14
May, 2026

A News 365Times Venture

14
Thursday
May, 2026

A News 365Times Venture

ವಿದ್ಯಾರ್ಥಿ ಜೀವನದಲ್ಲಿ ಸಮಯದ ಸದ್ಬಳಕೆಯೇ ಯಶಸ್ಸಿನ ಗುಟ್ಟು: ಪ್ರೊ. ಶರಣಪ್ಪ ವಿ. ಹಲಸೆ

Date:

ಮೈಸೂರು ಮೇ,12,2026 (www.justkannada.in): ವಿದ್ಯಾರ್ಥಿ ಜೀವನವು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಈ ಅವಧಿಯಲ್ಲಿ ಶಿಸ್ತು, ಕಠಿಣ ಪರಿಶ್ರಮ ಮತ್ತು ಸಮಯ ಪ್ರಜ್ಞೆಯನ್ನು ಅಳವಡಿಸಿಕೊಂಡರೆ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ಹೇಳಿದರು.

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ ಕೆ-ಸೆಟ್ ಮತ್ತು ಯುಜಿಸಿ- ನೆಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರವನ್ನು ಕಾವೇರಿ ಸಭಾಂಗಣದಲ್ಲಿ ಉದ್ಘಾಟಿಸಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮೂರು ‘T’ ಸೂತ್ರಗಳನ್ನು ಅಳವಡಿಸಿ ಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು  (Try for Better Future)ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನಿರಂತರವಾಗಿ ಪ್ರಯತ್ನಿಸಿ, (Trust Yourself) ನಿಮ್ಮ ಮೇಲೆ ನಿಮಗೆ ಮೊದಲು ನಂಬಿಕೆ ಇರಲಿ. ಸೋಲುಗಳಿಗೆ ಎದೆಗುಂದದೆ ಗುರಿಯತ್ತ ಸಾಗಿ, (True for Your Work) ನೀವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ದಿನಕ್ಕೆ 24 ಗಂಟೆಯೇ ಇರುತ್ತದೆ. ಆ ಸಮಯವನ್ನು ಯಾರು ಹೇಗೆ ವಿವೇಚನೆಯಿಂದ ಬಳಸಿಕೊಳ್ಳುತ್ತಾರೆ ಎಂಬುದು ಅವರ ಯಶಸ್ಸನ್ನು ನಿರ್ಧರಿಸುತ್ತದೆ. ಛಲ ಇರಲಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಇರಬೇಕು. ಬರೀ ಮನೋರಂಜನೆಗೆ ಅಂಟಿಕೊಳ್ಳದೆ, ಓದು ಮತ್ತು ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ಕುಲಪತಿ ಪ್ರೋ. ಬಿ.ಕೆ ರವಿ ಅವರು ಮಾತನಾಡಿ, ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ಹೇರಳವಾಗಿವೆ. ಆದರೆ, ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಯಾವ ಅಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ಸರಿಯಾದ ಮಾರ್ಗದರ್ಶನ ಯಶಸ್ಸಿಗೆ ಅತಿ ಮುಖ್ಯ  ಎಂದು ಹೇಳಿದರು.

ವಿಷಯದ ಮೇಲೆ ಪಾಂಡಿತ್ಯವಿದ್ದರೂ ಸಹ, ಪರೀಕ್ಷೆಯಲ್ಲಿ ಅದನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬ ಕಮ್ಯುನಿಕೇಶನ್ ಸ್ಕಿಲ್ಸ್ (ಸಂವಹನ ಕೌಶಲ) ವಿದ್ಯಾರ್ಥಿಗಳಿಗೆ ಸಿದ್ಧಿಸಿರಬೇಕು. ಕೇವಲ ಓದಿನಿಂದ ಮಾತ್ರವಲ್ಲದೆ, ಪರೀಕ್ಷಾ ತಂತ್ರಗಳನ್ನು ಅರಿಯುವುದರಿಂದ ಯಶಸ್ಸು ಸಾಧ್ಯ ಎಂದರು.

ಆಡಳಿತ ತರಬೇತಿಯ ಸಂಸ್ಥೆಯ ಜಂಟಿ ನಿರ್ದೇಶಕ ಸತ್ಯ ಶ್ರೀ ಆರ್ ಅವರು ಮಾತನಾಡಿ,  ಸಮಯದ ನಿರ್ವಹಣೆಯೇ ಯಶಸ್ಸಿನ ಮೆಟ್ಟಿಲು ಪ್ರತಿಯೊಬ್ಬ ವ್ಯಕ್ತಿಗೂ ದಿನದ 24 ಗಂಟೆಗಳು ಸಮಾನವಾಗಿರುತ್ತವೆ. ಆದರೆ ಯಾರು ಆ ಸಮಯವನ್ನು ಶಿಸ್ತಿನಿಂದ ಬಳಸಿಕೊಳ್ಳುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿಗಳು ಮೊಬೈಲ್ ಮತ್ತು ಅನಗತ್ಯ ವಿಷಯಗಳಿಗೆ ಸಮಯ ವ್ಯಯಿಸದೆ, ತಮ್ಮ ಪಠ್ಯ ಮತ್ತು ಕೌಶಲ್ಯದ ಅಭಿವೃದ್ಧಿಗೆ ಸಮಯ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್.ಕೆ. ಪರೀಕ್ಷಾಂಗ ಕುಲಸಚಿವ ಡಾ. ಸಿ.ಎಸ್. ಆನಂದಕುಮಾರ್, ಶೈಕ್ಷಣಿಕ ಡೀನ್ ಪ್ರೊ. ಎಂ. ರಮಾನಾಥಂ ನಾಯ್ಡು, ಅಧ್ಯಯನ ಕೇಂದ್ರದ ಡೀನ್ ಡಾ. ಎನ್. ಆರ್. ಚಂದ್ರೇಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ನಾರಾಯಣಗೌಡ  ಮತ್ತಿತರರು ಉಪಸ್ಥಿತರಿದ್ದರು.

Key words:  secret, success, student, KSOU, Prof. Sharanappa V. Halase

The post ವಿದ್ಯಾರ್ಥಿ ಜೀವನದಲ್ಲಿ ಸಮಯದ ಸದ್ಬಳಕೆಯೇ ಯಶಸ್ಸಿನ ಗುಟ್ಟು: ಪ್ರೊ. ಶರಣಪ್ಪ ವಿ. ಹಲಸೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಪ್ರತಿಭೆಯೇ ರಾಷ್ಟ್ರದ ಭವಿಷ್ಯದ ಶಕ್ತಿ : ಡಾ.ಈ.ಸಿ.ನಿಂಗರಾಜ್ ಗೌಡ.

ಮೈಸೂರು,ಮೇ,13,2026 (www.justkannada.in): ಶಿಕ್ಷಣವೇ ಸಮಾಜದ ಪ್ರಗತಿಯ ಅಡಿಪಾಯ, ಈಗಿನ ವಿದ್ಯಾರ್ಥಿಗಳ ಪ್ರತಿಭೆಯೇ...

ದೇಶದ ಮಕ್ಕಳ ಭವಿಷ್ಯಕ್ಕೆ ಸೆಕ್ಯೂರಿಟಿ ಬೇಡವಾ? ಕೇಂದ್ರದ ವಿರುದ್ದ ಸಚಿವ ಮಧು ಬಂಗಾರಪ್ಪ ಗುಡುಗು

ಬೆಂಗಳೂರು,ಮೇ,13,2026 (www.justkannada.in):  ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ  ಮೇ 3 ರಂದು ನಡೆದಿದ್ದ ನೀಟ್...

ನೀಟ್ ಜವಾಬ್ದಾರಿ ರಾಜ್ಯಗಳಿಗೆ ನೀಡಿ, ನಾವೇ ಪರೀಕ್ಷೆ ಮಾಡ್ತೇವೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮೇ,13,2026 (www.justkannada.in): ರಾಜಸ್ತಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ...

ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ; ರಕ್ಷಕರೇ ಭಕ್ಷಕರಾದರೇ ಸಿದ್ದರಾಮಯ್ಯನವರೇ? ಆರ್.ಅಶೋಕ್ ಕಿಡಿ

ಬೆಂಗಳೂರು,ಮೇ,13,2026 (www.justkannada.in): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕರ್ನಾಟಕದಲ್ಲಿ ಇಂದು...