7
October, 2026

A News 365Times Venture

7
Wednesday
October, 2026

A News 365Times Venture

ನಿಸ್ವಾರ್ಥ ಸೇವೆಯೇ ನನ್ನ ಏಕೈಕ ಧ್ಯೇಯ: ಅರ್ಥವ್ಯವಸ್ಥೆಯಲ್ಲಿ ವಿಶ್ವದ 3ರಲ್ಲಿ ಭಾರತ ಇರಲಿದೆ –ಪ್ರಧಾನಿ ಮೋದಿ

Date:

ನವದೆಹಲಿ,ಅಕ್ಟೋಬರ್,7,2026 (www.justkannada.in): ದೇಶಕ್ಕಾಗಿ ನಿಸ್ವಾರ್ಥ ಸೇವೆಯೇ ನನ್ನ ಜೀವನದ ಏಕೈಕ ಧ್ಯೇಯ. ನಾನು ರಾಜಕೀಯ ಮಹತ್ವಾಕಾಂಕ್ಷೆಗಾಗಿ ಬದುಕುವ ವ್ಯಕ್ತಿಯಲ್ಲ, ದೇಶಸೇವೆಯ ಮಿಷನ್‌ಗಾಗಿ ಬಂದವನು. ನನಗೆ ದೊರೆತ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ದೆಹಲಿಯಲ್ಲಿ  ನಡೆದ  ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 25 ವರ್ಷಗಳನ್ನು ಪೂರೈಸಿದ ತಮ್ಮ ಸುದೀರ್ಘ ರಾಜಕೀಯ ಪಯಣದ ಅನುಭವಗಳನ್ನು ಹಂಚಿಕೊಂಡರು.

ಈ ರಾಜಕೀಯ ಪಯಣದಲ್ಲಿ ಯಾರು ನನ್ನನ್ನೂ ಬೀಳಿಸಿದ್ದರೋ  ಅವರೇ ನನ್ನನ್ನು ಮೇಲೆ ಏಳುವುದನ್ನು ಕೂಢ ಕಲಿಸಿಕೊಟ್ಟಿದ್ದಾರೆ. ಸೇವೆ ನಮ್ಮ ಧರ್ಮ ಹಾಗೂ ಕರ್ಮವಾಗಿದೆ. ನೀತಿಗಳು ನನ್ನನ್ನು ಸಹಾನುಭೂತಿಯ ಮಾರ್ಗ ತೋರಿಸಿವೆ. ಜೀವನದ ಪ್ರತಿ ಘಟನೆ ನನ್ನನ್ನು ಕಲಿಯಲು ಅವಕಾಶ ಕೊಟ್ಟಿದೆ.  ಕಾರ್ಯಕರ್ತರ ಭರಪೂರ ಬೆಂಬಲವು ಕೂಡ ಸಿಕ್ಕಿದೆ ಎಂದರು.

ಈವರೆಗೆ ನನ್ನ ಜೀವನದಲ್ಲಿ ಯಾವ ಘಟನೆಯೂ ವ್ಯರ್ಥವಾಗಿಲ್ಲ.  ಎಲ್ಲವೂ ಒಂದು ಅನುಭವವಾಗಿದೆ ಹೊಸತನವನ್ನು ಕಲಿತಿದ್ದೇನೆ.  ನಮ್ಮ ಕನಸುಗಳು ದೊಡ್ಡದಾಗಿರಬೇಕು. ನನಗೆ ಯಾವತ್ತೂ ನಾನು ಒಬ್ಬನೇ ಇದ್ದೇನೆ ಅಂತಾ ಅನ್ನಿಸಿಲ್ಲ. ಕೋಟ್ಯಾಂತರ ಕಾರ್ಯಕರ್ತರು ನನ್ನ ಜೊತೆ ಇದ್ದಾರೆಂಬ ಭಾವನೆ.  ಕೋಟಿ ಕೋಟಿ ಕಾರ್ಯಕರ್ತರ ಉಸಿರು ನನ್ನ ಜೊತೆಯಲ್ಲಿದೆ. ಪ್ರತಿಯೊಬ್ಬ ಕಾರ್ಯಕರ್ತನಿಗೂ ಹೃದಯಪೂರ್ವಕ ನಮನಗಳು.  ಕೋಟ್ಯಾಂತರ ಸ್ವಯಂ ಸೇವಕರು. ಈ ದೇಶದ ಸಂಸ್ಕೃತಿಯ ಭಾಗ ಭಾರತಮಾತೆಯ ನಿಸ್ವಾರ್ಥ ಸೇವೆಯೇ ಅವರ ಗುರಿ.  ನಾನು ಇಂತಹ ನಿಸ್ವಾರ್ಥ  ಸೇವಕರಿಗೆ ನಮನ ಕಾರ್ಯಕರ್ತರ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.

ಆತ್ಮ ನಿರ್ಭರ್ ಭಾರತ್ ನಾವು ಮುಂದುವರೆಸುತ್ತೇವೆ ಅರ್ಥವ್ಯವಸ್ಥೆಯಲ್ಲಿ ವಿಶ್ವದ 3ರಲ್ಲಿ ಭಾರತ ಇರಲಿದೆ. ದೇಶದ ಮುಂದೆ ಅಧಿಕಾರ ಪ್ರತಿಷ್ಠೆ ದೊಡ್ಡದಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: Selfless service, sole mission, PM Modi, Evolved India Resolution

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ? ಎಚ್ಚರಿಕೆಯಿಂದಿರುವ ಸಿಎಂ ಡಿಕೆಶಿ ಸೂಚನೆ

ಬೆಂಗಳೂರು,ಅಕ್ಟೋಬರ್,7,2026 (www.justkannada.in): ರಾಜ್ಯ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು ಖಾಸಗಿ ಏಜೆನ್ಸಿಗಳ ಮೂಲಕ...

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಸಿಎಂ, ಡಿಸಿಎಂರಿಂದ ಸನ್ಮಾನ: ನಗದು ಬಹುಮಾನ ಮೊತ್ತ ಹೆಚ್ಚಳ

ಬೆಂಗಳೂರು, ಅಕ್ಟೋಬರ್, 6,2026 (www.justkannada.in): ಏಷ್ಯನ್ ಗೇಮ್ಸ್ 2026ರಲ್ಲಿ ಪದಕ ಗೆದ್ದ...

ಮೈಸೂರು: ವೈಯಕ್ತಿಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ – ಪಾಲಿಕೆ ಸಿಬ್ಬಂದಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ

  ಮೈಸೂರು, OCT.06,2026: ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ...

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮನೆ ಮೇಲೆ ಇಡಿ ದಾಳಿ, ಪರಿಶೀಲನೆ

ಬೆಂಗಳೂರು,ಅಕ್ಟೋಬರ್,6,2026 (www.justkannada.in): ಕೆಪಿಎಸ್​​ಸಿ ಪಶುವೈದ್ಯ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿದ್ದು,ಈ...