12
August, 2026

A News 365Times Venture

12
Wednesday
August, 2026

A News 365Times Venture

ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹ: ಮೈಸೂರಿನಲ್ಲಿ ರೈತರಿಂದ ಪ್ರತಿಟನೆ, ಕಾಡಾ ಕಚೇರಿಗೆ ಮುತ್ತಿಗೆ

Date:

ಮೈಸೂರು,ಆಗಸ್ಟ್,12,2026 (www.justkannada.in): ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಮೈಸೂರಿನಲ್ಲಿ ರೈತರು ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ರೈತ ಸಂಘದಿಂದ ಕಾಡಾ ಕಚೇರಿ ಬಳಿ ಪ್ರತಿಭಟನೆ ನಡೆಯಿತು. ಅಯ್ಯಯ್ಯೋ ಅನ್ಯಾಯ ಎಂದು ಘೋಷಣೆ ಕೂಗಿದ ಪ್ರತಿಭಟನಾ ನಿರತ ರೈತರು ಯಾವುದೇ ಕಾರಣಕ್ಕೂ ನೀರು ಬಿಡಬಾರದು. ನಮ್ಮ ಕೆರೆಕಟ್ಟೆಗಳು ಜಾನುವಾರುಗಳಿಗೆ ನೀರಿಲ್ಲ. ಈ ಬಾರಿ ಮುಂಗಾರು ಮಳೆ ಕೊಟ್ಟಿದೆ. ನಮಗೆ ನೀರಿಲ್ಲದ ಸಮಯದಲ್ಲಿ ಅವರಿಗೆ ನೀರು ಬಿಡೋದು ಅನ್ಯಾಯ. ಸರ್ವ ಪಕ್ಷಗಳ ಸಭೆಯ ನಿರ್ಣಯದಂತೆ ನೀರು ಬಿಡಬಾರದು ಎಂದು ಆಗ್ರಹಿಸಿದರು.

ಅಲ್ಲದೆ ಅಧಿಕಾರಿಗಳ ಕಚೇರಿಗೆ ಬೀಗ ಹಾಕಲು ಪ್ರತಿಭಟನಾನಿರತ ರೈತರು ಯತ್ನಿಸಿದ್ದು ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದು ರೈತರನ್ನು ಪೊಲೀಸರು ತಡೆದರು. ಈ ಸಮಯದಲ್ಲಿ ರೈತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ನಗರದ ದೊಡ್ಡ ಗಡಿಯಾರದ ಬಳಿ ರಸ್ತೆ ತಡೆದು ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರದ್ದು ಗೊಳಿಸುವಂತೆ ಆಗ್ರಹಿಸಿದರು.  ರಾಜ್ಯದ ಪಾಲಿಗೆ ಪದೇ ಪದೇ ಅನ್ಯಾಯವಾಗುತ್ತಿದೆ. ಪ್ರಾಧಿಕಾರದಿಂದ ರಾಜ್ಯಕ್ಕೆ ಯಾವಾಗಲು ಅನುಕೂಲವಾಗಿಲ್ಲ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಪ್ರಾಧಿಕಾರದ ಆದೇಶದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಮತ್ತಷ್ಟು ಉಗ್ರವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Key words: water, Tamil Nadu, Farmers, protest, Mysore

The post ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹ: ಮೈಸೂರಿನಲ್ಲಿ ರೈತರಿಂದ ಪ್ರತಿಟನೆ, ಕಾಡಾ ಕಚೇರಿಗೆ ಮುತ್ತಿಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಯಾವ ಖಾತೆ ಇಲ್ಲಿದೆ ಮಾಹಿತಿ

ಬೆಂಗಳೂರು, ಆಗಸ್ಟ್, 12,2026 (www.justkannada.in):  ತೀವ್ರ ಕುತೂಹಲ ಮೂಡಿಸಿದ್ದ ನೂತನ ಸಚಿವರಿಗೆ...

 ಇಬ್ಬರು ಶಾಸಕರಿಗೆ ಮಹತ್ವದ ಜವಾಬ್ದಾರಿ; ಸಿ. ನರೇಂದ್ರಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ

ಬೆಂಗಳೂರು, ಆಗಸ್ಟ್ 12,2026 (www.justkannada.in): ರಾಜ್ಯ ಸರ್ಕಾರ ಬುಧವಾರ ಮಹತ್ವದ ನೇಮಕಾತಿ...

ಶಶಿಧರ. ಎಸ್ ಅವರಿಗೆ ಮೈಸೂರು ವಿವಿಯಿಂದ ಪಿಎಚ್.ಡಿ ಪದವಿ

ಮೈಸೂರು,ಆಗಸ್ಟ್,12,2026 (www.justkannada.in):  ಶಶಿಧರ. ಎಸ್ ಅವರಿಗೆ ಇತಿಹಾಸ ವಿಷಯದಲ್ಲಿ ಮೈಸೂರು ವಿಶ್ವ...

ನಾಳಿನ ಬಂದ್ ನಿಂದ ಪ್ರಯೋಜನವಿಲ್ಲ: ತೊಂದರೆ ಆಗದಂತೆ ಕ್ರಮ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಆಗಸ್ಟ್,12,2026 (www.justkannada.in):  ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ...