9
September, 2026

A News 365Times Venture

9
Wednesday
September, 2026

A News 365Times Venture

ಯಶವಂತಪುರ ಎಪಿಎಂಸಿ ಮಾರ್ಕೆಟ್ ಗೆ  ಭೇಟಿ, ಸಮಸ್ಯೆಗಳನ್ನ ಆಲಿಸಿದ ಸಿಎಂ ಡಿಕೆಶಿ

Date:

ಬೆಂಗಳೂರು,ಸೆಪ್ಟಂಬರ್,8,2026 (www.justkannada.in): ಇಂದು ಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ  ಭೇಟಿ ನೀಡಿ ಅಲ್ಲಿರುವ  ಸಮಸ್ಯೆಗಳನ್ನ ಆಲಿಸಿದರು.

ಎಪಿಎಂಸಿ ಮಾರುಕಟ್ಟೆಯ ಶುಂಠಿ ಮಂಡಿಗೆ ಭೇಟಿ ನೀಡಿದ  ಸಿಎಂ ಡಿಕೆ ಶಿವಕುಮಾರ್,  ಶುಂಠಿ ಬೆಳೆಗಾರರು ವರ್ತಕರಿಂದ ಮಾಹಿತಿ ಸಂಗ್ರಹಿಸಿದರು.  ವ್ಯಾಪಾರಿಗಳಿಗೆ ಯಾವ ರೀತಿ ದರ ನಿಗದಿ ಮಾಡುತ್ತೀರಿ ಎಂದು ಪ್ರಶ್ನಿಸಿ ಮಾಹಿತಿ ಸಂಗ್ರಹಿಸಿದರು.

ಮಾರ್ಕೆಟ್ ಗೆ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಎಪಿಎಂಸಿ ಮಾರುಕಟ್ಟೆಯಲ್ಲಿನ ಸಮಸ್ಯೆಗಳನ್ನ ಆಲಿಸಿದ್ದೇನೆ.  ರೈತರು ವರ್ತಕರು ಹಮಾಲಿಗಳ ಜೊತೆ ಮಾತನಾಡಿದ್ದೇನೆ. ಕೂಲಿ ಕಾರ್ಮಿಕರು ವ್ಯಾಪಾರಿಗಳು ಮಹಿಳಾ ವ್ಯಾಪಾರಿಳು ಇಲ್ಲಿ ಕೆಲಸ ಮಾಡುವವರ ಸಮಸ್ಯೆಗಳನ್ನ ಆಲಿಸಿದ್ದೇನೆ ಎಂಪಿಎಂಸಿಯ ಹಲವು ವಿಚಾರ ಖುದ್ದು ಮಾಹಿತಿ ಪಡೆದಿದ್ದೇನೆ ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಮಾಹಿತಿ ಎಲ್ಲವನ್ನೂ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದೇನೆ. ಸಮಸ್ಯೆಗಳನ್ನು ನಿವಾರಿಸುವ ಕೆಲಸ ಮಾಡುತ್ತೇನೆ ಇಲ್ಲಿ ಚಿಕ್ಕಮಕ್ಕಳು ಕೂಲಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ ಕೂಲಿ ಮಾಡುವುದುನ್ನ ನಿಲ್ಲಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಶಾಲೆಗೆ ಮಕ್ಕಳನ್ನು ಕಳುಹಿಸುವ ವ್ಯವಸ್ಥೆ ಆಗಬೇಕು  ಎಂದು ತಿಳಿಸಿದರು.

Key words: CM DK Shivakumar,  visits, Yeshwantpur, APMC market,

The post ಯಶವಂತಪುರ ಎಪಿಎಂಸಿ ಮಾರ್ಕೆಟ್ ಗೆ  ಭೇಟಿ, ಸಮಸ್ಯೆಗಳನ್ನ ಆಲಿಸಿದ ಸಿಎಂ ಡಿಕೆಶಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

KPSC ಹಗರಣ: ಜ್ಞಾನೇಂದ್ರ ಮತ್ತು ಕನ್ನಾಳೆಗೆ ನ್ಯಾಯಾಂಗ ಬಂಧನ

ಬೆಂಗಳೂರು,ಸೆಪ್ಟಂಬರ್,9,2026 (www.justkannada.in): ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ...

ಬಳ್ಳಾರಿ ಚಲೋ  ಬಿಜೆಪಿ ಸಮಾವೇಶಕ್ಕೆ ಅನುಮತಿ ನಿರಾಕರಣೆ

ಬಳ್ಳಾರಿ,ಸೆಪ್ಟಂಬರ್,8,2026 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿರುವ...

ಕೇಂದ್ರದ ನಿಯಮ ಹೊರತುಪಡಿಸಿ ಬರ ಘೋಷಣೆ ಮಾಡಲು ಆಗಲ್ಲ- ಡಿಸಿಎಂ ಪರಮೇಶ್ವರ್

ಬೆಂಗಳೂರು,ಸೆಪ್ಟಂಬರ್,8,2026 (www.justkannada.in):  ಕೇಂದ್ರ ಸರ್ಕಾರದ ನಿಯಮಗಳನ್ನ ಹೊರತುಪಡಿಸಿ ಬರ ಘೋಷಣೆ ಮಾಡಲು...

ರೈತರ ವಿಮೆ ಹಣ ಕಟ್ಟದ, ಸೊಸೈಟಿ ಕಾರ್ಯದರ್ಶಿ ವಜಾಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸೂಚನೆ

ಬೆಂಗಳೂರು, ಸೆಪ್ಟಂಬರ್, 08,2026 (www.justkannada.in): ಬೆಳಗಾವಿಯ ಜೇವರ್ಗಿ ತಾಲ್ಲೂಕಿನ ಇಟ್ಟನಹಳ್ಳಿ ಗ್ರಾಮದ...