12
March, 2026

A News 365Times Venture

12
Thursday
March, 2026

A News 365Times Venture

ಮೈಸೂರು: ಭೂಮಿ ಖರೀದಿಗೆ ಮುಂದಾದ KPTCL: ಭೂಮಾಲೀಕರಿಗೆ ಮನವಿ

Date:

ಮೈಸೂರು,ಜುಲೈ, 11, 2025 (www.justkannada.in): ಮೈಸೂರು ವ್ಯಾಪ್ತಿಯಲ್ಲಿ 220/66 ಕೆ.ವಿ ವಿದ್ಯುತ್‌ ಸ್ವೀಕರಣಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭೂಮಿ ಖರೀದಿಸಲು ಮುಂದಾಗಿರುವ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತಕ್ಕೆ ಸೂಚಿತ ಪ್ರದೇಶದಲ್ಲಿ ಸೂಕ್ತ ಜಮೀನು ಇದ್ದಲ್ಲಿ ಮಾರಾಟ ಮಾಡುವಂತೆ ಸ್ಥಳೀಯ ಭೂ ಮಾಲೀಕರಿಗೆ  ನಿಗಮವು  ಮನವಿ ಮಾಡಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಪಿಟಿಸಿಎಲ್, ಮೈಸೂರಿನ ವ್ಯಾಪ್ತಿಯಲ್ಲಿ 220/66 ಕೆ.ವಿ ವಿದ್ಯುತ್‌ ಸ್ವೀಕರಣಾ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಭೂಮಿ ನೀಡಿ  ಸಹಕರಿಸುವಂತೆ ಭೂಮಾಲೀಕರನ್ನು ಕೋರಿದೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮ(5 ಕಿ.ಮೀ ವ್ಯಾಪ್ತಿ), ತಿ.ನರಸೀಪುರ ತಾಲೂಕು(5 ಕಿ.ಮೀ ವ್ಯಾಪ್ತಿ) ಹಾಗೂ ಎಚ್‌.ಡಿ. ಕೋಟೆ ತಾಲೂಕು (5 ಕಿ.ಮೀ ವ್ಯಾಪ್ತಿ)ಗಳಲ್ಲಿ ಈ ವಿದ್ಯುತ್‌ ಸ್ವೀಕರಣಾ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಈ ತಾಲೂಕುಗಳ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕನಿಷ್ಠ 12 ಎಕರೆ ವಿಸ್ತೀರ್ಣದ ಸಮತಟ್ಟಾದ ಭೂಮಿಯ ಅಗತ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಕಂದಾಯ ಇಲಾಖೆ ನಿಗದಿಪಡಿಸುವ ಬೆಲೆಯಲ್ಲಿ ಈ ತಾಲೂಕುಗಳ ವ್ಯಾಪ್ತಿಯ ಅಥವಾ ಸುತ್ತಲಿನ ಜಮೀನನ್ನು ಭೂ ಮಾಲೀಕರಿಂದ ನೇರವಾಗಿ  ಖರೀದಿ ಮಾಡಲು ನಿಯಮಿತವು ಉದ್ದೇಶಿಸಿದೆ. ಕವಿಪ್ರನಿನಿಕ್ಕೆ ಜಮೀನು ಮಾರಾಟ ಮಾಡಲು ಇಚ್ಛಿಸುವ ಭೂ ಮಾಲೀಕರು ಖದ್ದಾಗಿ ಅಥವಾ ದೂರವಾಣಿ ಮೂಲಕ(ಜಿ. ಮನು, ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌(ಕಾಮಗಾರಿ) 9480813912 ಅಥವಾ  ಕಚೇರಿಯನ್ನು ಸಂಪರ್ಕಿಸುವಂತೆ ಕೆಪಿಟಿಸಿಎಲ್ ಮೈಸೂರು ಯೋಜನೆಗಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌(ವಿ.) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.vtu

Key words: Mysore, KPTCL, purchase, land, landowners

 

The post ಮೈಸೂರು: ಭೂಮಿ ಖರೀದಿಗೆ ಮುಂದಾದ KPTCL: ಭೂಮಾಲೀಕರಿಗೆ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಗೆ ಸಮಸ್ಯೆ ಇಲ್ಲ-ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು,ಮಾರ್ಚ್,12,2026 (www.justkannada.in):  ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಎಂಬ ವಿಚಾರ, ಗೃಹ...

ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದ- ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಮಾರ್ಚ್,12,2026 (www.justkannada.in): ಡ್ಯಾಂಗಳ ಹಳೇ ಗೇಟು ಬದಲಾವಣೆಗೆ ಸರ್ಕಾರ ಸಿದ್ದವಿದೆ ಎಂದು...

ಗೃಹ ಬಳಕೆ ವಿದ್ಯುತ್‌ ಸಂಪರ್ಕ ಅನ್ಯ ಉದ್ದೇಶಕ್ಕೆ ಬಳಸಬೇಡಿ: ಬೆಸ್ಕಾಂ ಮನವಿ

ಬೆಂಗಳೂರು,ಮಾರ್ಚ್,12,2026 (www.justkannada.in): ಗೃಹ ಬಳಕೆಗೆ ಪಡೆದ ವಿದ್ಯುತ್‌ ಸಂಪರ್ಕವನ್ನು ವಾಣಿಜ್ಯ ಹಾಗೂ...

ಗ್ಯಾಸ್ ಸಿಲಿಂಡರ್ ಸಮಸ್ಯೆ: ಕೇಂದ್ರದ ವಿರುದ್ದ ಗುಡುಗಿದ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ,ಮಾರ್ಚ್,12,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಾಗದೆ ದೇಶದಲ್ಲಿ...