ವಿಜಯಪುರ,ಮೇ,1,2026 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಯಾವುದೇ ಡೆಡ್ ಲೈನ್ ಇಲ್ಲ ಎಂದು ಸಚಿವ ಎನ್.ಎಸ್ ಬೋಸರಾಜು ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎನ್.ಎಸ್ ಬೋಸರಾಜು, ನನಗೆ ತಿಳಿದ ಮಟ್ಟಿಗೆ ಸಿಎಂ ಬದಲಾವಣೆ ಯಾವುದೇ ವಿಚಾರ ಇಲ್ಲ. ಸಹಜವಾಗಿ ಕೆಲವರು ಹೇಳುತ್ತಾರೆ. ಆದರೆ ನಮ್ಮಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಡೆಡ್ ಲೈನ್ ಇಲ್ಲ. ಯಾರು ಡೆಡ್ ಲೈನ್ ಎಂದದ್ದು? ಎಂದು ಮಾಧ್ಯಮದವರಿಗೆ ಪ್ರಶ್ನಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗಿಫ್ಟ್ ಸಿಗಲಿದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಬೋಸರಾಜು, ಬರ್ತ್ ಡೇ ಬರುತ್ತದೆ, ಹೋಗುತ್ತದೆ ಏನೇ ಇದ್ದರೂ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ ಎಂದರು.
Key words: no deadline, changing CM, Minister, NS Bosaraju
The post ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಡೆಡ್ ಲೈನ್ ಇಲ್ಲ-ಸಚಿವ ಬೋಸರಾಜು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




