15
July, 2026

A News 365Times Venture

15
Wednesday
July, 2026

A News 365Times Venture

ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ ಕೆ ಶಿವಕುಮಾರ್

Date:

ಬೆಂಗಳೂರು, ಜುಲೈ 13,2026 (www.justkannada.in): ಎರಡನೇ ವಿಮಾನ ನಿಲ್ದಾಣ ಬೆಂಗಳೂರು ದಕ್ಷಿಣದಲ್ಲೇ ಆಗಲಿದ್ದು, ಊರುಗಳನ್ನು ಸ್ಥಳಾಂತರ ಮಾಡದಂತೆ ಜಾಗ ಹುಡುಕಲು ಸೂಚನೆ ನೀಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಎರಡನೇ ವಿಮಾನ ನಿಲ್ದಾಣ ಸಂಬಂಧ ವಿಧಾನಸೌಧದಲ್ಲಿ ನಡೆದ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಎರಡನೇ ವಿಮಾನ ನಿಲ್ದಾಣ ಸಂಬಂಧ ಇದುವರೆಗೂ ಏನೆಲ್ಲಾ ಆಗಿದೆ ಎಂಬ ಪ್ರಸ್ತಾವನೆ ನೀಡಿದ್ದಾರೆ. ಊರುಗಳು ಒಕ್ಕಲೆಬ್ಬಿಸದೇ ಗುಡ್ಡಗಳು ಇಲ್ಲದಿರುವ ಕಡೆ, ಕಡಿಮೆ ಜಾಗದಲ್ಲಿ ತಾಂತ್ರಿಕವಾಗಿ ಕಾರ್ಯಸಾಧುವಾಗಿರುವ ಜಾಗ ನೋಡುವಂತೆ ಸೂಚಿಸಿದ್ದೇನೆ. ನಂತರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ” ಎಂದು ತಿಳಿಸಿದರು.

ಯಾವ ಜಾಗದಲ್ಲಿ ಮಾಡಲಾಗುವುದು ಎಂದು ಕೇಳಿದಾಗ, “ಬಹುತೇಕ ಬೆಂಗಳೂರು ದಕ್ಷಿಣದಲ್ಲೇ ಆಗಲಿದೆ. ಈಗ ಕೊಟ್ಟಿರುವ ಪ್ರಸ್ತಾವನೆಗಳು ದಕ್ಷಿಣದ್ದೇ ಆಗಿವೆ. ಭೂಮಿ ಬೆಲೆ ಕಡಿಮೆ ಇರಬೇಕು, ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗಬಾರದು” ಎಂದು ತಿಳಿಸಿದರು.

Key words: Bengaluru, second airport, south, CM, DK Shivakumar

The post ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ ಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜು.15ರ ಸಭೆಯ ಬಳಿಕ ಕಾವೇರಿ ನೀರು ಹರಿಸುವ ಬಗ್ಗೆ ತೀರ್ಮಾನ- ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಜುಲೈ,13,2026 (www.justkannada.in): “ಕಾವೇರಿ ವಿಚಾರದಲ್ಲಿ ನಾವು ರೈತರನ್ನು ಬದುಕಿಸಬೇಕು. ಕುಡಿಯುವ...

ಬಿಡದಿ ಟೌನ್ ಶಿಪ್ ಸರ್ವೇಗೆ ಬಂದಿದ್ದ ಅಧಿಕಾರಿಗಳ ಮೇಲೆ ಹಲ್ಲೆ ವಿಚಾರ: ರೈತರಿಗೆ ಕೇಂದ್ರ ಸಚಿವ HDK ಸಂದೇಶ

ಬೆಂಗಳೂರು,ಜುಲೈ,13,2026 (www.justkannada.in): ರಾಮನಗರದ ಬಿಡದಿಯ ಟೌನ್ ಶಿಪ್ ವಿರುದ್ದ ರೈತರ ಆಕ್ರೋಶದ...

ದಸರಾದಲ್ಲಿ ಕಂಬಳ ಆಯೋಜನೆ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ- ಸಚಿವ ಯತೀಂದ್ರ ಸಿದ್ದರಾಮಯ್ಯ

ಕಲಬುರಗಿ,ಜುಲೈ,13,2026 (www.justkannada.in): ದಸರಾದಲ್ಲಿ ಕಂಬಳ ಆಯೋಜನೆ ಬಗ್ಗೆ ಸಿಎಂ ತೀರ್ಮಾನ ಮಾಡುತ್ತಾರೆ...

ರೈತರ ಆಕ್ರೋಶದ ಕಟ್ಟೆಯೊಡೆಯುವ ಮುನ್ನ ನಾಲೆಗಳಿಗೆ ನೀರು ಹರಿಸಿ- ಕೇಂದ್ರ ಸಚಿವ HDK ಆಗ್ರಹ

ಬೆಂಗಳೂರು,ಜುಲೈ,14,2026 (www.justkannada.in):  ರೈತರ ಆಕ್ರೋಶದ ಕಟ್ಟೆಯೊಡೆಯುವ  ಮೊದಲು ಕೆಆರ್ ಎಸ್ ಜಲಾಶಯದಿಂದ...