ಬೆಂಗಳೂರು. ಜೂನ್, 3,2025 (www.justkannada.in): ಇಂದು ಆಹಾರ ಭವನದಲ್ಲಿ ರಾಯಚೂರು ಜಿಲ್ಲೆಯ ರೈತ ಮುಖಂಡರ ನಿಯೋಗದೊಂದಿಗೆ ಆಹಾರ ಸಚಿವ ಕೆಹೆಚ್. ಮುನಿಯಪ್ಪ ಅವರು ಸಭೆಯನ್ನು ನಡೆಸಿದರು.
ಬಸವಣಗೌಡ ಬಾದರ್ಲಿ ರವರ ನೇತೃತ್ವದಲ್ಲಿ ರೈತರ ನಿಯೋಗವು ಇಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರನ್ನ ಭೇಟಿಯಾಗಿ ಚರ್ಚಿಸಿತು.
ಮುಂಗಾರು ಮತ್ತು ಹಿಂಗಾರಿನಲ್ಲಿ ರೈತರು ಹೆಚ್ಚಾಗಿ ಜೋಳ ಬೆಳೆಯುವ ಕಾರಣದಿಂದ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ ರೈತರಿಗೆ ಅನುಕೂಲಕರವಾಗುತ್ತದೆ ಎಂದು ಸಭೆಯಲ್ಲಿ ಮುಖಂಡರು ಪ್ರಸ್ಥಾಪಿಸಿದರು.
ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆಗೆ ಈಗಾಗಲೇ ಕೇಂದ್ರ ಸರ್ಕಾರದ ಗರಿಷ್ಠ ಮಿತಿಯನ್ನೂ ಮೀರಿದ್ದು ಇನ್ನೂ ಎಂಎಸ್ ಪಿ ಯೋಜನೆಯಡಿ ಸರ್ಕಾರಕ್ಕೆ ನೀಡಲು ನೋಂದಣಿ ಮಾಡಿದ ರೈತರ ಹೆಚ್ವುವರಿ ಜೋಳವನ್ನು ಖರೀದಿಸಲು ಮುಂದಿನ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ನ ಶಾಸಕ ಬಸವನಗೌಡ ಬಾದರ್ಲಿ, ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್, ಆಯುಕ್ತರಾದ ವಾಸಿ ರೆಡ್ಡಿ ವಿಜಯ ಜೋತ್ನಾ, ನಿಗಮ ನಿರ್ದೇಶಕರಾದ ಚಂದ್ರಕಾಂತ್, ಹಾಗೂ ರೈತ ಮುಖಂಡರಾದ ಹನುಮನಗೌಡ, ರಾಜೇಶ್ ಪಾಟೇಲ್, ಮಲ್ಲೇಶ್ ಗೌಡ, ಉಪಸ್ಥಿತರಿದ್ದರು.
Key words: Request, Minister, KH Muniyappa, purchase, corn , registered farmers
The post ನೋಂದಣಿ ಮಾಡಿರುವ ರೈತರ ಜೋಳ ಖರೀದಿಸಿ- ಸಚಿವ ಕೆಎಚ್ ಮುನಿಯಪ್ಪರಿಗೆ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




