21
March, 2026

A News 365Times Venture

21
Saturday
March, 2026

A News 365Times Venture

ವಿಜೃಂಭಣೆಯಿಂದ ನೆರವೇರಿದ ಬೀರೇಶ್ವರ, ಬಸವೇಶ್ವರರ ಉತ್ಸವ ಮೂರ್ತಿ ಮೆರವಣಿಗೆ

Date:

ಮೈಸೂರು,ಮಾರ್ಚ್, 21,2026 (www.justkannada.in): ಮೈಸೂರು ತಾಲೂಕಿನ ಮೂಡಲಹುಂಡಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಬೀರೇಶ್ವರ, ಬಸವೇಶ್ವರರ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ತಿ.ನರಸೀಪುರದ ತ್ರಿವೆಣಿ ಸಂಗಮ ಕ್ಷೇತ್ರಕ್ಕೆ ಬೀರೇಶ್ವರ, ಬಸವೇಶ್ವರ, ಬನ್ನಿಮಹಾಕಾಳೇಶ್ವರಿ(ಬನ್ನಮ್ಮ) ದೇವರ ಉತ್ಸವ ಮೂರ್ತಿಯನ್ನು ಸಂಪ್ರದಾಯದಂತೆ ಕೊಂಡೊಯ್ದು ಮಜ್ಜನ ಸೇವೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ವರಕೋಡು ಗ್ರಾಮಕ್ಕೆ ತರಲಾಯಿತು. ಗುರುವಾರ ರಾತ್ರಿಯಿಡೀ ವರಕೋಡು ಗ್ರಾಮದಲ್ಲಿ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಮಂಗಳವಾದ್ಯದೊಂದಿಗೆ ನೆರವೇರಿಸಲಾಯಿತು. ಶುಕ್ರವಾರ ಬಡಗಲಹುಂಡಿ, ಕೆಂಪೇಗೌಡನಹುಂಡಿ ಹಾಗೂ ಹೊಸಹುಂಡಿ ಗ್ರಾಮದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು.

ಶುಕ್ರವಾರ ಸಂಜೆ 6.30ರಿಂದ ರಾತ್ರಿ 11.15ರವರೆಗೆ ಮೂಡಲಹುಂಡಿ ಗ್ರಾಮದಲ್ಲಿ ಬೀರೇಶ್ವರ, ಬಸವೇಶ್ವರರ ಉತ್ಸವ ಮೂರ್ತಿ ಹಾಗೂ ಬನ್ನಿಮಹಾಕಾಳೇಶ್ವರಿಯ ಪೂಜಾ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಮೆರವಣಿಗೆಯಲ್ಲಿ ಗ್ರಾಮದ ಕಂಸಾಳೆ ತಂಡ, ವೀರಮಕ್ಕಳ ತಂಡ, ಮಂಗಳವಾದ್ಯ, ತಮಟೆ ಮೇಳ ಜಾತ್ರೆಗೆ ಮೆರಗು ತುಂಬಿದವು. ಈ ವೇಳೆ ಗ್ರಾಮದ ಮಹಿಳೆಯರು ಬೀರೇಶ್ವರ ಹಾಗೂ ಮಲೆ ಮಹದೇಶ್ವರರ ಆರಾಧಿಸುವ ಜಾನಪದ ಗೀತೆ, ಸೋಬಾನೆ ಪದ ಹಾಡುತ್ತಾ ಯುಗಾದಿ ಪೂಜಾ ಮಹೋತ್ಸವಕ್ಕೆ ಕಳೆ ಕಟ್ಟಿದರು. ಬಳಿಕ ದೇವರ ಉತ್ಸವ ಮೂರ್ತಿಯನ್ನು ವರಕೋಡು ಗ್ರಾಮದ ಬೀರೇಶ್ವರ ದೇವಾಲಯಕ್ಕೆ ಕೊಂಡೊಯ್ದು ಇಡುವ ಮೂಲಕ ಯುಗಾದಿ ಜಾತ್ರಾ ಸಂಭ್ರಮಕ್ಕೆ ತೆರೆ ಎಳೆಯಲಾಯಿತು.

Key words: Mysore, Beereshwara Basaveshwara, utsava

The post ವಿಜೃಂಭಣೆಯಿಂದ ನೆರವೇರಿದ ಬೀರೇಶ್ವರ, ಬಸವೇಶ್ವರರ ಉತ್ಸವ ಮೂರ್ತಿ ಮೆರವಣಿಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹೋಟೆಲ್ ಗಳಿಗೆ ಗುಡ್ ನ್ಯೂಸ್: ಹೆಚ್ಚುವರಿ ಸಿಲಿಂಡರ್ ಪೂರೈಕೆಗೆ ಕೇಂದ್ರ ನಿರ್ಧಾರ

ನವದೆಹಲಿ,ಮಾರ್ಚ್,21,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ ಪಿಜಿ ಗ್ಯಾಸ್...

USCIRF ವರದಿ ತಪ್ಪು:  ಭಾರತದಲ್ಲಿ ಮುಸ್ಲಿಮರ ಪ್ರಮಾಣ  9.8% ರಿಂದ 14.2%ಕ್ಕೆ ಏರಿಕೆ.

  ನವದೆಹಲಿ, ಮಾ.21: ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್...

ಕರ್ನಾಟಕ ಜಾಹೀರಾತು ನೀತಿ ಪುನರ್‌ ಪರಿಶೀಲನೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಒತ್ತಾಯ

ಮೈಸೂರು,ಮಾರ್ಚ್.26,2026:  ರಾಜ್ಯ ಸರಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ...

ಫುಟ್ ಪಾತ್ ನಲ್ಲಿ ಟಾಂಗ್ ಸ್ಟ್ಯಾಂಡ್:  ನಿರ್ಧಾರದಿಂದ ಹಿಂದೆ ಸರಿದ ಮೈಸೂರು ಪಾಲಿಕೆ

ಮೈಸೂರು,ಮಾರ್ಚ್,21,2026 (www.justkannada.in): ಮೈಸೂರು ಅರಮನೆ ಸಮೀಪದ ಫುಟ್ ಪಾತ್ ನಲ್ಲಿ ಟಾಂಗ್...