9
March, 2026

A News 365Times Venture

9
Monday
March, 2026

A News 365Times Venture

ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಆರೋಪ: ಯಾವುದೇ ಸಾಕ್ಷಿ ನೀಡಿಲ್ಲ- ಸಚಿವ ಚಲುವರಾಯಸ್ವಾಮಿ

Date:

ಬೆಂಗಳೂರು,ಜುಲೈ,30,2025 (www.justkannada.in):  ರಸಗೊಬ್ಬರವನ್ನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವಿಪಕ್ಷದವರು ಆರೋಪ ಮಾಡುತ್ತಿದ್ದಾರೆ. ಆದರೆ  ಇದಕ್ಕೆ ಯಾವುದೇ ಸಾಕ್ಷಿ ನೀಡಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ನಾನು ನಿರಂತರವಾಗಿ ಜಿಲ್ಲಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ  ಸಿಎಂ ಸಿದ್ದರಾಮಯ್ಯ ಸಹ ಡಿಸಿಗಳ ಜೊತೆ ಮಾತನಾಡಿದ್ದಾರೆ. ಟೀಕೆಗೆ ಉತ್ತರ ಕೊಡುವುದಕ್ಕೂ ಮುನ್ನ ರೈತರ ಸಮಸ್ಯೆ ಬಗೆಹರಿಬೇಕು ಎಂದರು.

ಆರ್ ಅಶೋಕ್,  ವಿಜಯೇಂದ್ರ,  ಬೊಮ್ಮಾಯಿ ಮಾತು ಕೇಳಿದ್ದೇನೆ.  ಅಶೋಕ್ ಗೆ ಎಷ್ಟರ ಮಟ್ಟಿಗೆ ಬುದ್ದಿ ಇದೆಯೋ ಗೊತ್ತಿಲ್ಲ.  ಗೊತ್ತಿದ್ದೂ ಮಾತಾಡುತ್ತಾರೋ ಗೊತ್ತಿಲ್ಲದೇ ಮಾತಾಡ್ತಾರೋ ಗೊತ್ತಿಲ್ಲ. ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ.   ರೈತರ ಪರವಾಗಿ ಹೋರಾಟ ಮಾಡಿ ರಾಜಕೀಯ ಮಾಡಬೇಡಿ 2 ವರ್ಷದಿಂದ ನಮಗೆ ಕೇಂದ್ರದಿಂದ ಅನ್ಯಾಯವಾಗಿದೆ. ಕೃಷಿ ರಸಗೊಬ್ಬರ ಬಗ್ಗೆ ಅಷ್ಟೆ ನಾನು ಮಾತನಾಡುತ್ತೇನೆ.  ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಯಾವುದೇ ಸಾಕ್ಷಿ ನೀಡಿಲ್ಲ.  ವಿರೋಧ ಪಕ್ಷದವರು ಹೇಳಿಕೆ ಕೊಡುತ್ತಿರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.vtu

Key words:  fertilizer, shortage, Minister, Chaluvarayaswamy

The post ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಆರೋಪ: ಯಾವುದೇ ಸಾಕ್ಷಿ ನೀಡಿಲ್ಲ- ಸಚಿವ ಚಲುವರಾಯಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನೀರಿಗಾಗಿ ಮಕ್ಕಳ ಪತ್ರಕ್ಕೆ ಬಜೆಟ್ ನಲ್ಲಿ ಸ್ಪಂದನೆ: ಪುಟಾಣಿಗಳಿಗೂ ಪ್ರೀತಿತುಂಬಿದ ಅಪ್ಪುಗೆಗಳು ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,9,2026 (www.justkannada.in): ನೀರಿನ‌ ಸಮಸ್ಯೆ ಕುರಿತು ಮಕ್ಕಳು ಬರೆದಿದ್ದ ಪತ್ರಕ್ಕೆ ಬಜೆಟ್...

ಎರಡು ತಿಂಗಳಲ್ಲಿ ಹಲವು ಪ್ರಕರಣ ಭೇದಿಸಿದ ಮೈಸೂರು ಪೊಲೀಸರು: ನಗದು ಚಿನ್ನಾಭರಣ ವಶಕ್ಕೆ

ಮೈಸೂರು,ಮಾರ್ಚ್,9,2026 (www.justkannada.in):  ಮೈಸೂರು ಜಿಲ್ಲಾ ಪೊಲೀಸರು ಎರಡು ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ...

ಎರಡು ಹಂತದಲ್ಲಿ ಜನಗಣತಿ-2027:  ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಬೆಂಗಳೂರು ಗ್ರಾಮಾಂತರ, ಮಾರ್ಚ್,9,2026 (www.justkannada.in): ಜನಗಣತಿ-2027 ಭಾರತದ 16ನೇ ಜನಗಣತಿ ಮತ್ತು...

799.90 ಕೋಟಿ ರೂ. ಸಂಪನ್ಮೂಲ ನಿರೀಕ್ಷೆ: MDA ಬಜೆಟ್‌ ನಲ್ಲಿ ಅಭಿವೃದ್ಧಿಗೆ ಒತ್ತು

ಮೈಸೂರು,ಮಾರ್ಚ್,9,2026 (www.justkannada.in): ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಪ್ರಸಕ್ತ ಆರ್ಥಿಕ ವರ್ಷದ...