ನವದೆಹಲಿ, ಮಾರ್ಚ್, 20,2026 (www.justkannada.in): ಇಸ್ರೇಲ್ ಮತ್ತು ಇರಾನ್ ಅಮೆರಿಕಾ ನಡುವಿನ ಯುದ್ಧದ ಬಿಸಿ ತೈಲ ಮಾರುಕಟ್ಟೆಗೆ ತಟ್ಟಿದ್ದು, ದೇಶಾದ್ಯಂತ ಪ್ರೀಮಿಯಂ ದರ್ಜೆಯ ಪವರ್ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದೆ.
ಹೌದು, ದೇಶದಲ್ಲಿ ಪ್ರೀಮಿಯಮ್ ಪೆಟ್ರೋಲ್ ದರಗಳನ್ನು ಏರಿಸಲಾಗಿದೆ. ಪ್ರೀಮಿಯಮ್ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 2.30 ರೂನಷ್ಟು ಹೆಚ್ಚಳ ಮಾಡಲಾಗಿದೆ. ಜಾಗತಿಕವಾಗಿ ತೈಲ ಸರಬರಾಜು ವ್ಯತ್ಯಯಗೊಂಡಿರುವ ಪರಿಣಾಮ ಈ ಏರಿಕೆ ಆಗಿರಬಹುದು. ಇನ್ನು ಅನ್ಲೆಡೆಡ್ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಡೀಸಲ್ ಬೆಲೆಯಲ್ಲೂ ಹೆಚ್ಚಳವಾಗಿಲ್ಲ.
ಪ್ರೀಮಿಯಮ್ ಪೆಟ್ರೋಲ್ ಹೈ ಆಕ್ಟೇನ್ ಪೆಟ್ರೋಲ್ ಆಗಿದೆ. ಇದು ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸಿ, ಮೈಲೇಜನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಬೆಲೆ ಮಾಮೂಲಿಯ ಪೆಟ್ರೋಲ್ಗಿಂತ ತುಸು ಹೆಚ್ಚಿನದ್ದಿರುತ್ತದೆ. ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್, ಎಚ್ಪಿಸಿಎಲ್ ಈ ಬೆಲೆ ಏರಿಕೆ ಮಾಡಿವೆ.
Key words: Premium petrol, price, hiked
The post ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ. ಏರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




