13
June, 2026

A News 365Times Venture

13
Saturday
June, 2026

A News 365Times Venture

ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಟ್ರಾಫಿಕ್ ಫೈನ್ ಗೆ ಶೇ 50ರಷ್ಟು ಡಿಸ್ಕೌಂಟ್

Date:

ಮೈಸೂರು,ಜೂನ್.5,2026 (www.justkannada.in):  ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೆ ಸಿಹಿಸುದ್ದಿ ನೀಡಿದ್ದು,  ಶೇ 50 ರಿಯಾಯಿತಿಯಲ್ಲಿ ದಂಡವನ್ನು ಪಾವತಿಸಲು ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ  ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರುಗಳಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ಇ- ಚಲನ್‌ ನಲ್ಲಿ ಮೇ -2026 ರ ಮೊದಲು ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡುವಂತೆ ಮೈಸೂರು ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಆದೇಶದಂತೆ ಸಂಚಾರಿ ನಿಯಮಗಳ ಉಲ್ಲಂಘನೆ ಬಗ್ಗೆ ಇ- ಚಲನ್‌ ನಲ್ಲಿ ಮೇ -2026 ರ ಮೊದಲು ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ದಂಡದ ಮೊತ್ತವನ್ನು ದಿನಾಂಕ 21.06.2026 ರಿಂದ 10.07.2026 (ಒಟ್ಟು 20 ದಿನಗಳು) ರವರೆಗೆ ಪಾವತಿಸಲು ಮೇಲ್ಕಂಡ ಉಲ್ಲೇಖದಂತೆ ಸರ್ಕಾರವು ಆದೇಶವನ್ನು ಹೊರಡಿಸಿದೆ.

ಆದ್ದರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸಾರ್ವಜನಿಕರು ಹಾಗೂ ವಾಹನ ಚಾಲಕರುಗಳಿಗೆ ಇ- ಚಲನ್‌ ನಲ್ಲಿ ಮೇ -2026 ರ ಮೊದಲು ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿಲಾಗಿದೆ.

ಈ ದಂಡದ ಮೊತ್ತವನ್ನು ದಿನಾಂಕ 21.06.2026 ರಿಂದ 10.07.2026 ರವರೆಗೆ ಹಾಗೂ ಮೈಸೂರು ಜಿಲ್ಲೆಯ ಯಾವುದೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದಂಡ ಪಾವತಿ ಮಾಡಿಕೊಳ್ಳುವಂತೆ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಕೋರಿಕೊಳ್ಳುತ್ತೇವೆ ಎಂದು ಮೈಸೂರು ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

Key words: Mysore, Good news, motorists, 50% discount, traffic fines

The post ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಟ್ರಾಫಿಕ್ ಫೈನ್ ಗೆ ಶೇ 50ರಷ್ಟು ಡಿಸ್ಕೌಂಟ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರಾಧಿಕಾರದ ಪ್ರಥಮ ದರ್ಜೆ ನೌಕರನಿಗೆ ರೈತನಿಂದ ಚಪ್ಪಲಿಯೇಟು

ಬಾಗಲಕೋಟೆ,ಜೂನ್,13,2026 (www.justkannada.in): ಪರಿಹಾರ ವಿಚಾರದಲ್ಲಿ ತಾರತಮ್ಯ ತೋರಿದ್ದಾರೆಂದು ಆರೋಪಿಸಿ ಪ್ರಥಮದರ್ಜೆ ನೌಕರರೊಬ್ಬರಿಗೆ...

ಕೆ.ಅಣ್ಣಾಮಲೈ ಬಿಜೆಪಿ ತೊರೆದಿರುವುದು ಅದು ಅವರ ನಿರ್ಧಾರ- ರಾಧಾಮೋಹನ್ ದಾಸ್

ಮಂಗಳೂರು,ಜೂನ್,13 2026 (www.justkannada.in):  ಕೆ.ಅಣ್ಣಾಮಲೈ ಬಿಜೆಪಿ ಪಕ್ಷ ತೊರೆದಿರುವುದು ಅದು ಅವರ...

ಡಿಕೆಶಿ ಅವರೇ ಸಿದ್ದರಾಮಯ್ಯರಿಂದ ಹುಷಾರಾಗಿರಿ-MLC ಹೆಚ್.ವಿಶ್ವನಾಥ್

ಬೆಂಗಳೂರು,ಜೂನ್,13,2026 (www.justkannada.in): ಆಗಾಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರುತ್ತಿದ್ದ ಬಿಜೆಪಿ...

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ ಚರ್ಚಿಸಿದ ಸಿಎಂ ಡಿಕೆ ಶಿವಕುಮಾರ್

ನವದೆಹಲಿ,ಜೂನ್,12,2026 (www.justkannada.in):  ದೆಹಲಿಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಷ್ಟ್ರಪತಿ...