ಬೆಂಗಳೂರು,ಫೆಬ್ರವರಿ,11,2026 (www.justkannada.in): ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆದರು.
ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ, ಪದೇ ಪದೇ ಯಾಕೆ ಅದೇ ವಿಚಾರವನ್ನ ಕೇಳುತ್ತೀರಿ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದರು.
ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಭರವಸೆ ಇದೆ ಎಂಬ ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಏನು ಹೇಳುತ್ತೋ ಅದನ್ನೇ ನಾನು ಕೇಳುವುದು. ಎಲ್ಲವನ್ನೂ ಡಿಕೆ ಸುರೇಶ್ ಅವರನ್ನೇ ಕೇಳಿ ಎಂದು ಟಾಂಗ್ ಕೊಟ್ಟರು.
ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳಬೇಕು. ಡಿಕೆ ಶಿವಕುಮಾರ್ ಕೂಡ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
Key words: Power sharing, leadership change, CM Siddaramaiah
The post ಪದೇ ಪದೇ ಅದನ್ನೇ ಪ್ರಶ್ನೆ ಮಾಡ್ಬೇಡಿ: ಹೈಕಮಾಂಡ್ ಹೇಳಿದಂತೆ ಕೇಳ್ತೇನೆ- ಸಿಎಂ ಸಿದ್ದರಾಮಯ್ಯ ಗರಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




