10
March, 2026

A News 365Times Venture

10
Tuesday
March, 2026

A News 365Times Venture

ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಇರುವುದು ಮಣ್ಣಿನಲ್ಲೇ ಹೊರತು ಮೊಬೈಲ್ ನಲ್ಲಿ ಅಲ್ಲ: ಕೆ.ವಿ.ಪ್ರಭಾಕರ್

Date:

ಕೊಪ್ಪಳ ಮಾರ್ಚ್, 9,2025 (www.justkannada.in): ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಇರುವುದು ಮಣ್ಣಿನಲ್ಲೇ ಹೊರತು ಮೊಬೈಲ್ ನಲ್ಲಿ ಅಲ್ಲ. ಬಾಲ ಭವನ ನಿಮ್ಮೊಳಗಿನ ಪ್ರತಿಭೆ ಹೊರಗೆ ತರುವ ವೇದಿಕೆಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಗೆಗಾರ ಕೆ.ವಿ.ಪ್ರಭಾಕರ್ ನುಡಿದರು.

ಬಾಲಭವನ‌ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಹಾಗೂ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ  ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಮಗುವಿಗೆ ಊಟ ಮಾಡಿಸುವಾಗಲೂ ತಾಯಂದಿರು ಮೊಬೈಲ್ ನಲ್ಲಿ ತೋರಿಸುವುದರಿಂದ ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ಮೊಬೈಲ್ ಗೆ ಅಂಟಿ ಕೊಳ್ಳುತ್ತಾರೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದರು.

ಮಕ್ಕಳು ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿತಾಗ ಅವರಲ್ಲಿ ಸೃಜನಶೀಲತೆ ಅರಳುತ್ತದೆ. ಸ್ವಂತಕ್ಕೆ  ಆಟದ ಸಾಮಾನುಗಳನ್ನು ಸೃಷ್ಟಿಸಿಕೊಳ್ಳುವುದು ಮಕ್ಕಳ ಮೊದಲ ಸೃಜನಶೀಲ ಕ್ರಿಯೆ. ಮನೆಯಿಂದ ಹೊರಗೆ ಮಕ್ಕಳು ಆಟಕ್ಕೆ ಇಳಿದಾಗ ಕೈಗೆ ಸಿಕ್ಕ ಸಾಮಾಗ್ರಿಗಳೇ ಅವರ ಆಟದ ವಸ್ತುಗಳಾಗುತ್ತವೆ. ಕೇವಲ ನಾಲ್ಕು ಗೋಡೆ ಮಧ್ಯೆ ಕುಳ್ಳಿರಿಸಿ ಪ್ಲಾಸ್ಟಿಕ್ ಆಟದ ವಸ್ತುಗಳು, ಮೊಬೈಲ್ ಗಳ ಗೀಳು ಹಚ್ಚಿಕೊಳ್ಳುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ನಾವೆಲ್ಲಾ ಆಡುವಾಗ ಪ್ಲಾಸ್ಟಿಕ್ ವಸ್ತುಗಳ ಹಾವಳಿಯಾಗಲಿ, ಮೊಬೈಲ್ ಗಳ  ಚಾಳಿಯಾಗಲಿ ಇರಲಿಲ್ಲ. ಹೀಗಾಗಿ ನಮಗೆ ಪುಸ್ತಕಗಳು, ಮಣ್ಣಿನ ವಸ್ತುಗಳು ಹೆಚ್ಚು ಹತ್ತಿರವಾದವು. ಕೆಳಗೆ ಕುಳಿತಿರುವ ನೀವುಗಳು ಮುಂದಿನ ದಿನಗಳಲ್ಲಿ  ಇಲ್ಲಿ ಮೇಲೆ ಕೂರುವಂತಾಗಬೇಕು ಎಂದರೆ ಪುಸ್ತಕಗಳ ಒಡನಾಟ ಮುಖ್ಯ. ಇರದಿಂದ ಓದು, ಬರಹದ ಜೊತೆಗೆ ಗ್ರಹಿಕೆಯೂ ಉತ್ತಮಗೊಳ್ಳುತ್ತದೆ, ಜೊತೆಗೆ ಗ್ರಹಿಕೆಯೂ ವೃದ್ಧಿಯಾಗುತ್ತದೆ ಎಂದರು.

ಮಕ್ಕಳಿಗೆ ಪೋಷಕರೇ ಪ್ರಥಮ ಗುರು. ಆದ್ದರಿಂದ ಮಕ್ಕಳು ಪೋಷಕರ ಮಾತನ್ನು ಕೇಳಿಸಿಕೊಳ್ಳಬೇಕು. ಮಕ್ಕಳು ದೊಡ್ಡವರಾದ ಮೇಲೆ ಪೋಷಕರನ್ನು ಅಷ್ಟೇ ಜವಾಬ್ದಾರಿಯಿಂದ, ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದರು.

ಆಟೋಚಾಲಕರ ಮಕ್ಕಳು, ಪಂಕ್ಚರ್ ಅಂಗಡಿಯವರ ಮಕ್ಕಳೆಲ್ಲಾ ಈಗ ಉನ್ನತ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆಯುತ್ತಿದ್ದಾರೆ. ತಂದೆ ತಾಯಿಗೆ ಇದಕ್ಕಿಂತ ಖುಷಿಯ ಸಂಗತಿ ಬೇರೆ ಇಲ್ಲ. ಆದ್ದರಿಂದ ಮಕ್ಕಳು ಪೋಷಕರ ಶ್ರಮ, ಪ್ರೀತಿ, ಕಾಳಜಿಯನ್ನು ನೆನಪಿಟ್ಟುಕೊಳ್ಳಬೇಕು ಎಂದು ಕರೆ ನೀಡಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಕೆ.ವಿ.ಪ್ರಭಾಕರ್ ಹಾರೈಸಿದರು.

Key words: Children, creativity, soil, not, mobile phones, K.V. Prabhakar

The post ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಇರುವುದು ಮಣ್ಣಿನಲ್ಲೇ ಹೊರತು ಮೊಬೈಲ್ ನಲ್ಲಿ ಅಲ್ಲ: ಕೆ.ವಿ.ಪ್ರಭಾಕರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಡಿಕೆಶಿ ಅತ್ಯಂತ ಯಶಸ್ವಿ ಅಧ್ಯಕ್ಷರು: ಪಕ್ಷ ಅಧಿಕಾರಕ್ಕೆ ತರುವುದೇ ಅವರ ಕನಸಾಗಿತ್ತು- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಮಾರ್ಚ್,10,2026 (www.justkannada.in): ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ 6 ವರ್ಷ ಪೂರೈಸಿದ್ದು...

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಮಾನ ನಿಲ್ದಾಣ: ಸಭೆ ಮಾಡಿ ಅಂತಿಮ ನಿರ್ಧಾರ- ಎಂ.ಬಿ ಪಾಟೀಲ್

ಬೆಂಗಳೂರು,ಮಾರ್ಚ್,10,2026 (www.justkannada.in): ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ...

ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಕೇಂದ್ರ ಸಚಿವರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,10,2026 (www.justkannada.in):  ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಘರ್ಷ ಪರಿಸ್ಥಿತಿಯ ಬಿಸಿ ಭಾರತಕ್ಕೂ ತಟ್ಟಿದ್ದು...

ನಾಳೆ ಸರ್ಕಾರಿ ವೈದ್ಯರು ಸಿಬ್ಬಂದಿಗಳ ಮುಷ್ಕರ: ಸಂಧಾನ ಸಭೆಗೆ ಮುಂದಾದ ಸಿಎಂ

ಬೆಂಗಳೂರು,ಮಾರ್ಚ್,10,2026 (www.justkannada.in):  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆಯಿಂದ  ಆರೋಗ್ಯ ಇಲಾಖೆಯ...