ಬೆಂಗಳೂರು,ಆಗಸ್ಟ್.20,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯವಾದ ಸಂಗತಿಯನ್ನ ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ ಎಂದು ಆರೋಪಿ 14 ಪ್ರದೋಷ್ 59ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ.
ಪ್ರಕರಣ ಸಂಬಂಧ 59ನೇ ಸಿಸಿಹೆಚ್ ಕೋರ್ಟ್ನಲ್ಲಿ ಸಾಕ್ಷ್ಯ ವಿಚಾರಣೆ ಮುಂದುವರಿದಿದ್ದು, ಈ ವೇಳೆ ಎ14 ಆರೋಪಿ ಪ್ರದೋಷ್ ತಾನು ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪಅರ್ಜಿಯ ಗಂಭೀರತೆ ಹಾಗೂ ಅದರಲ್ಲಿರುವ ವಿಷಯಗಳ ಬಗ್ಗೆ ಪ್ರಶ್ನಿಸಿದರು, ‘ಅರ್ಜಿಯಲ್ಲಿ ಏನಿದೆ ಎಂಬುದನ್ನು ಸಂಪೂರ್ಣವಾಗಿ ಓದಿ ಸಹಿ ಮಾಡಿದ್ದೇನೆ. ರೇಣುಕಾಸ್ವಾಮಿ ಹತ್ಯೆ ನಡೆದಾಗ ಅದರಲ್ಲಿ ನನ್ನ ಪಾತ್ರವೇನು ಹಾಗೂ ಇತರೆ ಆರೋಪಿಗಳ ಪಾತ್ರವೇನು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದೇನ ಎಂದು ಪ್ರದೋಷ್ ಉತ್ತರಿಸಿದ್ದಾರೆ.
ಪ್ರದೋಷ್ ವಿದ್ಯಾಭ್ಯಾಸದ ಬಗ್ಗೆ ನ್ಯಾಯಾಧೀಶೆ ಸುಜಾತಾ ಅವರ ಪ್ರಶ್ನೆಗೆ ಉತ್ತರಿಸಿದ ಪ್ರದೋಷ್, ‘ನಾನು ಎಂಬಿಎ ಫೈನಾನ್ಸ್ ಓದಿದ್ದು, ಇಂಗ್ಲಿಷ್ ಓದಲು ಮತ್ತು ಬರೆಯಲು ಬರುತ್ತದೆ. ಘಟನೆಗೂ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ.
ಯಾರದ್ದಾದರೂ ಪ್ರಭಾವ ಇದೆಯೇ ಹಾಗೂ ಸತ್ಯವನ್ನು ಹೇಳುತ್ತೀರಾ’ ಎಂದು ಜಡ್ಜ್ ಕೇಳಿದ ಪ್ರಶ್ನೆಗೆ, ‘ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೇ ಈ ಅರ್ಜಿ ಸಲ್ಲಿಸುತ್ತಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದ ಸತ್ಯವಾದ ಸಂಗತಿಗಳನ್ನು ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ ಎಂದು ಪ್ರದೋಷ್ ತಿಳಿಸಿದರು. ಪ್ರದೋಷ್ ನೀಡಿದ ಎಲ್ಲಾ ವಿವರಣೆಗಳನ್ನು ದಾಖಲಿಸಿಕೊಂಡ ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು, ಪ್ರಕರಣದ ಮುಂದಿನ ಸಾಕ್ಷ್ಯ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿಕೆ ಮಾಡಿದರು.
Key words: Renukaswamy, murder case, Accused, 100% truth, Court
The post ರೇಣುಕಾಸ್ವಾಮಿ ಕೊಲೆ ಕೇಸ್: ಸತ್ಯಸಂಗತಿ ನೂರಕ್ಕೆ ನೂರರಷ್ಟು ಬಹಿರಂಗಪಡಿಸುತ್ತೇನೆ ಎಂದು ಒಪ್ಪಿಕೊಂಡ ಆರೋಪಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




