ಮೈಸೂರು,ಜೂನ್,13,2026 (www.justkannada.in): ಬೆಂಗಳೂರಿನ ವೈಟ್ ಫಿಲ್ಡ್ ನ ಝೀ ಸ್ವಿಮ್ಮಿಂಗ್ ಅಕಾಡೆಮಿಯಲ್ಲಿ ಜೂನ್ 8ರಿಂದ 10ರವರೆಗೆ ನಡೆದ 26ನೇ ಜೂನಿಯರ್ ಮತ್ತು ಸಬ್-ಜೂನಿಯರ್ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್ಶಿಪ್–2026ರಲ್ಲಿ ಮೈಸೂರಿನ ಈಜುಪಟು ರುತ್ವ ಮೂರು ಚಿನ್ನದ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ರುತ್ವ ಅವರು 50 ಮೀಟರ್ ಬಟರ್ ಫ್ಲೈ, 100 ಮೀಟರ್ ಬಟರ್ ಫ್ಲೈ ಹಾಗೂ 200 ಮೀಟರ್ ಇಂಡಿವಿಜುವಲ್ ಮೆಡ್ಲೆ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಇನ್ನೋರ್ವ ಕ್ರೀಡಾಪಟು ಮೋಹಿತ್ ಎಸ್.ಬಿ. ಅವರು 50 ಮೀಟರ್ ಫ್ರೀಸ್ಟೈಲ್ ನಲ್ಲಿ ಬೆಳ್ಳಿ ಪದಕ ಹಾಗೂ 50 ಮೀಟರ್ ಮತ್ತು 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ರುತ್ವ ಹಾಗೂ ಮೋಹಿತ್ ಎಸ್.ಬಿ. ಇಬ್ಬರೂ ಮೈಸೂರಿನ ಜೆ.ಪಿ.ನಗರದಲ್ಲಿರುವ ಜಿಎಸ್ ಎ ಈಜುಕೊಳದ ಕ್ರೀಡಾಪಟುಗಳಾಗಿದ್ದು, ಪವನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರ ಸಾಧನೆಗೆ ಜಿಎಸ್ಎ ಸಂಸ್ಥೆಯ ತರಬೇತುದಾರರು ಅಭಿನಂದನೆ ಸಲ್ಲಿಸಿದ್ದಾರೆ.
26th Junior and Sub-Junior National Para Swimming Championship 2026,
8-10 June, 2026 Zee Swimming Academy, Whitefield, Bengaluru
Ruthva got Gold medal in 50m Butterfly, 100m Butterfly and 200m Individual Medley & Silver medal in 4×100 Relay.
And all so mohith S.B. won 2 bronze in 100m and 50m breastrock and 1 silver in 50m freestyle
Key words: Para swimming, Mysore, Ruthva, wins, golds
The post ಪ್ಯಾರಾ ಈಜು ರಾಷ್ಟ್ರ ಮಟ್ಟದ ಸ್ಪರ್ಧೆ: ಮೈಸೂರಿನ ರುತ್ವಗೆ ಮೂರು ಚಿನ್ನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




