25
May, 2026

A News 365Times Venture

25
Monday
May, 2026

A News 365Times Venture

ಫುಟ್ ಪಾತ್ ನಲ್ಲಿ ಟಾಂಗ್ ಸ್ಟ್ಯಾಂಡ್:  ನಿರ್ಧಾರದಿಂದ ಹಿಂದೆ ಸರಿದ ಮೈಸೂರು ಪಾಲಿಕೆ

Date:

ಮೈಸೂರು,ಮಾರ್ಚ್,21,2026 (www.justkannada.in): ಮೈಸೂರು ಅರಮನೆ ಸಮೀಪದ ಫುಟ್ ಪಾತ್ ನಲ್ಲಿ ಟಾಂಗ್ ಸ್ಟ್ಯಾಂಡ್ ನಿರ್ಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಎಚ್ಚೆತ್ತ ಮೈಸೂರು ಮಹಾನಗರ ಪಾಲಿಕೆ ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

ಕೇಂದ್ರ ಸರ್ಕಾರದ ಸ್ವದೇಶ್ 2.0 ಯೋಜನೆಯಡಿ ಅರಮನೆ ಸನಿಹದ ಫುಟ್ ಪಾತ್ ನಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣಕ್ಕೆ ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿತ್ತು. ಟಾಂಗಾ ಸವಾರಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಜನನಿಬಿಡ ಪ್ರದೇಶವಾಗಿರುವ ಅರಮನೆ ಸನಿಹದ ಫುಟ್ ಪಾತ್ ನಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಸಮ್ಮತಿ ಸೂಚಿಸಿತ್ತು.

ಇದರ ಪರಿಣಾಮ ಫುಟ್ ಪಾತ್‌ ನಲ್ಲಿ ಜನರು ಸಂಚರಿಸಲು ಸಾಧ್ಯವಾಗದೆ ರಸ್ತೆಗಿಳಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಪಾದಚಾರಿ ರಸ್ತೆಯಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣ ಮುಂದುವರಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಜನರು ಎಚ್ಚರಿಕೆ ನೀಡಿದ್ದರು.

ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಕ್ಕಟ್ಟಿಗೆ ಸಿಲುಕಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳು ಈಗ ಫುಟ್ ಪಾತ್ ನಲ್ಲಿ ಟಾಂಗಾ ಸ್ಟ್ಯಾಂಡ್ ನಿರ್ಮಾಣಕ್ಕೆ ‌ಹಾಕಿದ್ದ ಅಡಿಪಾಯ‌ ತೆರವುಗೊಳಿಸಿದ್ದಾರೆ. ಇದೀಗ ಜನರು ಫುಟ್ ಪಾತ್ ನಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಾರೆ.

Key words: Tong stand, footpath,  Mysore City Corporation, decision

The post ಫುಟ್ ಪಾತ್ ನಲ್ಲಿ ಟಾಂಗ್ ಸ್ಟ್ಯಾಂಡ್:  ನಿರ್ಧಾರದಿಂದ ಹಿಂದೆ ಸರಿದ ಮೈಸೂರು ಪಾಲಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ, 25,2026 (www.justkannada.in):  ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ...

ಬಿಐಎಎಲ್ ನಲ್ಲಿ ಕೆಎಸ್ ಐಐಡಿಸಿಗೆ 16.49 ಕೋಟಿ ರೂ. ಲಾಭಾಂಶ: ಹಸ್ತಾಂತರ

ಬೆಂಗಳೂರು,ಮೇ,25,2026 (www.justkannada.in):  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್) ತನ್ನಲ್ಲಿ...

ವಿದ್ಯುತ್‌ ಪರಿವರ್ತಕಗಳ ಬ್ಯಾಂಕ್‌ ಸ್ಥಾಪನೆ: ಟ್ರಾನ್ಸ್‌ ಫಾರ್ಮರ್‌ ಗಳ ತುರ್ತು ನಿರ್ವಹಣೆಗೆ ‘ಸೆಸ್ಕ್‌’ ಸಜ್ಜು

ಮೈಸೂರು, ಮೇ, 25, 2026 (www.justkannada.in):  ಗ್ರಾಹಕರಿಗೆ ಅಡಚಣೆರಹಿತ ವಿದ್ಯುತ್‌ ಪೂರೈಕೆ...

ಸಿಎಂ ಸಿದ್ದು ಸು”ಭದ್ರ”; ಡಿಕೆಶಿಗೆ “ಗೃಹ”, ಡಿಕೆಸುಗೆ “ರಾಜ್ಯಸಭಾ” ಸ್ಥಾನ..? ಹೈಕಮಾಂಡ್‌ ತಂತ್ರ .!

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮುಖ್ಯಮಂತ್ರಿ ಹುದ್ದೆ ಕುರಿತ ಚರ್ಚೆಗಳು ಜೋರಾಗಿರುವ...