29
April, 2026

A News 365Times Venture

29
Wednesday
April, 2026

A News 365Times Venture

ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ಸಂತೋಷ, ಸ್ವಾಗತ ಮಾಡ್ತೇವೆ- ಗೃಹ ಸಚಿವ ಪರಮೇಶ್ವರ್

Date:

ಬೆಂಗಳೂರು,ಏಪ್ರಿಲ್,29,2026 (www.justkannada.in): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ಸಂತೋಷ. ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಿಎಂ ವಿಚಾರವಾಗಿ ಹೆಚ್ಚು ಮಾಹಿತಿ ನಮಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ  ರಾಜ್ಯದ ಎಲ್ಲಾ ವಿಚಾರ ಗೊತ್ತಿದೆ.  ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರೋದೇ ಸೌಭಾಗ್ಯ.  ಖರ್ಗೆಗೆ ರಾಜ್ಯದ ರಾಜಕಾರಣ ಗೊತ್ತಿದೆ. ಅನುಭವ ಎಲ್ಲವೂ ಇದೆ. ಖರ್ಗೆ ಸಿಎಂ ಆದರೆ ಬಹಳ ಸಂತೋಷ ಸ್ವಾಗತ ಮಾಡುತ್ತೇವೆ ಎಂದರು.

56 ಸಾವಿರ ಹುದ್ದೆಗಳ ನೇಮಕಾತಿ ಆಗಲಿದೆ 

ಒಳಮೀಸಲಾತಿ ಅಧಿಸೂಚನೆ ಪ್ರಕಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್ ತೀರ್ಮಾನಕ್ಕೆ ತಕ್ಕಂತೆ ಅಧಿಸೂಚನೆ ಬಂದಿದೆ. ಖಾಲಿಯಿರುವ 56 ಸಾವಿರ ಹುದ್ದೆಗಳ ನೇಮಕಾತಿ ಆಗಲಿದೆ  ನಮ್ಮ ಇಲಾಖೆಯಲ್ಲೂ ಖಾಲಿ ಹುದ್ದೆಗಳ ಭರ್ತಿ ಮಾಡುತ್ತೇವೆ ಎಂದರು.

ವಿನಯ್ ಕುಲಕರ್ಣಿ ವಿಚಾರದಲ್ಲಿ ಸ್ಪೀಕರ್ ಮೌನ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಅದು ಒಂದು ಪ್ರಕ್ರಿಯೆ ಅದನ್ನ ತಡೆಯಲು ಆಗುವುದಿಲ್ಲ.  ಒಂದೆರಡು ದಿನ ವಿಳಂಬ ಆಗಬಹುದು ಅಷ್ಟೆ ಎಂದರು.

Key words:  welcome, Mallikarjun Kharge, CM, Home Minister, Parameshwar

The post ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ಸಂತೋಷ, ಸ್ವಾಗತ ಮಾಡ್ತೇವೆ- ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಬೆಂಗಳೂರು,ಏಪ್ರಿಲ್,29,2026 (www.justkannada.in):  ಬಿಸಿಲಿನ ತಾಪದಿಂದ ಬಸವಳಿದಿದ್ದ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆಗೆ...

ಖರ್ಗೆ ಸಿಎಂ ಆದ್ರೆ ಸ್ವಾಗತ ಎಂಬ ಹೇಳಿಕೆ: MLC ಯತೀಂದ್ರ ಪ್ರತಿಕ್ರಿಯಿಸಿದ್ದು ಹೀಗೆ?

ರಾಯಚೂರು,ಏಪ್ರಿಲ್,29,2026 (www.justkannada.in):  ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಸಂತೋಷ ಸ್ವಾಗತಿಸುತ್ತೇವೆ ಎಂಬ...

ತಂಬಾಕು ಹರಾಜು ಕಾರ್ಯ ವಿಧಾನ ಸುಧಾರಣೆಗೆ ಸಂಸದ ಯದುವೀರ್ ಆಗ್ರಹ

ಮೈಸೂರು, ಏಪ್ರಿಲ್,29,2026 (www.justkannada.in):  ತಂಬಾಕು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು, ಹರಾಜು...

ಜಾಮೀನು ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್

ಬೆಂಗಳೂರು,ಏಪ್ರಿಲ್,29,2026 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ನಟ ದರ್ಶನ್...