3
March, 2026

A News 365Times Venture

3
Tuesday
March, 2026

A News 365Times Venture

ಮಡಿವಾಳ ಮಾಚಿದೇವರಂತೆ ವೃತ್ತಿಯಲ್ಲಿ ಕಾಯಕ ನಿಷ್ಠೆ ಕಾಣಬೇಕು : ಬಿ.ಸಿ ಶಿವಾನಂದಮೂರ್ತಿ

Date:

ಮೈಸೂರು,ಫೆಬ್ರವರಿ,1,2025 (www.justkannada.in): ಮಡಿವಾಳ ವೃತ್ತಿಯಲ್ಲಿ ಕಾಯಕ ನಿಷ್ಠೆ ಕಂಡವರುವರು ಮಡಿವಾಳ ಮಾಚಿದೇವ ಎಂದರೆ ತಪ್ಪಾಗುವುದಿಲ್ಲ. ತಮ್ಮ ಕೆಲಸವನ್ನು ಅವರು ವೃತ್ತಿ ಎಂದು ಪರಿಗಣಿಸದೆ ದೇವರ ಕೆಲಸ ಎಂದು ಜನರ ಸೇವೆ ಮಾಡುತ್ತಿದರು. ಅವರ ಆಲೋಚನೆಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ. ಸಿ ಶಿವಾನಂದಮೂರ್ತಿ ಅವರು ಹೇಳಿದರು.

ಇಂದು ಕರ್ನಾಟಕ ಸಂಘದಲ್ಲಿ ಹಮ್ಮಿಕೊಳ್ಳಲ್ಲಾಗಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಅಂಟಿಕೊಂಡಿದ್ದ ಮೋಸ, ದರೋಡೆ, ವಂಚನೆಗಳಂತಹ ಅನಾಚಾರಗಳನ್ನು ಹೋಗಲಾಡಿಸಲು ದೃಢ ಸಂಕಲ್ಪ ತೊಟ್ಟಿ ನಿಂತ ದಾರ್ಶನಿಕ ವ್ಯಕ್ತಿ. ಸಮಾಜದ ಒಳಿತಿಗಾಗಿ ಶ್ರಮಿಸಿದ ಮಾಚಿದೇವ ಅವರ ಕೊಡುಗೆ ನಿಜಕ್ಕೂ ಅಪಾರವಾದದ್ದು ಎಂದರು.

ಉಪ ಪ್ರಾಂಶುಪಾಲರಾದ ಕೊತ್ತತ್ತಿ ರಾಜು ಅವರು ಮಡಿವಾಳ ಮಾಚಿದೇವ ಅವರ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.

ಸಮಾಜದಲ್ಲಿ ಹೀನಾಯವಾಗಿ ಕಾಣುತ್ತಿದ ಮಡಿವಾಳ ವೃತ್ತಿಗೆ ಘನತೆ, ಗೌರವ ತಂದು ಕೊಟ್ಟವರು ಮಡಿವಾಳ ಮಾಚಿದೇವ ಅವರು ಎಂದರೆ ತಪ್ಪಾಗಲಾರದು, ಅವರು ಬಟ್ಟೆಯನ್ನು ಮಾತ್ರ ಮಡಿ ಮಾಡಿದವರಲ್ಲ  ಸಮಾಜದಲ್ಲಿದ್ದ ಅನಾಚಾರಗಳನ್ನು ತೊಳೆದು ಸಮಾಜವನ್ನು ಮಡಿ ಮಾಡಿದವರು ಎಂದರು.

12 ನೇ ಶತಮಾನದ ವಚನಕಾರರಲ್ಲಿ ಒಬ್ಬರಾದ ಇವರು ವೇದಾ ಪುರಾಣ, ಪರಾಂಗತ, ಸಾಹಿತ್ಯ, ಸಂಸ್ಕೃತಿ, ಬರವಣಿಗೆಗಳಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ನಿಜಕ್ಕೂ ಇವರ ಕೊಡುಗೆ ಅಪಾರವಾದದ್ದು ಇಂದಿನ ಯುವ ಪೀಳಿಗೆಗೆ ಇವರ ವಚನಗಳನ್ನು ಓದುವಂತೆ ನಾವೆಲ್ಲ ಒಟ್ಟುಗೂಡಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಸಮುದಾಯದಲ್ಲಿ ಸಾಧನೆ ಗೈದಿರುವ ಹಾಗೂ ಸಮಾಜ ಸೇವೆ ಮಾಡಿರುವಂತಹ ಗಣ್ಯವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಡಿವಾಳ ಸಂಘದ ಅಧ್ಯಕ್ಷ ಎಂಎನ್  ರವಿ, ನಗರ ಸಭಾ ಅಧ್ಯಕ್ಷ ನಾಗೇಶ್, ಮಾಜಿ ನಗರ ಸಭೆ ಸದಸ್ಯೆ ಪದ್ಮ ನವೀನ್, ವೃತ್ತಿ ಅರೋಗ್ಯ ನಿರೀಕ್ಷಕರಾದ ಗೋವಿಂದ ಮತ್ತು ಮಡಿವಾಳ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: profession, Loyalty, Madiwala Machideva Jayanthi, B.C. Shivanandamurthy

The post ಮಡಿವಾಳ ಮಾಚಿದೇವರಂತೆ ವೃತ್ತಿಯಲ್ಲಿ ಕಾಯಕ ನಿಷ್ಠೆ ಕಾಣಬೇಕು : ಬಿ.ಸಿ ಶಿವಾನಂದಮೂರ್ತಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮನೆಗಳ ಮುಂದೆ ಅಳವಡಿಸಿದ್ದ ನೀರಿನ ಮೀಟರ್ ಕಳ್ಳತನ

ಮೈಸೂರು,ಮಾರ್ಚ್,3,2026 (www.justkannada.in): ಮೈಸೂರು ನಗರದ 50ನೇ ವಾರ್ಡ್‌ನ ಬೆಸ್ತಕೇರಿ ಪ್ರದೇಶದಲ್ಲಿ ನೀರಿನ...

‘Whistle Blower Policy’ ಜಾರಿ:  ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ

ಬೆಂಗಳೂರು, ಮಾರ್ಚ್,3,2026 (www.justkannada.in): ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ...

ಖಮನೈ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಮೌನ: ಸೋನಿಯಾ ಗಾಂಧಿ ಕಿಡಿ

ನವದೆಹಲಿ, ಮಾರ್ಚ್, 3,2026 (www.justkannada.in): ಇರಾನ್ ಮೇಲೆ ಇಸ್ರೇಲ್, ಅಮೇರಿಕಾ ಜಂಟಿ...

ಮಧ್ಯ ಪ್ರಾಚ್ಯ ಕೊಲ್ಲಿ ದೇಶಗಳಲ್ಲಿ ಘರ್ಷಣೆ: ಸಂತ್ರಸ್ತರ ನೆರವಿಗೆ ಸಹಾಯವಾಣಿ ಆರಂಭ

ಬೆಂಗಳೂರು ಗ್ರಾಮಾಂತರ, ಮಾರ್ಚ್,3,2026 (www.justkannada.in):  ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಯುದ್ಧ,ಸಂಘರ್ಷ...