ಬೆಂಗಳೂರು,ಜುಲೈ,30,2025 (www.justkannada.in): ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರ ಜೊತೆ ಸಭೆ ನಡೆಸಿ ಚರ್ಚಿಸುತ್ತಿದ್ದು ಈ ಮಧ್ಯೆ ವಿರೋಧ ಪಕ್ಷದ ಶಾಸಕರ ಜೊತೆ ಸಭೆಗೆ ಮುಂದಾಗಿಲ್ಲ ಎಂಬ ಆರೋಪ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ವಿಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಿದ್ದಾರೆ. ಹೊಟ್ಟೆ ಕಿಚ್ಚಿಗೆ ಹೀಗೆ ವಿರೋಧ ಪಕ್ಷದವರು ಹೇಳ್ತಾರೆ ಎಂದು ಕಿಡಿಕಾರಿದರು.
ಕ್ಷೇತ್ರದ ಸಮಸ್ಯೆಗೆ ಸ್ಪಂದನೆ ವಿಚಾರವಾಗಿ ಸಭೆ ನಡೆಯಲಿದೆ. ಶಿಕ್ಷಣ ಮೂಲಸೌಕರ್ಯ ಆರೋಗ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಸಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಅನುಂಭ ಮಂಟಪ ಪೂರ್ಣಗೊಳಿಸುವ ಬಗ್ಗೆ ಚರ್ಚಿಯಾಗುತ್ತೆ. ಉಳಿದಿರುವ ಅವಧಿಯಲ್ಲಿ ಎಲ್ಲಾ ಭರವಸೆ ಈಡೇರಿಸಲಿದ್ದೇವೆ. ಸಿಎಂ ಸಿದ್ದರಾಮಯ್ಯಗೆ ಬೀದರ್ ಜಿಲ್ಲೆ ಬಗ್ಗೆಅಪಾರ ಪ್ರೀತಿ ಎಂದರು.
Key words: CM Siddaramaiah, Meeting, Minister, Ishwar Khandre
The post ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡ್ತಿದ್ದಾರೆ- ಸಚಿವ ಈಶ್ವರ್ ಖಂಡ್ರೆ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.