20
August, 2026

A News 365Times Venture

20
Thursday
August, 2026

A News 365Times Venture

ಮುಡಾ ಹಗರಣ: ಎಲ್ಲಾ‌ ಸೈಟ್ ಗಳನ್ನ ರದ್ದು ಮಾಡಿ ದಿಟ್ಟತನ ತೋರಿಸಿ- ಸಾ.ರಾ ಮಹೇಶ್

Date:

ಮೈಸೂರು,ಆಗಸ್ಟ್,20,2026 (www.justkannada.in): ಮುಡಾ 50:50 ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ  ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸೈಟ್ ಗಳನ್ನ ರದ್ದು ಮಾಡಿದ್ದು, ಈ ಕ್ರಮ ಸ್ವಾಗತಾರ್ಹ. ಆದರೆ 2019 ರಿಂದ 2023 ರವರೆಗಿನ ಸೈಟ್ ಗಳನ್ನ ಯಾಕೆ ರದ್ದು ಮಾಡಿಲ್ಲ ಎಂದು  ಮಾಜಿ ಸಚಿವ ಸಾ.ರಾ ಮಹೇಶ್ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್, ನಿವೇಶನಗಳನ್ನ ರದ್ದು ಮಾಡಿರುವುದು ಸ್ವಾಗತಾರ್ಹ. 2100 ಸೈಟ್ ಗಳ 5000 ಕೋಟಿ ಹಗರಣ ಇದಾಗಿದ್ದು, ರೈತರ ಹೆಸರಿನಲ್ಲಿ ಹಲವರು ವಂಚನೆ ಮಾಡಿದ್ದಾರೆ. ಮಧ್ಯವರ್ತಿಗಳಿಂದ ಹಲವರು ಹಣ ಕಳೆದುಕೊಂಡಿದ್ದಾರೆ ಎಂದರು.

2023 ರಿಂದೀಚೆಗೆ ಆಗಿರುವ ನಿವೇಶನಗಳನ್ನ ಮಾತ್ರ ರದ್ದು ಮಾಡಿದ್ದೀರಿ. ಆದರೆ 2019 ರಿಂದ ಆಗಿರುವ ಸೈಟ್ ಗಳನ್ನ ರದ್ದು ಮಾಡಿಲ್ಲ. ನಿಮ್ಮ ತಾಯಿ ಹೆಸರಿನ ಸೈಟ್ ಗಳನ್ನ ನೀವೇ ವಾಪಸ್ ನೀಡಿದ್ದೀರಿ. 2019 ರಿಂದ 2023 ರವರಗೆ ಯಾಕೆ ರದ್ದು ಮಾಡಿಲ್ಲ. 2019 ರಿಂದ ಮಾಡದಿರುವುದು 14 ಸೈಟ್ ಗಳ‌ ರಕ್ಷಣೆಗಾ?. ಈ ಕುರಿತು ಜನಸಾಮಾನ್ಯರಿಗೆ ಅನುಮಾನ ಕಾಡುತ್ತಿದೆ. 1110 ಸೈಟ್ ಗಳಿಗೆ ಒಂದು ನ್ಯಾಯ, ಇನ್ನುಳಿದವರಿಗೆ ಮತ್ತೊಂದು ನ್ಯಾಯವೇ? ಎಲ್ಲಾ‌ ಸೈಟ್ ಗಳನ್ನ ರದ್ದು ಮಾಡಿ ದಿಟ್ಟತನ ತೋರಿಸಿ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯಗೆ ಮಾಜಿ ಸಚಿವ ಸಾರಾ ಮಹೇಶ್ ಸವಾಲು ಹಾಕಿದ್ದಾರೆ.

Key words: Muda scam,  canceling, all sites, Sa.Ra Mahesh

The post ಮುಡಾ ಹಗರಣ: ಎಲ್ಲಾ‌ ಸೈಟ್ ಗಳನ್ನ ರದ್ದು ಮಾಡಿ ದಿಟ್ಟತನ ತೋರಿಸಿ- ಸಾ.ರಾ ಮಹೇಶ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಿಶಾನೆ ಆನೆಯಾಗಿ ಅಭಿಮನ್ಯು ಬಳಸಿಕೊಂಡು ಗೌರವಯುತ ಬೀಳ್ಕೊಡುಗೆ ನೀಡಿ- ಕೆ.ವಿ. ಮಲ್ಲೇಶ್ ಆಗ್ರಹ

ಮೈಸೂರು,ಆಗಸ್ಟ್,20,2026 (www.justkannada.in):  ವಯಸ್ಸಿನ ನೆಪವೊಡ್ಡಿ ಏಕಾಏಕಿ ಅಭಿಮನ್ಯು ಆನೆಯನ್ನು ದಸರಾ ಮಹೋತ್ಸವದಿಂದ...

ವಿದ್ಯಾರ್ಥಿಗಳಿಂದಲೇ ಶಾಲಾ ಪ್ರಿನ್ಸಿಪಾಲ್ ಹತ್ಯೆ

ನಲ್ಗೊಂಡ,ಆಗಸ್ಟ್,20,2026 (www.justkannada.in): ತಂದೆ ತಾಯಿ ಮತ್ತು ಶಿಕ್ಷಕರನ್ನ ದೇವರ ಸಮಾನ ಎಂದು...

ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ.ಕೆ ಶಿವಕುಮಾರ್ ಒತ್ತಾಯ

ಮಹಾಬಲಿಪುರಂ, ಆಗಸ್ಟ್, 20,2026 (www.justkannada.in): “ಕರ್ನಾಟಕ ಬಲಿಷ್ಠವಾದಾಗ, ದಕ್ಷಿಣ ಭಾರತ ಮತ್ತಷ್ಟು...

KMF ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣ: ನಾಲ್ವರು ಹಿರಿಯ ಅಧಿಕಾರಿಗಳು ಸಸ್ಪೆಂಡ್

ಬೆಂಗಳೂರು,ಆಗಸ್ಟ್,20,2026 (www.justkannada.in): ಕೆಎಂಎಫ್ ಪಶು ಆಹಾರ ಕಲಬೆರಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ...