖರ್ಗೆ ವಾಗ್ದಾಳಿ

ನವದೆಹಲಿ,ಜುಲೈ,30,2026 (www.justkannada.in):  ಸಾರ್ವಜನಿಕ ಪರೀಕ್ಷೆಗಳ (ಅಕ್ರಮಗಳ ತಡೆ) ತಿದ್ದುಪಡಿ ಮಸೂದೆ–2026 ಕಣ್ಣೊರೆಸುವ...

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯ CWRC ಆದೇಶ ಎತ್ತಿ ಹಿಡಿದ CWMA

ನವದೆಹಲಿ,ಜುಲೈ,30,2026 (www.justkannada.in) ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 3,500 ಕ್ಯೂಸೆಕ್...