28
April, 2026

A News 365Times Venture

28
Tuesday
April, 2026

A News 365Times Venture

ಧಾರವಾಡ ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರ ಗಡಗಡ: ಸುಳ್ಳುರಾಮಯ್ಯ ಅಂತಾಗಬೇಡಿ- ಅರವಿಂದ ಬೆಲ್ಲದ್

Date:

ಹುಬ್ಬಳ್ಳಿ,ಫೆಬ್ರವರಿ,25,2026 (www.justkannada.in):  ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ರಾಜ್ಯ ಸರ್ಕಾರ ಗಡಗಡ ನಡುಗಿದೆ. ಸಿದ್ದರಾಮಯ್ಯನವರೇ ಸುಳ್ಳು ಹೇಳಬೇಡಿ. ಸುಳ್ಳುರಾಮಯ್ಯ ಅಂತಾಗಬೇಡಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್,  ಧಾರವಾಡ ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರ ಗಡಗಡ ನಡುಗಿದೆ. ಖಾಲಿ ಹುದ್ದೆ ಭರ್ತಿ ಮಾಡುತ್ತೇವೆಂದು ಸಿಎಂ ಟ್ವಿಟ್ ಮಾಡಿದ್ದಾರೆ ಇದು ಹೋರಾಟಕ್ಕೆ ಸರ್ಕಾರ ಯಾವ ರೀತಿ ಅಂಜಿದೆ ಅಂತಾ ತೋರಿಸುತ್ತದೆ. ಖಾಲಿ ಹುದ್ದೆಗಳ ನೇಮಕಾತಿಗಾಗಿ ಈ ಹಿಂದೆ ಅನೇಕ ಹೋರಾಟ ನಡೆದಿದೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ ಎಂದರು.

ಉರ್ದು ಭಾಷೆಯಲ್ಲಿ ಸರ್ಕಾರದ ಆಹ್ವಾನ ಪತ್ರ ಪ್ರಕಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅರವಿಂದ ಬೆಲ್ಲದ್, ಸರ್ಕಾರ ಈ ರೀತಿ ಒಣ ರಾಜಕಾರಣ ಮಾಡುವ  ಅವಶ್ಯಕತೆ ಇಲ್ಲ.  ಅತಿಯಾದ ಓಲೈಕೆಯಿಂದ ಭಾಷಾ ಬಾಂದವ್ಯ ಹಾಳು ಮಾಡಬಾರದು ಕಾಂಗ್ರೆಸ್ ಮೊದಲಿನಿಂದಲೂ ಜಗಳ ತಂದಿಡುವ ಕೆಲಸ ಮಾಡುತ್ತಿದೆ . ಕಾಂಗ್ರೆಸ್  ಆಡಳಿತ ಮರೆತು ರಾಜಕಾರಣ ಮಾಡಬಾರದು. ಆಡಳಿತ ಮರೆತು ರಾಜಕಾರಣ ಮಾಡಿದರೆ ಮತ್ತೆ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ ನವರೇ ನಮಗೆ ತಟ್ಟೆಯಲ್ಲಿ ಅಧಿಕಾರ ಬಿಟ್ಟು ಕೊಡುತ್ತಾರೆ ಎಂದು ಅರವಿಂದ ಬೆಲ್ಲದ್ ಹೇಳಿದರು.

Key words: Government, Dharwad, students, protest, Arvind Bellad

The post ಧಾರವಾಡ ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರ ಗಡಗಡ: ಸುಳ್ಳುರಾಮಯ್ಯ ಅಂತಾಗಬೇಡಿ- ಅರವಿಂದ ಬೆಲ್ಲದ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಫ್ಯಾಶನ್ ಡಿಸೈನಿಂಗ್ ಉಚಿತ ತರಬೇತಿ: ಆಸಕ್ತರು ಅರ್ಜಿ ಸಲ್ಲಿಸಿ

ಬೆಂಗಳೂರು ಗ್ರಾಮಾಂತರ ಏಪ್ರಿಲ್, 28,2026 (www.justkannada.in): ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಗೆ...

ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ, ಏಪ್ರಿಲ್, 28,2026 (www.justkannada.in):  ದೇವನಹಳ್ಳಿ ತಾಲ್ಲೂಕು ಚನ್ನರಾಯಪ್ಪಟಣ ಗ್ರಾಮದಲ್ಲಿರುವ...

ಸಿದ್ದರಾಮಯ್ಯ ಇನ್ನು 15 ದಿನ ಮಾತ್ರ ಸರದಾರ- ಸಂಸದ ಗೋವಿಂದ ಕಾರಜೋಳ

ಬಾಗಲಕೋಟೆ,ಏಪ್ರಿಲ್,28,2026 (www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ  ಚರ್ಚೆಯಾಗುತ್ತಿದ್ದು ಇದೀಗ ಬಿಜೆಪಿ...

ದಲಿತ ಸಿಎಂ ವಿಚಾರದಲ್ಲಿ ನಾನು ಈಗಲು ಬದ್ಧ: ಸಿದ್ದರಾಮಯ್ಯ ಮುಂದುವರೆಯಲಿ- ಕೆ.ಎನ್ ರಾಜಣ್ಣ

ಬೆಂಗಳೂರು,ಏಪ್ರಿಲ್,28,2026 (www.justkannada.in): ದಲಿತ ಸಿಎಂ ಆಗಬೇಕು ಎಂಬುದಕ್ಕೆ ನಾನು ಈಗಲೂ ಬದ್ದ....