4
March, 2026

A News 365Times Venture

4
Wednesday
March, 2026

A News 365Times Venture

ಮೈಸೂರು: ಕುದುರೆಗೆ ಕೃತಕ ಕಾಲು ಜೋಡಣೆ ಯಶಸ್ವಿ

Date:

ಮೈಸೂರು,ಮಾರ್ಚ್,4,2026 (www.justkannada.in): ಮೈಸೂರು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಗಂಭೀರವಾಗಿ ಗಾಯಗೊಂಡಿದ್ದ ಒಂದು ಹೆಣ್ಣು ಕುದುರೆಗೆ ಕೃತಕ ಕಾಲು ಜೋಡಣೆ ಮಾಡಲಾಗಿದ್ದು ಹೊಸ ಕಾಲಿನೊಂದಿಗೆ ಕುದುರೆಯು ನಿಧಾನವಾಗಿ ನಡೆಯಲು ಕಲಿಯುತ್ತಿದೆ.

ಹೌದು,  ಎರಡು ತಿಂಗಳ ಹಿಂದೆ ಇಲವಾಲ ಹೋಬಳಿಯ ಸಾಹುಕಾರಹುಂಡಿ ಸಮೀಪ ನಾಲ್ಕು ವರ್ಷದ ಕುದುರೆಯ ಮುಂಗಾಲು ಗಂಭೀರವಾಗಿ ಗಾಯಗೊಂಡಿತ್ತು. ಈ ಮಾಹಿತಿ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಮೈಸೂರು ಸಂಸ್ಥೆಗೆ ಸಿಕ್ಕಿದ್ದು,  ಸಂಸ್ಥೆ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಕುದುರೆಯ ಬಲ ಮುಂಗಾಲು ನಾಶವಾಗಿ, ಕೇವಲ ಚರ್ಮದ ಒಂದು ತುಂಡಿನಿಂದ ತೂಗುತ್ತಿತ್ತು. ತಕ್ಷಣವೇ ಅದನ್ನು ಪಿಎಫ್‌ಎ ಆಶ್ರಯಕ್ಕೆ ಸ್ಥಳಾಂತರಿಸಿ ತುರ್ತು ಚಿಕಿತ್ಸೆ ನೀಡಲಾಯಿತು.

ಪಶುವೈದ್ಯರಾದ ಡಾ.ಅಮರ್‌ ದೀಪ್ ಸಿಂಗ್ ಹಾಗೂ ಡಾ.ಕಿರಣ್ ಪರಿಶೀಲಿಸಿ ಅಂಗಛೇದನ ಮಾಡುವುದೇ ಏಕೈಕ ಮಾರ್ಗ ಎಂದು ತಿಳಿಸಿದರು. ಬಳಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಆದರೆ, ನಿಜವಾದ ಸವಾಲು ಶಸ್ತ್ರಚಿಕಿತ್ಸೆಯ ನಂತರ ಆರಂಭವಾಯಿತು. ಮೂರು ಕಾಲುಗಳ ಮೇಲೆ ಸಮತೋಲನ ಕಾಯ್ದುಕೊಳ್ಳಲು ಕುದುರೆ ಸಂಕಷ್ಟಪಡುತ್ತಿತ್ತು. ಬಳಿಕ ಕುದುರೆಗೆ ಕೃತಕಕಾಲು ಹಾಕಲು ವೈದ್ಯ ತಂಡ ತೀರ್ಮಾನಿಸಿತು.

ಬೆಂಗಳೂರಿನ ಏರೋನಾಟಿಕಲ್ ಎಂಜಿನಿಯರ್ ಸುಪ್ರಿತ್ ಗೌಡ ಅವರು ತಮ್ಮ ತಂಡದೊಂದಿಗೆ (ಗೋಪಾಲನ್ ಕಾಲೇಜು ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜೆಂಟ್‌ ನ ವಿದ್ಯಾರ್ಥಿಗಳು) ಕಸ್ಟಮೈಸ್ಡ್ ಪೊಸ್ಥೆಟಿಕ್ ಲಿಂಬ್ ಅನ್ನು ಅಭಿವೃದ್ಧಿಪಡಿಸಿದರು. ಆರಂಭದಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಪರಿಗಣಿಸಲಾಯಿತು. ಆದರೆ, ಕುದುರೆಯ ಭಾರವನ್ನು ಹೊತ್ತುಕೊಳ್ಳುವ ಅಗತ್ಯತೆ ಮತ್ತು ದೀರ್ಘಕಾಲೀನ ಬಾಳಿಕೆಗಾಗಿ ಬೇರೆ ವಿನ್ಯಾಸ ಮತ್ತು ವಸ್ತುವನ್ನು ಆಯ್ಕೆ ಮಾಡಲಾಯಿತು. ಕೃತಕ ಕಾಲು ಹಗುರವಾಗಿ, ಸ್ಥಿರವಾಗಿ ಮತ್ತು ಪ್ರಾಣಿಗೆ ಆರಾಮದಾಯಕವಾಗಿರುವಂತೆ ಜೋಡಣೆ ಮಾಡಲಾಯಿತು.

“ಇದೀಗ ವೈದ್ಯ ತಂಡವು ಕುದುರೆಗೆ ಕೃತಕ ಕಾಲನ್ನುಯಶಸ್ವಿಯಾಗಿ ಅಳವಡಿಸಲಾಗಿದ್ದು,  ತನ್ನ ಹೊಸ ಕಾಲಿನೊಂದಿಗೆ ಕುದುರೆಯು ನಿಧಾನವಾಗಿ ನಡೆಯಲು ಕಲಿಯುತ್ತಿದ್ದು, ಚಲನಶೀಲತೆಯ ಜತೆಗೆ ಸಮತೋಲನ ಮತ್ತು ಆತ್ಮವಿಶ್ವಾಸವನ್ನೂ ಮರಳಿ ಪಡೆಯುತ್ತಿದೆ,” ಎಂದು ಮೈಸೂರಿನ ಪಿಎಫ್ಎ ಮ್ಯಾನೇಜಿಂಗ್ ಟಸ್ಟಿ ಸವಿತಾ ನಾಗಭೂಷಣ್ ತಿಳಿಸಿದಾರೆ.

Key words: Mysore, Artificial leg, fitted, horse

The post ಮೈಸೂರು: ಕುದುರೆಗೆ ಕೃತಕ ಕಾಲು ಜೋಡಣೆ ಯಶಸ್ವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರು ವಿಭಾಗ ಬಿಜೆಪಿ ಸಹ ಪ್ರಭಾರಿಯಾಗಿ ಡಾ.ಈ.ಸಿ.ನಿಂಗರಾಜ್ ಗೌಡ ನೇಮಕ.

ಮೈಸೂರು,ಮಾರ್ಚ್,4,2026 (www.justkannada.in): ಭಾರತೀಯ ಜನತಾ ಪಾರ್ಟಿಯ ಮೈಸೂರು ವಿಭಾಗದ ಸಹ ಪ್ರಭಾರಿಯಾಗಿ...

ಒಂದೇ ಕೊಠಡಿಯ 10 ಜನ ಪಾಸಾಗಿದ್ದು ಭ್ರಷ್ಟಾಚಾರವಲ್ಲ,ಇತಿಹಾಸ-KPSC ಕಾರ್ಯದರ್ಶಿ ಜ್ಯೋತಿ

ಬೆಂಗಳೂರು,ಮಾರ್ಚ್, 4,2026 (www.justkannada.in): ಕೆಪಿಎಸ್‌ ಸಿ ಪ್ರಕಟಿಸಿದ ಕೆಎಎಸ್ ಮುಖ್ಯ ಪರೀಕ್ಷಾ...

ಕೆಪಿಎಸ್ ಸಿಯಲ್ಲಿ ಅಕ್ರಮ:  ಭಾಸ್ಕರ್ ರಾವ್ ತೀವ್ರ ಕಳವಳ

ಬೆಂಗಳೂರು, ಮಾರ್ಚ್​,4,2026 (www.justkannada.in):  ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮತ್ತೆ ಅಕ್ರಮ ಆರೋಪ...

KPSC ಫಲಿತಾಂಶ ಅಕ್ರಮ ಆರೋಪ: ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ- ಬಿವೈ ವಿಜಯೇಂದ್ರ

ಬೆಂಗಳೂರು,ಮಾರ್ಚ್,4,2026 (www.justkannada.in): ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಮುಖ್ಯ ಪರೀಕ್ಷೆಯ...