27
April, 2026

A News 365Times Venture

27
Monday
April, 2026

A News 365Times Venture

‘ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ..!’ ಸದನದಲ್ಲಿ ಬಿಜೆಪಿಗೆ ಹಿಗ್ಗಾಮುಗ್ಗಾ ಜಾಡಿಸಿದ ಶಾಸಕ ಶಿವಲಿಂಗೇಗೌಡ

Date:

ಬೆಂಗಳೂರು,ಫೆಬ್ರವರಿ,4,2026 (www.justkannada.in): ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆ ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ ವಿರುದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಸದನದಲ್ಲೇ ಏಕವಚನದಲ್ಲೇ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ವಿರುದ್ದ ಕೆಂಡಕಾರಿದ ಶಾಸಕ ಕೆ.ಎಂ ಶಿವಲಿಂಗೇಗೌಡ, ನಿಮಗೆ ಏನಾದರೂ ಮಾನ ಮರ್ಯಾದೆ ಇದೆಯಾ?  ಇದು ಅಸೆಂಬ್ಲಿನಾ ಅಥವಾ ಡ್ಯಾನ್ಸ್ ಮಾಡೋಕೆ ಬಂದಿದ್ದೀರಾ? ನಾವು ಧರಣಿ ಮಾಡುತ್ತೇವೆ ಆದರೆ ಈ ರೀತಿಯಾಗಿ ಮಾಡಿಲ್ಲ. ನಿಮ್ಮತರ ಕೆಟ್ಟ ಜನರನ್ನ ನಾನು ಎಲ್ಲಿಯೂ ನೋಡಿಲ್ಲ. ಲೇ ಅರೆಸ್ಸೆಸ್ಸು.. ಆರೆಸ್ಸೆಸ್ಸು.. ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ..?  ಎಂದು ಜಾಡಿಸಿದರು.

ಹಾಗೆಯೇ ಬಿಜೆಪಿ ಶಾಸಕ ಶರಣು ಸಲಗರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಶಿವಲಿಂಗೇಗೌಡ,  ನಿನಗೆ ಮಾನ ಮರ್ಯಾದೆ ಇದೆಯಾ  ಕೋತಿ ಬಡ್ಕೊಂಡಂಗೆ ಬಡ್ಕೋತಿಯಾ.  ನೀವು ಕೋತಿ ಆಟ ಆಡೋಕೆ ಹೋಗಬೇಕು.  ನಿನ್ನ ಹೆಂಡತಿನ ತಹಶೀಲ್ದಾರ್ ಮಾಡಿ ದುಡ್ಡು ಹೊಡೆದಿದ್ದೀಯಾ.  ನಿನಗೆ ಮಾನ ಮರ್ಯಾದೆ ಇದೆಯಾ ಎಂದು ಏಕವಚನದಲ್ಲೇ ಗುಡುಗಿದರು.

ರಾಜ್ಯಪಾಲರು ಕಾನೂನಿಗೆ ತಡೆ ಹಿಡಿದಿದ್ದಾರೆ. ಇಲ್ಲದಿದ್ದರೇ ನಿಮಗೆ ಒಂದ್ ಗತಿ ಕಾಣಿಸುತ್ತಿದ್ದೆ. ರಾಜ್ಯಪಾಲರು ಜಾರಿಗೆ ಕೊಡಬೇಕಿತ್ತು ಎಂದು ಹರಿಹಾಯ್ದರು.

Key words: Congress MLA, Shivalingegowda , BJP , Session

The post ‘ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ..!’ ಸದನದಲ್ಲಿ ಬಿಜೆಪಿಗೆ ಹಿಗ್ಗಾಮುಗ್ಗಾ ಜಾಡಿಸಿದ ಶಾಸಕ ಶಿವಲಿಂಗೇಗೌಡ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜನಿವಾರ ತೆಗೆಸಿದ ವಿಚಾರ: ಸಿಎಂಗೆ ಪತ್ರ ಬರೆದ ಬ್ರಾಹ್ಮಣ ಮಹಾಸಭಾ

ಬೆಂಗಳೂರು, ಏಪ್ರಿಲ್, 25,2026 (www.justkannada.in): ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆದ...

ಮುಂದಿನ ಎರಡು ತಿಂಗಳು ಕುಡಿಯುವ ನೀರಿಗೆ ಸಮಸ್ಯೆ – ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಏಪ್ರಿಲ್,25,2026 (www.justkannada.in):  ರಾಜ್ಯದಲ್ಲಿ ಬಿಸಿ ತಾಪ, ಕುಡಿಯುವ ನೀರಿಗೆ ಸಮಸ್ಯೆ ವಿಚಾರಕ್ಕೆ...

ನಾಯಕತ್ವ ಬದಲಾವಣೆ ವಿಚಾರ: ಸದ್ಯದಲ್ಲೇ ಸೂಕ್ತ ನಿರ್ಧಾರವಾಗುತ್ತೆ ಎಂದು ಭಾವಿಸಿದ್ದೇವೆ-ಶಾಸಕ ರಂಗನಾಥ್

ತುಮಕೂರು,ಏಪ್ರಿಲ್,25,2026 (www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಹೈಕಮಾಂಡ್ ಸದ್ಯದಲ್ಲೇ...

ಅಲ್ಪಸಂಖ್ಯಾತರ ಓಲೈಕೆ, ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ನಿಂದ ಹಿಂದೂಗಳಿಗೆ ಅಪಮಾನ- ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ

ಬೆಂಗಳೂರು,ಏಪ್ರಿಲ್,25,2026 (www.justkannada.in): ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ...