27
September, 2026

A News 365Times Venture

27
Sunday
September, 2026

A News 365Times Venture

ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ:  ಚು.ಆಯೋಗ ವಿಸರ್ಜಿಸಿ, ಮುಖ್ಯಆಯುಕ್ತರನ್ನ ಬಂಧಿಸಿಬೇಕು-ಸಿಎಂ ಡಿಕೆಶಿ ಒತ್ತಾಯ

Date:

ಬೆಂಗಳೂರು ,ಸೆಪ್ಟಂಬರ್,26,2026 (www.justkannada.in): ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ ಆಯುಕ್ತರನ್ನು ಬಂಧಿಸಬೇಕು ಹಾಗೂ ಅಕ್ರಮವಾಗಿ ನಡೆದ ಚುನಾವಣೆಗಳನ್ನು ರದ್ದು ಮಾಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಒತ್ತಾಯಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ  ಸಿಎಂ ಡಿ ಕೆ ಶಿವಕುಮಾರ್, “ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ. ಬಡ ಹಾಗೂ ಆಡಳಿತ ವ್ಯವಸ್ಥೆ ಟೀಕಿಸುವ ಮತದಾರರ ಹೆಸರನ್ನು ಗುರಿಯಾಗಿಸಲಾಗಿದೆ. ಬಿಜೆಪಿ ಜೊತೆ ಸೇರಿ ಮತಗಳ್ಳತನಕ್ಕೆ ಪಾಲುದಾರರಾಗಿದ್ದಾರೆ ಎಂದು ಟೀಕಿಸಿದರು.

ಜ್ಞಾನೇಶ್‌ ಕುಮಾರ್‌ ಅವರು ಚೀಫ್‌ ಎಲೆಕ್ಷನ್‌ ಕಮಿಷನರಾ..? ಅಥವಾ ಬಜೆಪಿಯ ಚೀಫ್‌ ಸೆಲೆಕ್ಷನ್‌ ಕಮಿಷನರಾ? ಎಂದು ಗುಡುಗಿದ ಸಿಎಂ ಡಿಕೆ ಶಿವಕುಮಾರ್,  ಜನ ನಿಮ್ಮ ಅನ್ಯಾಯಗಳ ವಿರುದ್ಧ ದಂಗೆ ಏಳುತ್ತಾರೆ. ಕೇಂದ್ರ ಸರ್ಕಾರ ಅಧಿವೇಶನ ಕರೆದು ಇದರ ಬಗ್ಗೆ ಶೀಘ್ರ ಚರ್ಚೆ ನಡೆಸಬೇಕು. ಈಗ ನಡೆದಿರುವ ಎಸ್‌ ಐಆರ್‌ ರದ್ದುಗೊಳಿಸಿ, ಹೊಸದಾಗಿ ಮರುಪರಿಶೀಲನೆ ನಡೆಯಬೇಕು” ಎಂದು ಆಗ್ರಹಿಸಿದರು.

Key words: CM, DK Shivakumar, President, intervene, Election Commission, arrest, Chief Commissioner.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೇಜರ್ ಮಣಿವಣ್ಣನ್ ಅವರಿಗೆ ಚೀಪ್ ಆಫ್ ಡಿಫೆನ್ಸ್ ಸ್ಟಾಫ್ ಅವರಿಂದ ಪ್ರಶಂಸಾ ಪತ್ರ

  ಬೆಂಗಳೂರು ಸೆ.೨೬,೨೦೨೬: ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ...

ಯುವಕರು ಸಂಘಟಿತರಾಗಿ, ನಾರಾಯಣ ಗುರುಗಳ ತತ್ವಗಳನ್ನು ಅಳವಡಿಸಿಕೊಳ್ಳಲಿ:  ಸಚಿವ ಮಧು ಬಂಗಾರಪ್ಪ ಕರೆ

ಮೈಸೂರು, ಸೆಪ್ಟೆಂಬರ್ 26,2026 (www.justkannada.in): ನಾರಾಯಣ ಗುರುಗಳು ಇಡೀ ಮನು ಕುಲಕ್ಕೆ...

ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಕರ್ನಾಟಕ ಪರ್ವದ ಆಶಯ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್,26,2026 (www.justkannada.in):  ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಕರ್ನಾಟಕ ಪರ್ವದ...

ಜೆಎಸ್‌ಎಸ್ ಕಾನೂನು ಕಾಲೇಜಿನ 18ನೇ ಪದವೀಧರ ದಿನಾಚರಣೆ: 152 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

  ಮೈಸೂರು, ಸೆ.26, 2026: ಕಾನೂನು ವೃತ್ತಿಯಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಮಾನವೀಯತೆ...