ಬೆಂಗಳೂರು,ಆಗಸ್ಟ್,18,2026 (www.justkannada.in): ಬಿಡದಿ ಟೌನ್ ಶಿಪ್ ನಿಂದ ಮುಂದೆ ಪರಿಣಾಮ ಬೀರಲಿದೆ. ಹೀಗಾಗಿ ಸರ್ಕಾರ ಕೂಡಲೇ ಈ ಯೋಜನೆಯನ್ನು ಕೈಬಿಡಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಆಗ್ರಹಿಸಿದರು.
ಇಂದು ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆದ ಜೆಡಿಎಸ್ ಬೃಹತ್ ಹೋರಾಟಕ್ಕೆ ಚಾಲನೆ ನೀಡಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಾತನಾಡಿದರು.
ಬಿಡದಿ ವ್ಯಾಪ್ರಿಯಲ್ಲಿ ಸಣ್ಣ ಸಣ್ಣ ರೈತರಿದ್ದಾರೆ. ರೈತರಿಗೆ ಯಾವುದೇ ಅನ್ಯಾಯವಾಗಬಾರದು. ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರ ಧರಣಿ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳೂ ಸ್ಥಳಕ್ಕೆ ಭೇಟಿ ನೀಡಿದ್ದರು. ಅವರು ಕೂಡ ಟೌನ್ ಶಿಪ್ ಯೋಜನೆ ಬೇಡ ಅಂತಾ ಹೇಳಿದ್ದಾರೆ. ಬಿಜೆಪಿಯವರು ಕೂಡ ಟೌನ್ ಶಿಪ್ ವಿರೋಧಿಸಿದ್ದಾ. ರೆ ಬಿಡದಿ ಬದಲು ನೈಸ್ ರೋಡ್ ಗೆ ನೀಡಿದ್ದ ಭೂಮಿ ಇದೆ ಆ ಭೂಮಿಯನ್ನು ಬಳಸಿ ಅಂತಾ ರಾಜ್ಯಪಾಲರೂ ಕೂಡ ಹೇಳಿದ್ದಾರೆ. ಈ ಎಲ್ಲಾ ವಿಚಾರಗಳು ಸಿಎಂ ಡಿಕೆಶಿಗೆ ತಿಳಿದಿಲ್ಲ ಅಂತೇನಿಲ್ಲ. 27 ರಿಂದ 28 ವರ್ಷಗಳಿಂದ ನೈಸ್ ಅಕ್ರಮ ದಂಧೆಯಾಗಿದೆ. ನೈಸ್ ಅಕ್ರಮದ ಬಗ್ಗೆ ಮಾತನಾಡುವ ನೈತಿಕತೆ ಕೆಲವರಿಗಿಲ್ಲ. ಕೋರ್ಟ್ ಕೂಡ ಅದರ ಮೇಲೆ ಖೇಣಿಗೆ ಅಧಿಕಾರ ಇಲ್ಲ ಎಂದಿದೆ. ಆದರೂ ಸರ್ಕಾರ ಆ ಜಾಗವನ್ನ ವಶಪಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಟೌನ್ ಶಿಪ್ ನಿಂದ ಮುಂದೆ ಪರಿಣಾಮ ಬೀರಲಿದೆ. ಎಲ್ಲ ಆದ ಮೇಲೆ ಕೊನೆಯಲ್ಲಿ ಪಶ್ಚಾತಾಪ ಬೇಡ ಬಿಡದಿ ಯೋಜನೆಯನ್ನು ಸರ್ಕಾರ ತಕ್ಷಣ ಕೈಬಿಡಲಿ ಅಗತ್ಯವಿದ್ದರೇ ನಾವು ಹೋರಾಟ ಮಾಡಲು ಸಿದ್ದ ಎಂದು ತಿಳಿಸಿದರು.
Key words: Bidadi Township, drop, project, Former PM, HD Devegowda
The post ಬಿಡದಿ ಟೌನ್ ಶಿಪ್ ನಿಂದ ಮುಂದೆ ಪರಿಣಾಮ ಬೀರಲಿದೆ, ತಕ್ಷಣವೇ ಯೋಜನೆ ಕೈಬಿಡಿ- ಮಾಜಿ ಪ್ರಧಾನಿ HDD ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




