26
March, 2026

A News 365Times Venture

26
Thursday
March, 2026

A News 365Times Venture

ಮುಡಾ (MDA) ಮಾಜಿ ಆಯುಕ್ತ ದಿನೇಶ್  ಮತ್ತೊಂದು ಹಗರಣ : ಮಾಸಿಕ ₹265 ಬಾಡಿಗೆಗೆ ಮೊಬೈಲ್ ಟವರ್ ಅನುಮತಿ!

Date:

 

ಮೈಸೂರು, ಮಾ.೨೬,೨೦೨೬: ಮುಡಾ (MDA) ಮಾಜಿ ಆಯುಕ್ತ ದಿನೇಶ್ ಕುಮಾರ್ ಅವಧಿಯಲ್ಲಿ ನಡೆದ ಮತ್ತೊಂದು ಅನುಮಾನಾಸ್ಪದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಿಜಯನಗರ ಮೊದಲನೇ ಹಂತದಲ್ಲಿರುವ ಮುಡಾ ವಾಣಿಜ್ಯ ಸಂಕೀರ್ಣದ ಮೇಲ್ಚಾವಣಿಯಲ್ಲಿ ಖಾಸಗಿ ಸಂಸ್ಥೆಗೆ ಮೊಬೈಲ್ ಟವರ್ ಅಳವಡಿಸಲು ಅನುಮತಿ ನೀಡಲಾಗಿದ್ದು, ತಿಂಗಳ ಬಾಡಿಗೆಯನ್ನು ಕೇವಲ ₹265 ಎಂದು ನಿಗದಿ ಮಾಡಿರುವುದು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ.

ಸಾಮಾನ್ಯವಾಗಿ ಖಾಸಗಿ ಸ್ಥಳಗಳಲ್ಲಿ ಟವರ್ ಅಳವಡಿಸಲು ಸಾವಿರಾರು ರೂಪಾಯಿ ಬಾಡಿಗೆ ಪಾವತಿಸುವ ಸಂಸ್ಥೆಗೆ, ಮುಡಾ ಆಸ್ತಿ ಮೇಲೆ ಕೇವಲ ₹265 ನಿಗದಿ ಮಾಡಿರುವುದು ಅನುಮಾನಕ್ಕೆ ಎಡೆಮಾಡಿದೆ. ಇದಲ್ಲದೆ, ಈ ಸಂಬಂಧ ಯಾವುದೇ ಅಧಿಕೃತ ಒಪ್ಪಂದ ಅಥವಾ ದಾಖಲೆಗಳು ಮುಡಾ ಕಚೇರಿಯಲ್ಲಿ ಲಭ್ಯವಿಲ್ಲ ಎಂಬುದು ಮತ್ತಷ್ಟು ಸಂಶಯವನ್ನು ಹೆಚ್ಚಿಸಿದೆ.

ಕೇವಲ ಒಂದು ಮನವಿ ಪತ್ರದ ಆಧಾರದ ಮೇಲೆ, ಯಾವುದೇ ಷರತ್ತುಗಳಿಲ್ಲದೆ ಅನುಮತಿ ನೀಡಿರುವುದು ಆಡಳಿತಾತ್ಮಕ ನಿರ್ಲಕ್ಷ್ಯವೋ ಅಥವಾ ಉದ್ದೇಶಪೂರ್ವಕ ಕ್ರಮವೋ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. 2024ರಲ್ಲಿ 10 ವರ್ಷದ ಅವಧಿಗೆ ನೀಡಲಾದ ಈ ಅನುಮತಿ ಈಗಾಗಲೇ ಎರಡು ವರ್ಷಗಳಿಂದ ಜಾರಿಯಲ್ಲಿದೆ.

ಇದಲ್ಲದೆ, ನಿಗದಿಪಡಿಸಿದ ₹265 ಬಾಡಿಗೆಯನ್ನೂ ಮುಡಾ ವಸೂಲಿ ಮಾಡದೇ ಇರುವುದರ ಜೊತೆಗೆ, ಸಂಬಂಧಿತ ಖಾಸಗಿ ಸಂಸ್ಥೆಯೂ ಪಾವತಿಸದಿರುವುದು ಆಡಳಿತದ ವೈಫಲ್ಯವನ್ನು ಬಯಲಿಗೆಳೆಯುತ್ತಿದೆ.

ಸ್ಪಷ್ಟನೆ: 

ಈ ಕುರಿತು ʼಜಸ್ಟ್‌ ಕನ್ನಡʼ ಗೆ  ಪ್ರತಿಕ್ರಿಯಿಸಿದ ಎಂಡಿಎ ಹಾಲಿ ಆಯುಕ್ತ ಕೆ.ಆರ್. ರಕ್ಷಿತ್, “ ಈ ಆರೋಪಕ್ಕೆ ಸಂಬಂಧಿಸಿದಂತೆ ಹಿಂದಿನ ಅವಧಿಯ ಕಡತಗಳನ್ನು ಪರಿಶೀಲಿಸಿ, ಲೋಪ ಕಂಡು ಬಂದಲ್ಲಿ ಅಗತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.

K.R.Rakshith, commissioner, MDA

ಸರ್ಕಾರಿ ಆಸ್ತಿಯ ದುರುಪಯೋಗದ ಈ ಪ್ರಕರಣದ ಹಿಂದಿರುವ ಮಸಲತ್ತು ಏನು? ತಪ್ಪಿತಸ್ಥರ ವಿರುದ್ಧ ಕ್ರಮ ಯಾವಾಗ? ಎಂಬ ಪ್ರಶ್ನೆಗಳು ಈಗ ಮೂಡುತ್ತಿವೆ.

key words: MUDA Scam, Mobile Tower Approved, for Just ₹265 Rent,

SUMMARY:

MUDA Scam Surfaces: Mobile Tower Approved for Just ₹265 Rent

Mysuru: A fresh irregularity from the tenure of former MUDA Commissioner Dinesh Kumar has come to light. A private company was allowed to install a mobile tower on a MUDA commercial building in Vijayanagar (1st Stage) for a monthly rent of just ₹265.

No formal agreement or records are available with MUDA regarding this approval. The permission was reportedly granted based on a simple request letter, without any conditions.

Despite the approval being valid for 10 years (since 2024), MUDA has neither collected the rent nor has the company paid it.

The unusually low rent and lack of documentation have raised serious concerns. Current Commissioner K.R. Rakshit has assured that the files will be reviewed, and necessary action will be taken.

The post ಮುಡಾ (MDA) ಮಾಜಿ ಆಯುಕ್ತ ದಿನೇಶ್  ಮತ್ತೊಂದು ಹಗರಣ : ಮಾಸಿಕ ₹265 ಬಾಡಿಗೆಗೆ ಮೊಬೈಲ್ ಟವರ್ ಅನುಮತಿ! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಡಿಕೆ ಶಿವಕುಮಾರ್ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟು ದೊಡ್ಡತನ ತೋರಬೇಕಿತ್ತು- ಶಾಸಕ ಮುನಿರತ್ನ ಕಿಡಿ

ಬೆಂಗಳೂರು,ಮಾರ್ಚ್,26,2026 (www.justkannada.in):  ಇಂದು ವಿಧಾನಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ದಿ ಬಗ್ಗೆ ಉತ್ತರ...

ನಾಳೆ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಪ್ರಧಾನಿ ಮೋದಿ ಮೀಟಿಂಗ್

ನವದೆಹಲಿ,ಮಾರ್ಚ್,26,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ಯುದ್ದದಿಂದಾಗಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯವಾಗಿದ್ದು...

ಅಧಿವೇಶನದಲ್ಲಿ ಸರ್ಕಾರದ ತಪ್ಪು ಹೊರಗೆಳೆಯುವ ಕಿವಿ ಹಿಂಡುವ ಕೆಲಸ ಮಾಡಿದ್ದೇವೆ- ಆರ್.ಅಶೋಕ್

ಬೆಂಗಳೂರು,ಮಾರ್ಚ್,26,2026 (www.justkannada.in):  ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ತಪ್ಪುಗಳನ್ನು ಹೊರಗೆಳೆಯುವ  ಸರ್ಕಾರದ ಕಿವಿ...

ಪಾರಂಪರಿಕ ಕಟ್ಟಡ ರಕ್ಷಣೆಗೆ ಪಾಲಿಕೆಯ ಕೊಡುಗೆ ಏನು? ಮಾಜಿ ಮೇಯರ್ ಶಿವಕುಮಾರ್  ಟೀಕೆ

ಮೈಸೂರು,ಮಾರ್ಚ್,26,2026 (www.justkannada.in): ಜನಸ್ನೇಹಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ....