29
August, 2026

A News 365Times Venture

29
Saturday
August, 2026

A News 365Times Venture

ಮೈಸೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ದಂಪತಿಗೆ ಆತಿಥ್ಯ: ಉಪಹಾರ ಕೂಟದಲ್ಲಿ ಭಾಗಿ

Date:

ಮೈಸೂರು,ಆಗಸ್ಟ್,29,2026 (www.justkannada.in): ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಅವರ ಪತ್ನಿ ಮೈಸೂರಿನ ಜೆ.ಪಿ.ನಗರದಲ್ಲಿರುವ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಬೆಳಗಿನ ಉಪಹಾರಕೂಟದಲ್ಲಿ ಭಾಗವಹಿಸಿದರು.

ಇದಕ್ಕೂ ಮುನ್ನ ಡಾ.ಜಿ.ಪರಮೇಶ್ವರ ಹಾಗೂ ಅವರ ಪತ್ನಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಜೆ.ಪಿ.ನಗರದಲ್ಲಿರುವ ಎಚ್.ಎನ್.ವೆಂಕಟೇಶ ಅವರ ನಿವಾಸಕ್ಕೆ ಆಗಮಿಸಿದರು. ಈ ವೇಳೆ ವೆಂಕಟೇಶ್ ಹಾಗೂ ಕುಟುಂಬಸ್ಥರು ಡಿಸಿಎಂ ಪರಮೇಶ್ವರ್ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಕಳೆದ ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಎಚ್.ಎ ವೆಂಕಟೇಶ್, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ಮೈಲ್ಯಾಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು, ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಾ.ಜಿ.ಪರಮೇಶ್ವರ ಅವರೊಂದಿಗೆ ದೀರ್ಘಕಾಲದ ರಾಜಕೀಯ ಒಡನಾಟ ಹೊಂದಿರುವ ವೆಂಕಟೇಶ್, ಪರಮೇಶ್ವರ ಅವರ ಅಪ್ಪಟ ಅನುಯಾಯಿಯಾಗಿ ಕಾಂಗ್ರೆಸ್ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಡಿಸಿಎಂ ದಂಪತಿಯ ಈ ಭೇಟಿ ರಾಜಕೀಯ ವಲಯದಲ್ಲೂ ಗಮನ ಸೆಳೆಯಿತು.

ಉಪಹಾರಕೂಟದಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲದಂಡಿ ಸೇರಿದಂತೆ ಹಲವು ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಹಾಗೂ ರಾಜಕೀಯ ನಾಯಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ ಅವರು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಮೈಸೂರು ಜಿಲ್ಲೆಯ ವಿವಿಧ ವಿಚಾರಗಳ ಕುರಿತು ಅನೌಪಚಾರಿಕವಾಗಿ ಮಾತುಕತೆ ನಡೆಸಿದರು ಎನ್ನಲಾಗಿದೆ. ಆತ್ಮೀಯ ವಾತಾವರಣದಲ್ಲಿ ನಡೆದ ಉಪಹಾರಕೂಟದಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ವಿಚಾರಗಳ ಚರ್ಚೆಯೂ ನಡೆದಿದ್ದು, ಡಿಸಿಎಂ ಪರಮೇಶ್ವರ್ ಅವರ ಮೈಸೂರು ಪ್ರವಾಸಕ್ಕೆ ಮತ್ತಷ್ಟು ಮಹತ್ವ ದೊರೆತಿದೆ.

ENGLISH SUMMARY..

DCM G. Parameshwara Visits KPCC Spokesperson H.N. Venkatesh’s Residence

Mysuru: Deputy Chief Minister Dr. G. Parameshwara and his wife visited KPCC spokesperson H.N. Venkatesh’s residence in JP Nagar, Mysuru, and attended a breakfast gathering.

Before the visit, the couple offered prayers at the Chamundeshwari Temple.

H.N. Venkatesh, a long-time Congress loyalist, has served as a Mysore University Syndicate member and MYLAC chairman and is currently a KPCC spokesperson. He is also known as a close follower of Dr. Parameshwara.

Mysuru Deputy Commissioner Lakshmikanth Reddy, City Police Commissioner Seema Latkar, SP Baladandi, and several political leaders were present at the breakfast meeting.

Key words: DCM, G. Parameshwara, Visits, Mysore, H.N. Venkatesh’s, Residence

The post ಮೈಸೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ದಂಪತಿಗೆ ಆತಿಥ್ಯ: ಉಪಹಾರ ಕೂಟದಲ್ಲಿ ಭಾಗಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

87 ಕೋಟಿ ರೂ. ಹಗರಣದ ಮುಜುಗರ ತಪ್ಪಿಸಿಕೊಳ್ಳಲು ನಾಗೇಂದ್ರ ರಾಜೀನಾಮೆ- ಕೇಂದ್ರ ಸಚಿವ HDK

ಮಂಡ್ಯ,ಆಗಸ್ಟ್,29,2026 (www.justkannada.in): ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ಬಿ. ನಾಗೇಂದ್ರ ರಾಜೀನಾಮೆ...

ರಂಗಭೂಮಿ ಕಲಾವಿದೆ ಇಂದಿರಾ ನಾಯರ್ ಇನ್ನಿಲ್ಲ

ಮೈಸೂರು,ಆಗಸ್ಟ್,28,2026 (www.justkannada.in): ರಂಗಭೂಮಿಯ ಹಿರಿಯ ಕಲಾವಿದೆ ಮೈಸೂರಿನ ಇಂದಿರಾ ನಾಯರ್ ಇಂದು...

ನಾಲ್ಕು ವರ್ಷ ಸೇವೆ, ವರ್ಗಾವಣೆ: ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಗೆ ಬೀಳ್ಕೊಡುಗೆ

ಬೆಂಗಳೂರು,ಆಗಸ್ಟ್,28,2026 (www.justkannada.in):  ರಾಜ್ಯದಲ್ಲಿ ನಾಲ್ಕು ವರ್ಷಗಳ‌ ಕಾಲ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್...

ಮಾನವ–ಆನೆ ಸಂಘರ್ಷ, ಕಸ್ತೂರಿ ರಂಗನ್ ವರದಿ ಅನುಷ್ಠಾನ: ಸಮಗ್ರ ಪ್ರಸ್ತಾವನೆ ಸಲ್ಲಿಸಿದ ಸಂಸದ ಯದುವೀರ್

ಬೆಂಗಳೂರು/ಮೈಸೂರು, ಆಗಸ್ಟ್, 28, 2026 (www.justkannada.in): ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ...