27
August, 2026

A News 365Times Venture

27
Thursday
August, 2026

A News 365Times Venture

ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಅರಿತುಕೊಂಡಿಲ್ಲ-BJP ವಿರುದ್ದ ಸಚಿವ ಲಕ್ಷ್ಮಣ್ ಸವದಿ ಕಿಡಿ

Date:

ಬೆಂಗಳೂರು,ಆಗಸ್ಟ್,25,2026 (www.justkannada.in): ಈ ಬಾರಿ ಅಧಿವೇಶನದಿಂದ ಯಾವ ಅನುಕೂಲ ಆಗಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಹಕಾರ ಸಚಿವ ಲಕ್ಷ್ಮಣ್ ಸವದಿ,   ಈ ವಿಚಾರವನ್ನು ನನ್ನ ಬದಲು ವಿರೋಧ ಪಕ್ಷದವರನ್ನ ಕೇಳಬೇಕು ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಲಕ್ಷ್ಮಣ್ ಸವದಿ, ಯಾವುದಕ್ಕಾಗಿ ಸದನ ಹಾಳು ಮಾಡಿದರು ಎಂದು ವಿಪಕ್ಷದವರನ್ನ ಕೇಳಬೇಕು.  ಚರ್ಚೆ ಮಾಡಿ ಸರ್ಕಾರ ಉತ್ತರ ಕೊಡುತ್ತೆ ಎಂದು ನಾವು ಹೇಳಿದ್ದವು.  ಪ್ರತಿಭಟನೆಯಿಂದಾಗಿ ಅಧಿವೇಶನ ಸರಿಯಾಗಿ ನಡೆದಿಲ್ಲ. ಈ ವಿಚಾರವನ್ನು ನನ್ನ ಬದಲು ವಿರೋಧ ಪಕ್ಷದವರನ್ನ ಕೇಳಬೇಕು ಎಂದರು.

ನಾಗೇಂದ್ರ ವಿರುದ್ದ ಆರೋಪ ಸಾಬೀತು ಆಗಿಲ್ಲ. ರಾಜ್ಯದಲ್ಲಿ ಬರಗಾಲ ಇದೆ. ಅದರ ಬಗ್ಗೆ ಚರ್ಚೆ ಮಾಡಬೇಕಿತ್ತು. ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಅರಿತುಕೊಂಡಿಲ್ಲ ಎಂದು ಸಹಕಾರ ಸಚಿವ ಲಕ್ಷ್ಮಣ್ ಸವದಿ ಕಿಡಿಕಾರಿದರು.

Key words: Opposition parties, responsibility, Minister, Laxman Savadi

The post ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಅರಿತುಕೊಂಡಿಲ್ಲ-BJP ವಿರುದ್ದ ಸಚಿವ ಲಕ್ಷ್ಮಣ್ ಸವದಿ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಅನಧಿಕೃತ ನಿಲುಗಡೆ: 382 ವಾಹನಗಳಿಗೆ ನೋಟಿಸ್ ಜಾರಿ

ಮೈಸೂರು,ಆಗಸ್ಟ್,25,2026 (www.justkannada.in): ಮೈಸೂರು ನಗರದ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ...

ನಾನೀಗ ಸರ್ಕಾರದ ಮುಖ್ಯಸ್ಥನಲ್ಲ: ಆದರೂ ನಾನು ಒಳ ಮೀಸಲಾತಿ, ಸಾಮಾಜಿಕ ನ್ಯಾಯದ ಪರ- ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್‌, 25,2026 (www.justkannada.in): ನಾನೀಗ ಸರ್ಕಾರದ ಮುಖ್ಯಸ್ಥನಲ್ಲ. ಅಧಿಕಾರ ಇರಲಿ, ಇಲ್ಲದಿರಲಿ...

ಸದನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಾಂಗ್ರೆಸ್ ಪಲಾಯಾನ-ಆರ್.ಅಶೋಕ್

ಬೆಂಗಳೂರು,ಆಗಸ್ಟ್,25,2026 (www.justkannada.in):  ಅಧಿವೇಶನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸದನವನ್ನ ಬಂದ್ ಮಾಡಿ...

ರಾಯಚೂರು ಐ.ಐ.ಐ.ಟಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ AI ಉತ್ಕೃಷ್ಟತಾ ಕೇಂದ್ರ ಸ್ಥಾಪನೆ-ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಆಗಸ್ಟ್,26,2026 (www.justkannada.in):  ರಾಜ್ಯದಲ್ಲಿ ಪರಿಪೂರ್ಣ ಕೈಗಾರಿಕಾ ಬೆಳವಣಿಗೆ ಸಾಧಿಸಲು ಸರಕಾರ ತೀರ್ಮಾನಿಸಿದ್ದು,...