ನವದೆಹಲಿ,ಮಾರ್ಚ್,23,2026 (www.justkannada.in): ಯುದ್ದದಿಂದಾಗಿ ಪಶ್ಚಿಮ ಏಷ್ಯಾದಲ್ಲಿ ರಾಷ್ಟ್ರಗಳ ಸ್ಥಿತಿ ಚಿಂತಜನಕವಾಗಿದೆ. ಯುದ್ದದಿಂದ ಭಾರತದ ಮೇಲೆ ಪರಿಣಾಮ ಬೀರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಲೋಕಸಭೆಯಲ್ಲಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯುದ್ದ ಮತ್ತಷ್ಟು ಉಲ್ಭಣಗೊಳ್ಳುವುದನ್ನ ತಡೆಯಲು ಸಂಯಮ ಮತ್ತ ರಾಜತಾಂತ್ರಿಕ ಪ್ರಯತ್ನಗಳ ಅಗತ್ಯವಿದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ದವು ಭಾರತಕ್ಕೆ ಅನಿರೀಕ್ಷಿತ ಸವಾಲು ಸೃಷ್ಠಿಸಿದೆ. ಯುದ್ದ ಜಗತ್ತಿಗೆ ಬೆದರಿಸುವ ಸವಾಲುಗಳನ್ನ ಎಸೆದಿದೆ. ಭಾರತದಲ್ಲಿ ರಾಷ್ಟ್ರೀಯ ಭದ್ರತೆ ಇಂಧನದ ಕೊರತೆಯಾಗಿದೆ. ಯುದ್ದದಿಂದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎಂದರು.
ಹೋರ್ಮುಝ್ ಜಲಸಂಧಿ ಬಂದ್ ಮಾಡಿದ್ದಾರೆ ಇದು ಸರಿಯಾದ ಕ್ರಮವಲ್ಲ. ಯುದ್ದದಿಂದ ಭಾರತದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಗಲ್ಫ್ ಯುದ್ದದಿಂದ ಭಾರತದ ಮೇಲೆ ಪರಿಣಾಮ ಬೀರಿದೆ. ದೇಶದಲ್ಲಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
Key words: war, cylinder, supply, PM, Modi
The post ಯುದ್ದದಿಂದ ಪರಿಸ್ಥಿತಿ ಚಿಂತಾಜನಕ: ಸಿಲಿಂಡರ್ ಪೂರೈಕೆ ವ್ಯತ್ಯಯ ಆಗದಂತೆ ಕ್ರಮ- ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




