ಬೆಂಗಳೂರು,ಆಗಸ್ಟ್,9,2025 (www.justkannada.in): 2018ರಲ್ಲಿ ಬದಾಮಿಯಲ್ಲೂ ಸಿಎಂ ಸಿದ್ದರಾಮಯ್ಯಗೆ ಸೋಲಿನ ಭಯವಿತ್ತು. ಈ ವೇಳೆ ನಾನು ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3 ಸಾವಿರ ವೋಟ್ ಖರೀದಿಸಿದ್ದವು ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿಎಂ ಇಬ್ರಾಹಿಂ ನಿನ್ನೆ ಮೈಸೂರಿನ ಕೆಎಸ್ ಒಯು ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಈ ವೇಳೆ ಮಾತನಾಡಿರುವ ಸಿಎಂ ಇಬ್ರಾಹಿಂ , ಸಿದ್ದರಾಮಯ್ಯರನ್ನ ಬಾದಾಮಿಗೆ ಕಳುಹಿಸಿದ್ದೇ ನಾನು. ಬಿಬಿ ಚಿಮ್ಮನಕಟ್ಟಿ ಒಪ್ಪದಿದ್ದಾಗ ಅವರ ಪತ್ನಿ ಕಡೆಯಿಂದ ಒಪ್ಪಿಸಿದ್ದೆ. ಚಾಮುಂಢೇಶ್ವರಿ ಕ್ಷೇತ್ರದಲ್ಲಿ 30 ಸಾವಿರ ಮತಗಳಿಂದ ಗೆಲ್ಲುತ್ತೇವೆ ಎಂದಿದ್ದರು ಪಕ್ಕದಲ್ಲೇ ಇದ್ದ ಮಹದೇವಪ್ಪ ಹೇಳಿದ್ದರು. ಆಗ ನಾನು ನೀನೇ ಮೊದಲು ಸೋಲುತ್ತೀಯಾ ಅಂತಾ ಹೇಳಿದ್ದೆ. ಕೊನೆಗೆ ಚುನಾವಣಾ ಫಲಿತಾಂಶ ಹಾಗೆಯೇ ಬಂತು ಎಂದರು.
ಮತದಾನ ಎಣಿಕೆ ದಿನ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದರು. ಭಯ ಪಡಬೇಡ ನಾನು ಮ್ಯಾನೇಜ್ ಮಾಡಿದ್ದೀನಿ ಎಂದಿದ್ದೆ. 800ರಿಂದ ಸಾವಿರ ವೋಟ್ ನಿಂದ ಗೆಲ್ತೀಯಾ ಅಂತ ಹೇಳಿದ್ದೆ ಬಾದಾಮಿಯ ಕ್ಷೇತ್ರದಲ್ಲೂ ಸಿದ್ದರಾಮಯ್ಯಗೆ ಸೋಲುವ ಭಯವಿತ್ತು. ನಾನು ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3ಸಾವಿರ ವೋಟ್ ಖರೀದಿಸಿದ್ದವು. ಕಡಿಮೆ ಅಂತರದಲ್ಲಿ ಗೆದ್ದೇ ಗೆಲ್ಲುತ್ತೀಯಾ ಎಂದಿದ್ದೆ ಅದೇ ರೀತಿ ಫಲಿತಾಂಶ ಬಂತು. ಕೊನೆಗೆ ಸಿದ್ದರಾಮಯ್ಯ 6 ತಿಂಗಳ ಬಳಿಕ ಆ ಸಾಲ ವಾಪಸ್ ಕೊಟ್ಟಿದ್ದಾರೆ. ಈ ವಿಚಾರ ಹೇಳೋಕೆ ನನಗೆ ಯಾವುದೇ ಭಯ ಇಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ ಎನ್ನಲಾಗಿದೆ.
Key words: Siddaramaiah, afraid, defeat, Badami, CM Ibrahim
The post ಬದಾಮಿಯಲ್ಲೂ ಸಿದ್ದರಾಮಯ್ಯಗೆ ಸೋಲಿನ ಭಯವಿತ್ತು: ಸಾಲ ಮಾಡಿ 3 ಸಾವಿರ ವೋಟ್ ಖರೀದಿಸಿದ್ವಿ- ಸಿಎಂ ಇಬ್ರಾಹಿಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.