26
June, 2026

A News 365Times Venture

26
Friday
June, 2026

A News 365Times Venture

ಪ್ರಕೃತಿ ವಿಕೋಪ ನಿರ್ವಹಣೆ: ಜಿಲ್ಲೆಗಳ ಮೇಲುಸ್ತುವಾರಿಗೆ ಸಚಿವರ ನೇಮಕ

Date:

ಬೆಂಗಳೂರು, ಜೂನ್, 24,2026 (www.justkannada.in):  ರಾಜ್ಯದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಮುಖ್ಯಮಂತ್ರಿಯನ್ನು ಹೊರತುಪಡಿಸಿ ಸಚಿವರಿಗೆ ವಿವಿಧ ಜಿಲ್ಲೆಗಳ ಮೇಲುಸ್ತುವಾರಿ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ.

ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೂಚಿಸಲಾಗಿದ್ದು, ಮುಂದಿನ ಆದೇಶದವರೆಗೆ ಅನ್ವಯವಾಗಲಿದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಸಚಿವರಿಗೆ ಕೆಳಕಂಡ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ:

ಡಾ. ಜಿ. ಪರಮೇಶ್ವರ್ – ತುಮಕೂರು ಮತ್ತು ಚಿತ್ರದುರ್ಗ

ಕೆ.ಹೆಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ

ರಾಮಲಿಂಗಾರೆಡ್ಡಿ – ಬೆಂಗಳೂರು ದಕ್ಷಿಣ ಮತ್ತು ಮಂಡ್ಯ

ಎಂ.ಬಿ. ಪಾಟೀಲ್ – ವಿಜಯಪುರ ಮತ್ತು ಬಾಗಲಕೋಟೆ

ಕೆ.ಜೆ. ಜಾರ್ಜ್ – ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ

ಕೃಷ್ಣ ಬೈರೇಗೌಡ – ಬೆಂಗಳೂರು ನಗರ ಮತ್ತು ಹಾಸನ

ಈಶ್ವರ್ ಖಂಡ್ರೆ – ಬೀದರ್ ಮತ್ತು ಗದಗ

ಸತೀಶ್ ಜಾರಕಿಹೊಳಿ – ಬೆಳಗಾವಿ, ಧಾರವಾಡ ಮತ್ತು ಹಾವೇರಿ

ಪ್ರಿಯಾಂಕ್ ಖರ್ಗೆ – ಕಲಬುರಗಿ ಮತ್ತು ಯಾದಗಿರಿ

ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ – ರಾಯಚೂರು ಮತ್ತು ಕೊಪ್ಪಳ

ಯು.ಟಿ. ಖಾದರ್ ಫರೀದ್ – ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ

ಭೈರತಿ ಸುರೇಶ್ – ಕೋಲಾರ ಮತ್ತು ಚಿಕ್ಕಬಳ್ಳಾಪುರ

ಡಾ. ಯತೀಂದ್ರ ಸಿದ್ದರಾಮಯ್ಯ– ಮೈಸೂರು ಮತ್ತು ಚಾಮರಾಜನಗರ

ಪ್ರಕೃತಿ ವಿಕೋಪ ಸಂಭವಿಸುವ ಸಂದರ್ಭದಲ್ಲಿ ಸಂಬಂಧಿತ ಜಿಲ್ಲೆಗಳ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದು, ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಈ ಜವಾಬ್ದಾರಿಗಳನ್ನು ಸಚಿವರಿಗೆ ವಹಿಸಲಾಗಿದೆ.

Key words: Natural Disaster, Management, Ministers, appointed, districts

The post ಪ್ರಕೃತಿ ವಿಕೋಪ ನಿರ್ವಹಣೆ: ಜಿಲ್ಲೆಗಳ ಮೇಲುಸ್ತುವಾರಿಗೆ ಸಚಿವರ ನೇಮಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮಾಜಿ ಸಿಎಂ ದೇವರಾಜ ಅರಸು ನೂತನ ಪ್ರತಿಮೆ ಅನಾವರಣ: ಅರುಣ್ ಯೋಗಿರಾಜ್ ಶಿಲ್ಪಕ್ಕೆ ಮೆಚ್ಚುಗೆ

ಮೈಸೂರು,ಜೂನ್,25,2026 (www.justkannada.in):  ನಗರದ ಜಿಲ್ಲಾಧಿಕಾರಿ (ಡಿಸಿ) ಕಚೇರಿ ಆವರಣದ ಬಳಿ ರಾಜ್ಯದ...

ವಿದ್ಯುತ್‌ ವಿತರಣೆಗೆ ಟಾಟಾ ಸಂಸ್ಥೆ ಪರವಾನಗಿ ಅರ್ಜಿ: ಸೆಸ್ಕ್‌ ನಿಂದ ಆಕ್ಷೇಪಣೆ ಸಲ್ಲಿಕೆ

ಮೈಸೂರು, ಜೂನ್. 25, 2026 (www.justkannada.in): ಟಾಟಾ ಪವರ್ ಕಂಪನಿ ಲಿಮಿಟೆಡ್...

ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

ಕೊಪ್ಪಳ, ಜೂನ್,25,2026 (www.justkannada.in):  “ತುಂಗಭದ್ರಾ ನದಿ ಪಾತ್ರದ ರೈತರ ಹಿತರಕ್ಷಣೆಗೆ ಕರ್ನಾಟಕ,...

ಬಿಡದಿ ಟೌನ್ ಶಿಪ್: ಜೂ.27 ರಂದು ಬಹಿರಂಗ ಚರ್ಚೆಗೆ ಬರುವಂತೆ ಸಿಎಂ ಡಿಕೆಶಿಗೆ ಮತ್ತೆ ಪತ್ರ ಬರೆದ HDK

ಬೆಂಗಳೂರು,ಜೂನ್,25,2026 (www.justkannada.in):  ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ...