ಮೈಸೂರು,ಜೂನ್,24,2025 (www.justkannada.in): ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ವಸತಿ ಸಚಿವ ಜಮೀರ್ ಖಾನ್ ಅಕ್ರಮ ರೆಸಾರ್ಟ್ ಹೊಂದಿದ್ದಾರೆ. ಇವರ ಬೆಂಬಲಿಗರು, ಆಪ್ತರ ಹೆಸರಿನಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಮೋಹನ್ ಆರೋಪಿಸಿದ್ದಾರೆ.
ಎಚ್.ಡಿ ಕೋಟೆ ಕಬಿನಿ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೋಹನ್, ನಿಷೇಧಿತ ಅರಣ್ಯ ಪ್ರದೇಶದಲ್ಲಿ ಸಚಿವ ಜಮೀರ್ ಅಕ್ರಮ ವಸತಿಗಳ ನಿರ್ಮಾಣ ಮಾಡಿದ್ದಾರೆ. ಜಮೀರ್ ಅಹಮದ್ ಖಾನ್ ಪಿಎ ಸರ್ಫರಾಜ್ ಮತ್ತು ಅವರ ಆಪ್ತರ ಹೆಸರಿನಲ್ಲಿ ರೆಸಾರ್ಟ್ ತೆರೆದಿದ್ದಾರೆ. ಡಿ ದರ್ಜೆ ಗುಮಾಸ್ತ ಸರ್ಫರಾಜ್ ಕಳೆದ 25 ವರ್ಷದಿಂದ ಜಮೀರ್ ಜೊತೆ ಇದ್ದಾರೆ. ಹೆಚ್ ಡಿ ಕೋಟೆ 4 ಡ್ಯಾಮ್ ಗಳು ಇರುವ ತಾಲೂಕು. ಜೀವ ವೈವಿದ್ಯಗಳಿರುವ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಬಂಡಿಪುರ, ನಾಗರಹೊಳೆ ಒಂದುಗೂಡುವ ಪ್ರದೇಶವಾಗಿದೆ. ಇಂತಹ ಪ್ರದೇಶದಲ್ಲಿ ಹಲವು ಅಕ್ರಮ ರೆಸಾರ್ಟ್ ತಲೆ ಎತ್ತಿವೆ. ಅರಣ್ಯ ಇಲಾಖೆ ನೀತಿ ನಿಯಮಗಳ ಗಾಳಿಗೆ ತೂರಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.
ಸರ್ಫರಾಜ್ ಸರಕಾರಿ ನೌಕರನಾಗಿ ಬಿಜಿನೆಸ್ ಮಾಡುತಿದ್ದಾನೆ. ಒಬ್ಬ ಡಿ ಗ್ರೂಪ್ ನೌಕರ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ ರೆಸಾರ್ಟ್ ಮಾಡಲಿಕ್ಕೆ ಹೇಗೆ ಸಾಧ್ಯ.? ಇದರ ಹಿಂದೆ ಜಮೀರ್ ಅಹಮದ್ ಅವರು ಇದ್ದಾರೆ. 2015ಲ್ಲಿ ಟೂರಿಸಮ್ ಪಾಲಿಸಿ ಪ್ರಕಾರ ಅತಿಥಿ ಸ್ಕೀಮ್ ನಲ್ಲಿ ಹಿಂದು ಸ್ಟೇ ಅನ್ನು ರೈತರು ಮಾಡಲು ಅವಕಾಶ ಇದೆ. ರೈತ ತಾನು ವಾಸ ಇದ್ದು ಜೊತೆಗೆ 4 ಎಕ್ಸ್ಟ್ರಾ ರೂಮ್ ಮಾಡಿ ಆ ರೈತನೇ ಅದನ್ನು ಮೆಂಟೇನ್ ಮಾಡಬೇಕು ಎಂಬ ನಿಯಮ ಇದೆ. ಆದರೆ ರೆಸಾರ್ಟ್ ನಲ್ಲಿ 20 ಕ್ಕೂ ಹೆಚ್ಚು ರೂಮ್ ಇವೆ. ಸರ್ಫರಾಜ್ ಹೆಡ್ ಕ್ವಾಟರ್ ಬೆಂಗಳೂರು. ಇಲ್ಲಿ ಹೇಗೆ ಮೆಂಟೇನ್ ಮಾಡಲು ಸಾಧ್ಯ. ಅದನ್ನು ನೋಡಿಕೊಳ್ಳಲು ಒಬ್ಬ ಮೌಲ್ವಿ ಇದ್ದಾನೆ. ಒಬ್ಬ ಅತಿಥಿಗೆ 25000 ಚಾರ್ಜ್ ಮಾಡುತ್ತಾರೆ. ಆ ರೆಸಾರ್ಟ್ ಪಕ್ಕದಲ್ಲೇ ಸರ್ಫರಾಜ್ ಪರ್ಸನಲ್ ಡ್ರೈವರ್ 4 ಎಕೆರೆ ಜಾಗದಲ್ಲಿ 100 ಕೋಟಿ ಇನ್ವೆಸ್ಟ್ ಮಾಡಿ ದೊಡ್ಡ ಬಿಲ್ಡಿಂಗ್ ಕಟ್ಟುತಿದ್ದಾರೆ. ಒಬ್ಬ ಡ್ರೈವರ್ ಇಷ್ಟು ಇನ್ವೆಸ್ಟ್ ಮಾಡಲು ಸಾಧ್ಯವೇ ಎಂದು ಮೋಹನ್ ಪ್ರಶ್ನಿಸಿದರು.
ಈ ರೀತಿಯ ಮಿಸ್ಸಿಂಗ್ ಲಿಂಕ್ ಗೆ ನಮಗೆ ಲಿಂಕ್ ಬೇಕು. ಅಲ್ಲಿ ಒಂದು C l7 ಬಾರ್ ಇದೆ. C l7 ರಲ್ಲಿ ಬೇರೆ ಕಡೆ ಪಾರ್ಸಲ್ ಕೊಡುವ ಹಾಗಿಲ್ಲ. ಆದರೆ ರಾತ್ರಿ 11 ಗಂಟೆಯವರೆಗೆ ಓಪನ್ ಇರುತ್ತೆ. ಇದೆಲ್ಲ ಜಮೀರ್ ಅಹಮದ್ ಕೈವಾಡ ಇಲ್ಲದೆ ನಡೆಯೋದಿಲ್ಲ. 15 ದಿನಕ್ಕೊಮ್ಮೆ ರೆಸಾರ್ಟ್ ಗೆ ಜಮೀರ್ ಬರುತ್ತಾರೆ. ಬಂದು ಎಲ್ಲಾ ರೈತರಿಗೆ ದುಡ್ಡನ್ನು ಕಡ್ಲೆಪುರಿ ಹಂಚಿದ ಹಾಗೇ ಹಂಚುತ್ತಾರೆ. ಕಾಡಂಚಿನಲ್ಲಿ ಬೃಹತ್ ಕಟ್ಟಡ ಕಟ್ಟಲು ಅನುಮತಿ ಕೊಟ್ಟವರು ಯಾರು? ಎಂದು ಮೋಹನ್ ಕಿಡಿಕಾರಿದರು.
ಇವುಗಳ ಹತ್ತಿರ ಇನ್ನೊಂದು ರೆಸಾರ್ಟ್ ಕಾಂಗ್ರೆಸ್ ಸಚಿವರಾದ ಸತೀಶ್ ಜಾರಕಿಹೊಳಿ ಸಂಬಂಧಿಕರ ಹೆಸರಲ್ಲಿ ಇದೆ ಎಂದು ಮಾಹಿತಿ ಇದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಸತ್ಯ ಶೋಧನೆ ಸಮಿತಿ ಮಾಡುತ್ತೇವೆ. ಈ ಬಗ್ಗೆ ನಮ್ಮ ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಅಕ್ರಮ ರೆಸಾರ್ಟ್ ಇರುವಲ್ಲಿಗೆ ಮಾಧ್ಯಮ ಪ್ರತಿನಿಧಿಗಳನ್ನ ಕರೆದುಕೊಂಡು ಹೋಗಿ ವಾಸ್ತವಾಂಶ ಪರಿಶೀಲನೆ ಮಾಡುತ್ತೇವೆ. ಈ ಸರಕಾರದಲ್ಲಿ ಅಕ್ರಮಗಳ ಸರಮಾಲೆ ನಡೆಯುತ್ತಿದೆ. ಸಾವಿಲ್ಲದ ಮನೆ ಸಾಸಿವೆ ಇಲ್ಲ ಎನ್ನುವ ಹಾಗೇ ಈ ಸರಕಾರದಲ್ಲಿ ಭ್ರಷ್ಟಚಾರ ಇಲ್ಲದ ಇಲಾಖೆ ಇಲ್ಲ. ಅಕ್ರಮ ರೆಸಾರ್ಟ್ ನಿರ್ಮಾಣದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ದಾಖಲೆ ಸಮೇತ ಲೋಕಾಯುಕ್ತ ಎಸ್ ಪಿ ಉದೇಶ್ ಗೆ ಕೊಟ್ಟಿದ್ದೇವೆ. ಆದರೆ ಕ್ರಮ ವಹಿಸಲು ತಾಕತ್ತು ಇಲ್ಲ. ಅಕ್ರಮ ರೆಸಾರ್ಟ್ ಗಳಲ್ಲಿ ಸಚಿವ ಜಮೀರ್ ಅಹಮದ್ ಬಂಡವಾಳ ಹೂಡಿಕೆ ಇದೆ. ಸರ್ಕಾರದ ಹಣವನ್ನ ಇಲ್ಲಿಗೆ ತಂದು ಹಾಕುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮಗಳ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಜಿಲ್ಲಾ ವಕ್ತಾರ ಮೋಹನ್ ಆಗ್ರಹಿಸಿದರು.
Key words: Mysore, Illegal Resort , Minister, Jameer, BJP , spokesman, Mohan
The post ಸಚಿವ ಜಮೀರ್ ರಿಂದ ಅಕ್ರಮ ರೆಸಾರ್ಟ್: ನೂರಾರು ಕೋಟಿ ಹೂಡಿಕೆ- ಬಿಜೆಪಿ ನಗರ ವಕ್ತಾರ ಮೋಹನ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




