ಬೆಂಗಳೂರು,ಜೂನ್,5,2026 (www.justkannada.in): ಸಿಎಂ ಡಿಕೆ ಶಿವಕುಮಾರ್ ಸರ್ಕಾರದಲ್ಲಿ ಖಾತೆ ಹಂಚಿಕೆ ಬಗ್ಗೆ ಸಚಿವರ ಬಹಿರಂಗ ಅಸಮಾಧಾನ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ವಿಕೆಟ್ಟುಗಳೇನೋ ಬೀಳುತ್ತಿವೆ… ಇನ್ನಷ್ಟು ವಿಕೆಟ್ಟುಗಳು ಬೀಳುವ ಲಕ್ಷಣಗಳೂ ಇವೆ…. ಆದರೆ ಈ ವಿಕೆಟ್ಟುಗಳನ್ನು ಉರುಳಿಸುತ್ತಿರುವ ಆ ಸಿದ್ಧಹಸ್ತ ಸ್ಪಿನ್ ಬೌಲರ್ ಯಾರು? ಫೀಲ್ಡಿಂಗ್ ಸೆಟ್ ಮಾಡಿರುವ ನಾಯಕ ಯಾರು? ಎಂದು ಪ್ರಶ್ನಿಸಿ ಕಾಂಗ್ರೆಸ್ ಸರ್ಕಾರದ ಕಾಲೆಳೆದಿದ್ದಾರೆ.
ಆ ಸ್ಪಿನ್ ಬೌಲರ್ ಕೈಚಳಕದಿಂದ ಅವಧಿಗೂ ಮುನ್ನವೇ ಡಿಕೆ ಶಿವಕುಮಾರ್ ಸರ್ಕಾರ ಆಲೌಟ್ ಆದರೂ ಅಚ್ಚರಿ ಇಲ್ಲ! ಎಂದು ಆರ್.ಅಶೋಕ್ ಹೇಳಿದ್ದಾರೆ.
ತಮಗೆ ಬೇಕಾದ ಖಾತೆ ನೀಡದಿರುವುದಕ್ಕೆ ಈಗಾಲೇ ಸಚಿವ ಸ್ಥಾನಕ್ಕೆ ರಾಮಲಿಂಗರೆಡ್ಡಿ ರಾಜೀನಾಮೆ ಕೊಟ್ಟಿದ್ದು ಇತ್ತ ಸಚಿವ ಕೆ.ಎಚ್ ಮುನಿಯಪ್ಪ ಸಹ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.
Key words: Ministers, displeasure, R.Ashok, Tweet
The post ವಿಕೆಟ್ಟು ಉರುಳಿಸುತ್ತಿರುವ ಸಿದ್ಧಹಸ್ತ ಸ್ಪಿನ್ ಬೌಲರ್ ಯಾರು? ಆರ್.ಅಶೋಕ್ ಲೇವಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




